ಪಿಎಂಇಂಡಿಯಾ
ಗ್ಲಾಸ್ಗೊದಲ್ಲಿ ನಡೆದ 2026ರ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ 80 ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅಂಕುಶ್ ಪಂಗಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಸ್ಪರ್ಧೆಯುದ್ದಕ್ಕೂ ಪ್ರದರ್ಶಿಸಿದ ಅಂಕುಶ್ ಪಂಗಲ್ ಅವರ ಶಕ್ತಿ ಮತ್ತು ಕೌಶಲ್ಯವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಶ್ರೀ ನರೇಂದ್ರ ಮೋದಿ ಅವರು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು ಮತ್ತು ಅವರ ಸಾಧನೆಯು ಇನ್ನೂ ಅನೇಕ ಯುವ ಬಾಕ್ಸರ್ ಗಳಿಗೆ ಶ್ರೇಷ್ಠತೆಯನ್ನು ಮುಂದುವರಿಸಲು ಪ್ರೇರೇಪಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“2026 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 80 ಕೆ.ಜಿ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅಂಕುಶ್ ಪಂಗಲ್ ಬಗ್ಗೆ ಹೆಮ್ಮೆಯಿದೆ. ಕ್ರೀಡಾಕೂಟದ ಸಮಯದಲ್ಲಿ ಅವರ ಶಕ್ತಿ ಮತ್ತು ಕೌಶಲ್ಯ ನಿಜವಾಗಿಯೂ ಶ್ಲಾಘನೀಯವಾಗಿತ್ತು. ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಕೆಗಳು. ಈ ಸಾಧನೆಯು ಇನ್ನೂ ಅನೇಕ ಯುವ ಬಾಕ್ಸರ್ ಗಳಿಗೆ ಉತ್ಕೃಷ್ಟತೆಯನ್ನು ಮುಂದುವರಿಸಲು ಸ್ಫೂರ್ತಿ ನೀಡಲಿ.
#CWG2026″
*****
Proud of Ankush Panghal for winning the Gold Medal in the Men’s 80 kg Boxing category at the 2026 Commonwealth Games. His strength and skill were truly commendable during the games. Best wishes for his upcoming endeavours. May this feat inspire many more young boxers to pursue…
— Narendra Modi (@narendramodi) August 2, 2026