ಪಿಎಂಇಂಡಿಯಾ
ಭಾರತದ ಶ್ರೀಮಂತ ಹಾಗೂ ವೈವಿಧ್ಯಮಯ ಕೈಮಗ್ಗ ಪರಂಪರೆಯನ್ನು ಉತ್ತೇಜಿಸುವ ಮೂಲಕ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
“ನಿಮ್ಮ ಮೆಚ್ಚಿನ ಕೈಮಗ್ಗ ಉತ್ಪನ್ನಗಳೊಂದಿಗೆ, ಸೋಷಿಯಲ್ ಮೀಡಿಯಾಗಳಲ್ಲಿ GRWM ವಿಡಿಯೊಗಳನ್ನು ಒಳಗೊಂಡ ನಿಮ್ಮ ವಿಡಿಯೊಗಳನ್ನು ಹಂಚಿಕೊಳ್ಳಿ” ಎಂದು ಶ್ರೀ ಮೋದಿ ಅವರು ಕರೆ ನೀಡಿದ್ದಾರೆ.
ಪ್ರಧಾನಮಂತ್ರಿ ಅವರು ‘ಎಕ್ಸ್’ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ;
ನಾಳೆ, ಆಗಸ್ಟ್ 7 ರಾಷ್ಟ್ರೀಯ ಕೈಮಗ್ಗ ದಿನ. ಭಾರತದ ಕೈಮಗ್ಗದ ವೈವಿಧ್ಯತೆಯನ್ನು ಜನಪ್ರಿಯಗೊಳಿಸೋಣ.
ನಿಮ್ಮ ಮೆಚ್ಚಿನ ಕೈಮಗ್ಗ ಉತ್ಪನ್ನಗಳೊಂದಿಗೆ, ಸಾಮಾಜಿಕ ಮಾಧ್ಯಮಗಳಲ್ಲಿ GRWM ವಿಡಿಯೊಗಳನ್ನು ಒಳಗೊಂಡಂತೆ ನಿಮ್ಮ ವಿಡಿಯೊಗಳನ್ನು ಹಂಚಿಕೊಳ್ಳಿ.
#NationalHandloomDay ಹ್ಯಾಶ್ ಟ್ಯಾಗ್ ಬಳಸಲು ಮರೆಯಬೇಡಿ.”
*****
Tomorrow, 7th August is National Handloom Day. Let’s make India’s handloom diversity popular.
— Narendra Modi (@narendramodi) August 6, 2026
Share your videos with your favourite handloom products, including GRWM videos on social media.
Don’t forget to use #NationalHandloomDay. pic.twitter.com/zoFdTXphRL