Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟದ ಮಹಿಳಾ ರಿಕರ್ವ್ ತಂಡದ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಅಂಕಿತಾ ಭಕತ್, ಕುಂಕುಮ್ ಅನಿಲ್ ಮೋಹೋದ್ ಮತ್ತು ಕೀರ್ತಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಕ್ರೀಡಾಕೂಟದ ಮಹಿಳಾ ರಿಕರ್ವ್ ತಂಡದ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟ ಅಂಕಿತಾ ಭಕತ್, ಕುಂಕುಮ್ ಅನಿಲ್ ಮೋಹೋದ್ ಮತ್ತು ಕೀರ್ತಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಅವರ ಸಂಯಮ ಮತ್ತು ನಿಖರತೆ ಗಮನಾರ್ಹವಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಈ ಐತಿಹಾಸಿಕ ಗೆಲುವು ದೇಶಾದ್ಯಂತದ ಅಸಂಖ್ಯಾತ ಯುವ ಬಿಲ್ಲುಗಾರರಿಗೆ ಸ್ಫೂರ್ತಿ ನೀಡಲಿದೆ ಎಂದು ಅವರು ತಿಳಿಸಿದರು.

ಭಾರತವು ತನ್ನ ಚಾಂಪಿಯನ್‌ಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ ಶ್ರೀ ಮೋದಿ, ಅಂಕಿತಾ ಭಕತ್, ಕುಂಕುಮ್ ಅನಿಲ್ ಮೋಹೋದ್ ಮತ್ತು ಕೀರ್ತಿ ಅವರಿಗೆ ಶುಭ ಹಾರೈಸಿದರು.

ಪ್ರಧಾನ ಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್‌ನಲ್ಲಿ ಹೀಗೆ ಹೇಳಿದೆ:

“ಇಡೀ ರಾಷ್ಟ್ರವನ್ನೇ ಸಂಭ್ರಮಿಸುವಂತೆ ಮಾಡಿದ ಐತಿಹಾಸಿಕ ಚಿನ್ನದ ಪದಕ.

ಏಷ್ಯನ್ ಕ್ರೀಡಾಕೂಟದ ಮಹಿಳಾ ರಿಕರ್ವ್ ತಂಡದ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಅಂಕಿತಾ ಭಕತ್, ಕುಂಕುಮ್ ಅನಿಲ್ ಮೋಹೋದ್ ಮತ್ತು ಕೀರ್ತಿ ಅವರಿಗೆ ಅಭಿನಂದನೆಗಳು. ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಅವರ ಸಂಯಮ ಮತ್ತು ನಿಖರತೆ ಗಮನಾರ್ಹವಾಗಿತ್ತು. ಈ ಐತಿಹಾಸಿಕ ಗೆಲುವು ದೇಶಾದ್ಯಂತದ ಅಸಂಖ್ಯಾತ ಯುವ ಬಿಲ್ಲುಗಾರರಿಗೆ ಸ್ಫೂರ್ತಿ ನೀಡಲಿದೆ. ಭಾರತವು ತನ್ನ ಚಾಂಪಿಯನ್‌ಗಳ ಬಗ್ಗೆ ಹೆಮ್ಮೆಪಡುತ್ತದೆ! ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”

 

*****