ಪಿಎಂಇಂಡಿಯಾ
ಮಾಜಿ ರಾಷ್ಟ್ರಪತಿಯವರಾದ ಶ್ರೀ ರಾಮ್ ನಾಥ್ ಕೋವಿಂದ್ ಅವರ ಆತ್ಮಚರಿತ್ರೆಯಾದ ‘ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್’ ನ ಬಿಡುಗಡೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಭಾಷಣದ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕದ ಮೂಲ ವಿಷಯವನ್ನು ಒತ್ತಿ ಹೇಳಿದ ಅವರು, ಶ್ರೀ ಕೋವಿಂದ್ ಅವರ ಸ್ಪೂರ್ತಿದಾಯಕ ಹೋರಾಟಗಳು, ವಿವಿಧ ಪಾತ್ರ / ಪದವಿಗಳಲ್ಲಿ ಅವರು ನೀಡಿದ ಶ್ರೀಮಂತ ಕೊಡುಗೆಗಳು ಮತ್ತು ಸಾರ್ವಜನಿಕ ಸೇವೆಗೆ ಅವರ ಆಳವಾದ ಬದ್ಧತೆಯನ್ನು ಇದು ಅದ್ಭುತವಾಗಿ ಉಲ್ಲೇಖಿಸುತ್ತದೆ, ಇದು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿ ನಿಂತು ರಾಷ್ಟ್ರದ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
Xನ ಸರಣಿ ಪೋಸ್ಟ್ಗಳಲ್ಲಿ ಪ್ರಧಾನಮಂತ್ರಿಯವರು:
“ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಆತ್ಮಚರಿತ್ರೆಯಾದ ‘ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್’ ಬಿಡುಗಡೆಯಲ್ಲಿ ಭಾಗವಹಿಸಿದ್ದು ನನಗೆ ಸಂತೋಷತಂದಿದೆ. ಈ ಪುಸ್ತಕವು ಭಾರತೀಯ ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಪ್ರತಿಬಿಂಬಿಸುತ್ತದೆ.”
“ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಪುಸ್ತಕವು ಸ್ಪೂರ್ತಿದಾಯಕವಾಗಿದ್ದು, ಸಂಸದರಾಗಿ, ರಾಜ್ಯಪಾಲರಾಗಿ ಮತ್ತು ಭಾರತದ ರಾಷ್ಟ್ರಪತಿಯಾಗಿ ಅವರ ಹೋರಾಟಗಳು, ಸೇವೆ ಮತ್ತು ಶ್ರೀಮಂತ ಕೊಡುಗೆಯನ್ನು ಈ ಪುಸ್ತಕವು ಅದ್ಭುತವಾಗಿ ಉಲ್ಲೇಖಿಸುತ್ತದೆ.”
<
“ಶ್ರೀ ರಾಮ್ ನಾಥ್ ಕೋವಿಂದ್ ಅವರು ಸಾರ್ವಜನಿಕ ಸೇವೆಯನ್ನು ತಮ್ಮ ಜೀವನದ ಮಾರ್ಗವಾಗಿ ಆರಿಸಿಕೊಂಡು, ಸದಾಕಾಲ ತಮ್ಮ ಕರ್ತವ್ಯಗಳಿಗೆ ಅವರು ಆಳವಾಗಿ ಬದ್ಧರಾಗಿದ್ದರು. ಅವರ ಸಮರ್ಪಣೆ ಮತ್ತು ಸೇವಾ ಮನೋಭಾವವು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದೆ.”
*****
Delighted to be a part of the release of former President Shri Ram Nath Kovind Ji’s autobiography, ‘Triumph of the Indian Republic: My Life, My Struggles.’ This book reflects the true strengths and possibilities of Indian democracy.@ramnathkovind pic.twitter.com/6Uqn3gYBiv
— Narendra Modi (@narendramodi) August 12, 2026
The book by former President Shri Ram Nath Kovind Ji is an inspiring read, wonderfully highlighting his struggles, service and rich contribution as MP, Governor and the President of India.@ramnathkovind pic.twitter.com/kSOOASCjgV
— Narendra Modi (@narendramodi) August 12, 2026
Shri Ram Nath Kovind Ji chose public service as the path of his life and remained deeply committed to his duties throughout. His dedication and spirit of service are an inspiration for every Indian.@ramnathkovind pic.twitter.com/FtLIYUDaV9
— Narendra Modi (@narendramodi) August 12, 2026