Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬುಡಕಟ್ಟು ವಿದ್ಯಾರ್ಥಿಗಳನ್ನು ಸಬಲಗೊಳಿಸುವಲ್ಲಿ ‘ಏಕಲವ್ಯ ಮಾದರಿ ವಸತಿ ಶಾಲೆ’ಗಳ ಪಾತ್ರವನ್ನು ವಿವರಿಸಿರುವ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಪರಾಷ್ಟ್ರಪತಿ ಶ್ರೀ ಸಿ ಪಿ ರಾಧಾಕೃಷ್ಣನ್ ಅವರು ಬರೆದಿರುವ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.

ಏಕಲವ್ಯ ಮಾದರಿ ವಸತಿ ಶಾಲೆ (ಇ ಎಂ ಆರ್ ಎಸ್) ಗಳ ವಿಕಾಸ ಹಾಗೂ ಗುಣಮಟ್ಟದ ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಯ ಮೂಲಕ ಬುಡಕಟ್ಟು ಮಕ್ಕಳಿಗಾಗಿ ಹೊಸ ಅವಕಾಶಗಳನ್ನು ಸೃಜಿಸುವಲ್ಲಿ ಅವು ವಹಿಸಿರುವ ಪಾತ್ರವನ್ನು ಈ ಲೇಖನ ವಿವರಿಸಿದೆ. ಐಐಟಿಗಳು, ಎಐಐಎಂಎಸ್ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಾಧನೆಗಳ ಜೊತೆಗೆ ಸೇತುಬಂಧ ತರಗತಿಗಳು, ದ್ವಿಭಾಷಾ ಬೋಧನೆ, ತಂತ್ರಜ್ಞಾನ-ಸಹಿತ ತರಗತಿ ಕೊಠಡಿಗಳು, ಕ್ರೀಡೆ ಮತ್ತು ವೃತ್ತಿಪರ ತರಬೇತಿಯಂತಹ ಪ್ರಮುಖ ಉಪಕ್ರಮಗಳ ಬಗ್ಗೆಯೂ ಲೇಖನ ತಿಳಿಸಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ: 

“ಏಕಲವ್ಯ ಮಾದರಿ ವಸತಿ ಶಾಲೆಗಳು ಗುಣಮಟ್ಟದ ಶಿಕ್ಷಣದ ಮೂಲಕ ಬುಡಕಟ್ಟು ಮಕ್ಕಳಿಗಾಗಿ ಹೊಸ ಅವಕಾಶಗಳನ್ನು ಸೃಜಿಸುತ್ತಿವೆ.
‘ಜನ್ ಜಾತೀಯ ಗೌರವ ದಿವಸ’ದ ಅಂಗವಾಗಿ ಮಾನ್ಯ ಉಪರಾಷ್ಟ್ರಪತಿ (@VPIndia) ಶ್ರೀ @CPR_VP ಅವರು, ಏಕಲವ್ಯ ಮಾದರಿ ವಸತಿ ಶಾಲೆಗಳ (ಇ ಎಂ ಆರ್ ಎಸ್) ವಿಕಾಸ ಹಾಗೂ ಬುಡಕಟ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಅವು ವಹಿಸಿರುವ ಪಾತ್ರದ ಬಗ್ಗೆ ಬರೆದಿದ್ದಾರೆ.

ಸೇತುಬಂಧ ತರಗತಿಗಳು (ಬ್ರಿಡ್ಜ್ ಕೋರ್ಸ್ ಗಳು), ದ್ವಿಭಾಷಾ ಬೋಧನೆ, ತಂತ್ರಜ್ಞಾನ-ಸಜ್ಜಿತ ತರಗತಿ ಕೊಠಡಿಗಳು, ಕ್ರೀಡೆ ಮತ್ತು ವೃತ್ತಿಪರ ತರಬೇತಿಯಂತಹ ಉಪಕ್ರಮಗಳು ಹಾಗೂ ಐಐಟಿ ಗಳು, ಎಐಐಎಂಎಸ್ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಾಧನೆಗಳನ್ನೂ ಅವರು ವಿವರಿಸಿದ್ದಾರೆ.

ಓದಲೇಬೇಕಾದ ಲೇಖನ!”

 

*****