Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದಾದ ಕೈಮಗ್ಗವನ್ನು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ರಾಷ್ಟ್ರೀಯ ಕೈಮಗ್ಗ ದಿನದಂದು ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಈ ಲೇಖನವು ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದಾದ ಕೈಮಗ್ಗವನ್ನು ಮತ್ತು ಭಾರತೀಯ ಜವಳಿಗಳ ಅಸಂಖ್ಯಾತ ಪ್ರಾದೇಶಿಕ ಸಂಪ್ರದಾಯಗಳನ್ನು ಉಲ್ಲೇಖಿಸುತ್ತದೆ.

“ಭಾರತದ ಯುವಕರು ಭಾರತೀಯ ಪರಂಪರೆ ಮತ್ತು ತಂತ್ರಜ್ಞಾನ, ಸೃಜನಶೀಲತೆ ಮತ್ತು ಉದ್ಯಮವನ್ನು ಒಟ್ಟುಗೂಡಿಸಲು, ಕೈಮಗ್ಗ ಕ್ಷೇತ್ರದ ಮುಂದಿನ ಅಧ್ಯಾಯವನ್ನು ರೂಪಿಸಲು, ಆ ಮೂಲಕ ನೇಕಾರರ ಜೀವನೋಪಾಯವನ್ನು ಬಲಪಡಿಸಲು ಸಚಿವರು ಲೇಖನದ ಮೂಲಕ ಕರೆ ನೀಡಿದ್ದಾರೆ” ಎಂದು ಶ್ರೀ ಮೋದಿ ಅವರು ಹೇಳಿದರು.

ಎಕ್ಸ್‌ ತಾಣದಲ್ಲಿ ಶ್ರೀ ಮೋದಿ ಅವರು ಹೀಗೆ ಪೋಸ್ಟ್ ಮಾಡಿದ್ದಾರೆ:

ಭಾರತವು ಇಂದು #NationalHandloomDay ಆಚರಿಸುತ್ತಿರುವಾಗ, ಕೇಂದ್ರ ಸಚಿವರಾದ ಶ್ರೀ @girirajsinghbjp ಅವರು ಕೈಮಗ್ಗವನ್ನು ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದು ಎಂದು ಶ್ಲಾಘಿಸಿದ್ದಾರೆ, ಭಾರತೀಯ ಜವಳಿಗಳ ಅಸಂಖ್ಯಾತ ಪ್ರಾದೇಶಿಕ ಸಂಪ್ರದಾಯಗಳನ್ನು ಅವರು ಉಲ್ಲೇಖಿಸಿದ್ದಾರೆ.

ಭಾರತದ ಯುವಕರು ಪರಂಪರೆ ಮತ್ತು ತಂತ್ರಜ್ಞಾನ, ಸೃಜನಶೀಲತೆ ಮತ್ತು ಉದ್ಯಮವನ್ನು ಒಟ್ಟುಗೂಡಿಸಲು, ಕೈಮಗ್ಗದ ಮುಂದಿನ ಅಧ್ಯಾಯವನ್ನು ರೂಪಿಸಲು, ಆ ಮೂಲಕ ನೇಕಾರರ ಜೀವನೋಪಾಯವನ್ನು ಬಲಪಡಿಸಲು ಕರೆ ನೀಡಿದ್ದಾರೆ.

 

*****