ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಯಾವುದೇ ಮನುಷ್ಯನು ಒಂದೇ ಕ್ಷಣವೂ ಏನನ್ನೂ ಮಾಡದೆ (ಕರ್ಮ ಮಾಡದೆ) ಇರಲು ಸಾಧ್ಯವಿಲ್ಲ; ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಳೆಯಬೇಕು ಎಂದು ಅವರು ಒತ್ತಿ ಹೇಳಲಾಗಿದೆ.
ಪ್ರಧಾನಮಂತ್ರಿ ಅವರು ತಮ್ಮ ‘X’ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“न हि कश्चित्क्षणमपि जातु तिष्ठत्यकर्मकृत्।
कार्यते ह्यवशः कर्म सर्वः प्रकृतिजैर्गुणैः॥”
ಈ ಸೃಷ್ಟಿಯಲ್ಲಿರುವ ಯಾವೊಬ್ಬ ಮನುಷ್ಯನೂ ಒಂದೇ ಒಂದು ಕ್ಷಣವೂ ಏನನ್ನೂ ಮಾಡದೆ ಸುಮ್ಮನಿರಲು ಸಾಧ್ಯವಿಲ್ಲ. ಪ್ರಕೃತಿಯ ಸಹಜ ಗುಣಗಳು ಮತ್ತು ವ್ಯಕ್ತಿಯ ಸ್ವಭಾವವು ಪ್ರತಿಯೊಬ್ಬರನ್ನೂ ನಿರಂತರವಾಗಿ ಕಾರ್ಯಪ್ರವೃತ್ತರನ್ನಾಗಿಸುತ್ತವೆ; ಆದ್ದರಿಂದ, ನಾವು ನಮ್ಮ ಜೀವನವನ್ನು ಸದಾ ಉದಾತ್ತ ಮತ್ತು ಸಕಾರಾತ್ಮಕ ಕಾರ್ಯಗಳನ್ನು ಮಾಡುತ್ತಾ ಕಳೆಯಬೇಕು.
*****
न हि कश्चित्क्षणमपि जातु तिष्ठत्यकर्मकृत्। कार्यते ह्यवशः कर्म सर्वः प्रकृतिजैर्गुणैः॥ https://t.co/moHujtlBoi
— Narendra Modi (@narendramodi) November 16, 2026