Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಕ್ರೀಡಾ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನದಂದು ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಕ್ರೀಡಾಪಟುಗಳ ಸಮರ್ಪಣೆ, ಉತ್ಸಾಹ ಮತ್ತು ದೃಢನಿಶ್ಚಯವು ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ಹಾಕಿಗೆ ಅವರ ಅದ್ಭುತ ಕೊಡುಗೆ ಮತ್ತು ಪ್ರತಿಭೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಿರುವ ಮೇಜರ್ ಧ್ಯಾನ್ ಚಂದ್ ಅವರಿಗೆ ಪ್ರಧಾನಮಂತ್ರಿ ಅವರ ಗೌರವ ನಮನ ಸಲ್ಲಿಸಿದರು.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

“ಪ್ರತಿಯೊಬ್ಬ ಕ್ರೀಡಾ ಪ್ರೇಮಿಗೆ… ನಿಮ್ಮ ಸಮರ್ಪಣೆ, ಉತ್ಸಾಹ ಮತ್ತು ದೃಢನಿಶ್ಚಯವು ಪ್ರತಿಯೊಬ್ಬರಿಗೂ ಹೆಮ್ಮೆ ತರುತ್ತದೆ.

ನಾವು ಮೇಜರ್ ಧ್ಯಾನ್ ಚಂದ್ ಅವರಿಗೂ ಗೌರವ ಸಲ್ಲಿಸುತ್ತೇವೆ, ಅವರ ಪ್ರತಿಭೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ. 

#NationalSportsDay”

 

*****