Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುಪಿಐ ಒಂದು ದಶಕ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಯುಪಿಐ ಅನುಭವಗಳನ್ನು ಹಂಚಿಕೊಳ್ಳುವಂತೆ ನಾಗರಿಕರಿಗೆ ಪ್ರಧಾನಮಂತ್ರಿ ಆಹ್ವಾನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ದಶಕದ ಹಿಂದೆ ಜಾರಿಗೊಳಿಸಲಾದ ಮತ್ತು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಪಯಣದಲ್ಲಿ ಪ್ರಮುಖ ತಿರುವು ಪಡೆದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನ ಪರಿವರ್ತನಾತ್ಮಕ ಪಯಯಣವನ್ನು ಸ್ಮರಿಸಿಕೊಂಡರು.

ಕಳೆದ ಹತ್ತು ವರ್ಷಗಳಲ್ಲಿ ಯುಪಿಐ ಸಾಧಿಸಿದ ಪ್ರಮಾಣ ಮತ್ತು ವ್ಯಾಪ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಶ್ರೀ ನರೇಂದ್ರ ಮೋದಿ ಅವರು, ಯುಪಿಐನ ಗಮನಾರ್ಹ ಪಯಣವು ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡಬಹುದಾದ ವಿಷಯವಾಗಿದೆ ಎಂದು ಹೇಳಿದರು. ಯುಪಿಐ ಬಳಸುವ ಅನುಭವಗಳನ್ನು ಮತ್ತು ಅದು ಅವರ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಹಂಚಿಕೊಳ್ಳಲು ಪ್ರಧಾನಮಂತ್ರಿ ಅವರು ನಾಗರಿಕರಿಗೆ ಆಹ್ವಾನ ನೀಡಿದ್ದಾರೆ.

ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ  ಹೀಗೆ ಹೇಳಿದ್ದಾರೆ:

ಒಂದು ದಶಕದ ಹಿಂದೆ, ಯುಪಿಐ ಅನ್ನು ಬಿಡುಗಡೆ ಮಾಡಲಾಯಿತು. ಅದು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಪಯಣದಲ್ಲಿ ಪ್ರಮುಖ ತಿರುವು ಎಂದು ಗುರುತಿಸಲಾಗಿದೆ.

ಯುಪಿಐನ ಸಂಪೂರ್ಣ ಪ್ರಮಾಣ ಮತ್ತು ವ್ಯಾಪ್ತಿಯು ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವ ವಿಷಯ.

ನಿಮ್ಮ ಯುಪಿಐ ಅನುಭವ ಮತ್ತು ಅದು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಹೇಳಿ…

#10YearsOfUPI

 

*****