ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾತ್ಮ ಅಯ್ಯಂಕಲಿ ಅವರಿಗೆ ಗೌರವ ನಮನ ಸಲ್ಲಿಸಿದರು. ಸಾಮಾಜಿಕ ನ್ಯಾಯದ ಶ್ರೇಷ್ಠ ಪ್ರವರ್ತಕರಾಗಿ, ಸಮಾಜದ ಅಂಚಿನಲ್ಲಿರುವವರ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಮಹಾತ್ಮ ಅಯ್ಯಂಕಲಿ ಅವರನ್ನು ಶ್ರೀ ನರೇಂದ್ರ ಮೋದಿ ಸ್ಮರಿಸಿದರು. ಸಮಾಜದಲ್ಲಿ ತಳಮಟ್ಟದಲ್ಲಿರುವವರಿಗೆ ಶೈಕ್ಷಣಿಕ ಅವಕಾಶಗಳನ್ನುಕಲ್ಪಿಸಲು, ಕೃಷಿ ಕಾರ್ಮಿಕರ ಜೀವನವನ್ನು ಸುಧಾರಿಸಲು ಮತ್ತು ಬಡವರಿಗೆ ಸೇವೆ ಸಲ್ಲಿಸಲು ಅವರು ಮಾಡಿದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ಮಹಾತ್ಮ ಅಯ್ಯಂಕಲಿ ಅವರಿಗೆ ಅವರ ಜನ್ಮ ವಾರ್ಷಿಕೋತ್ಸವದಂದು ಗೌರವ ಸಲ್ಲಿಸುತ್ತೇನೆ!
ಸಾಮಾಜಿಕ ನ್ಯಾಯದ ಶ್ರೇಷ್ಠ ಪ್ರವರ್ತಕರಾಗಿ ಅವರನ್ನು ಸ್ಮರಿಸಲಾಗುವುದು. ಸಮಾಜದ ಅಂಚಿನಲ್ಲಿರುವವರಿಗೆ ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸಲು, ಕೃಷಿ ಕಾರ್ಮಿಕರ ಜೀವನವನ್ನು ಸುಧಾರಿಸಲು ಮತ್ತು ಬಡವರಿಗೆ ಸೇವೆ ಸಲ್ಲಿಸಲು ಅವರು ಮಾಡಿದ ಪ್ರಯತ್ನಗಳು ಇನ್ನೂ ಸ್ಪೂರ್ತಿದಾಯಕವಾಗಿವೆ. ಅವರ ಜೀವನವು ಸಾಮಾಜಿಕ ಸಬಲೀಕರಣಕ್ಕಾಗಿ ದುಡಿಯುವ ಎಲ್ಲರಿಗೂ ಶಕ್ತಿಯನ್ನು ನೀಡುತ್ತದೆ.
*****
Paying homage to Mahatma Ayyankali on his birth anniversary!
— Narendra Modi (@narendramodi) August 28, 2026
He is remembered as a great pioneer of social justice. His efforts to secure educational opportunities for the marginalised, improve the lives of agricultural workers and serve the poor remain very inspiring. His life…