ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯನ್ ಕ್ರೀಡಾಕೂಟದ ಶಾಟ್ ಪುಟ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದ ಮನ್‌ಪ್ರೀತ್ ಕೌರ್ ಅವರನ್ನು ಅಭಿನಂದಿಸಿದರು.
ಅವರ ಗಮನಾರ್ಹ ಎಸೆತವನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಅವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ದೊರಕಲಿ ಎಂದು ಹಾರೈಸಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ತನ್ನ X ಪೋಸ್ಟ್ ನಲ್ಲಿ ಹೀಗೆ ಹೇಳಿದೆ:
“ಶಾಟ್ ಪುಟ್‌ನಲ್ಲಿ ಮನ್‌ಪ್ರೀತ್ ಕೌರ್ ಅವರ ಅತ್ಯುತ್ತಮ ಪ್ರಯತ್ನ!
ಅವರ ಗಮನಾರ್ಹ ಎಸೆತವು ಏಷ್ಯನ್ ಕ್ರೀಡಾಕೂಟದಲ್ಲಿ ಅವರಿಗೆ ಕಂಚಿನ ಪದಕವನ್ನು ತಂದುಕೊಟ್ಟಿದೆ. ಮನ್‌ಪ್ರೀತ್ ಅವರಿಗೆ ಅಭಿನಂದನೆಗಳು! ಅವರಿಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”
*****
A fine effort in shot put by Manpreet Kaur!
— PMO India (@PMOIndia) September 25, 2026
Her impressive throw has earned her a Bronze medal at the Asian Games. Congratulations, to Manpreet! Wishing her continued success: PM @narendramodi