Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟದಲ್ಲಿ 4×400 ಮೀಟರ್ ಮಿಶ್ರ ರಿಲೇ ತಂಡವು ಬೆಳ್ಳಿ ಪದಕ ಗೆದ್ದಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ


ಏಷ್ಯನ್ ಕ್ರೀಡಾಕೂಟದ 4×400 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಮನು ಟಿ.ಎಸ್, ಪೂವಮ್ಮ ಎಂ.ಆರ್, ವಿಶಾಲ್ ಟಿ.ಕೆ ಮತ್ತು ವಿತ್ಯಾ ರಾಮರಾಜ್ ಅವರ ಅಸಾಧಾರಣ ಕ್ರೀಡಾ ಪ್ರದರ್ಶನವನ್ನು ಶ್ಲಾಘಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅವರುಗಳಿಗೆ ಅಭಿನಂದನೆ ಸಲ್ಲಿಸಿದರು.

ಅವರ ವೇಗ, ಪರಸ್ಪರ ಹೊಂದಾಣಿಕೆ ಮತ್ತು ದೃಢನಿಶ್ಚಯವು ರೋಚಕ ಓಟಕ್ಕೆ ಮತ್ತು ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣಕ್ಕೆ ಕಾರಣವಾಯಿತು ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಅವರುಗಳು ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸಿನ ಎತ್ತರವನ್ನು ಏರಲಿ ಎಂದು ಶ್ರೀ ಮೋದಿ ಅವರು ಹಾರೈಸಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ‘ಎಕ್ಸ್’ ತಾಣದಲ್ಲಿ ಹೀಗೆ ಸಂದೇಶ ಹಂಚಿಕೊಂಡಿದೆ:

“ನಮ್ಮ 4×400 ಮೀಟರ್ ಮಿಶ್ರ ರಿಲೇ ತಂಡದಿಂದ ಅಸಾಧಾರಣ ಪ್ರದರ್ಶನ!

ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮನು ಟಿ.ಎಸ್., ಪೂವಮ್ಮ ಎಂ.ಆರ್., ವಿಶಾಲ್ ಟಿ.ಕೆ. ಮತ್ತು ವಿತ್ಯಾ ರಾಮರಾಜ್ ಅವರಿಗೆ ಅಭಿನಂದನೆಗಳು. ಅವರುಗಳ ಚುರುಕಿನ ವೇಗ, ಹೊಂದಾಣಿಕೆ ಮತ್ತು ದೃಢನಿಶ್ಚಯವು ರೋಚಕ ಓಟಕ್ಕೆ ಹಾಗೂ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣಕ್ಕೆ ಕಾರಣವಾಯಿತು.

ಯಶಸ್ಸಿನ ಇನ್ನಷ್ಟು ಎತ್ತರವನ್ನು ಏರಲಿ ಎಂದು ಅವರುಗಳಿಗೆ ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”

 

*****