ಪಿಎಂಇಂಡಿಯಾ
ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟ 2026 ರ ಪುರುಷರ ಶಾಟ್ ಪುಟ್ ಎಫ್ 57 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಶುಭಂ ಜುಯಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಶುಭಂ ಜುಯಾಲ್ ಅವರ ಶಕ್ತಿಯುತ ತಂತ್ರ ಮತ್ತು ಕ್ರೀಡೆಗೆ ಬದ್ಧತೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಈ ಸಾಧನೆಯು ತಮ್ಮನ್ನು ಇನ್ನೂ ಹೆಚ್ಚಿನ ಸಾಧನೆಗಳತ್ತ ಮುನ್ನಡೆಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಶ್ರೀ ನರೇಂದ್ರ ಮೋದಿ ಅವರು, ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಶಾಟ್ ಪುಟ್ ಎಫ್ 57 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಶುಭಂ ಜುಯಾಲ್ ಅವರ ಬಗ್ಗೆ ಅಪಾರ ಹೆಮ್ಮೆಪಡುತ್ತೇನೆ. ಅವರ ಪ್ರಬಲ ತಂತ್ರ ಮತ್ತು ಕ್ರೀಡೆಯ ಬಗೆಗಿನ ಬದ್ಧತೆ ಶ್ಲಾಘನೀಯ. ಈ ಸಾಧನೆಯು ಅವರ ನಂತರದ ಪ್ರಯತ್ನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳತ್ತ ಅವರನ್ನು ಮುನ್ನಡೆಸಲಿ.
#CWG2026″
*****
Immensely proud of Shubham Juyal for bringing home a Silver Medal in the Men’s Shot Put F57 event at the Commonwealth Games. His powerful technique and commitment to the sport are admirable. May this feat propel him towards even greater accomplishments in his subsequent…
— Narendra Modi (@narendramodi) August 1, 2026