Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಿಲಾದ್-ಉನ್-ನಬಿಯಂದು ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಈ ಸಂದರ್ಭವು ಒಗ್ಗಟ್ಟಿನ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಎಲ್ಲೆಡೆ ಸಂತೋಷವನ್ನು ಪಸರಿಸುತ್ತದೆ ಎಂದು ಶ್ರೀ ಮೋದಿಯವರು ಆಶಿಸಿದ್ದಾರೆ. ದಯೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಮನೋಭಾವವು ಎಲ್ಲರಿಗೂ ಸದಾ ಮಾರ್ಗದರ್ಶನ ನೀಡಲಿ ಎಂದೂ ಅವರು ಹಾರೈಸಿದ್ದಾರೆ.

ಪ್ರಧಾನಮಂತ್ರಿಯವರು ‘ಎಕ್ಸ್’ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಈದ್ ಮುಬಾರಕ್!

ಮಿಲಾದ್-ಉನ್-ನಬಿಯ ಶುಭಾಶಯಗಳು. ಈ ಸಂದರ್ಭವು ನಮ್ಮ ಸುತ್ತಮುತ್ತ ಒಗ್ಗಟ್ಟು ಮತ್ತು ಸಂತೋಷವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ನಾನು ಆಶಿಸುತ್ತೇನೆ. ದಯೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಮನೋಭಾವವು ಸದಾ ನಮಗೆ ಮಾರ್ಗದರ್ಶನ ನೀಡಲಿ.

 

*****