Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಮರ್ಪಣಾಭಾವದ ಸೇವೆಯ ಮಹತ್ವವ ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ  


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಮರ್ಪಣಾಭಾವದ ಸೇವೆ, ಧರ್ಮಯುತ ನಡವಳಿಕೆ ಮತ್ತು ಕರ್ತವ್ಯನಿಷ್ಠೆಯ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ:

“नित्यं परिचरेच्चैव तद्वै सुकृतमुत्तमम्।

कीर्तिं पुण्यं यशो लोकान् प्राप्स्यसे राजसत्तम।।”

ಈ ಶ್ಲೋಕವು ಇತರರ ಸೇವೆ ಮಾಡುವುದು ಹಾಗೂ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಿರ್ವಹಿಸುವುದು ಅತ್ಯುನ್ನತ ಸದಾಚಾರಗಳಲ್ಲಿ ಒಂದಾಗಿದೆ ಎಂಬುದನ್ನು ಒತ್ತಿಹೇಳುತ್ತದೆ. ಇಂತಹ ಸಮರ್ಪಣಾಭಾವವು ಪುಣ್ಯ ಮತ್ತು ಜನರ ಸದ್ಭಾವನೆಯನ್ನು ತಂದುಕೊಡುವುದಷ್ಟೇ ಅಲ್ಲದೆ, ಸಮಾಜದಲ್ಲಿ ಶಾಶ್ವತ ಗೌರವ ಮತ್ತು ಮನ್ನಣೆಯನ್ನೂ ಗಳಿಸಿಕೊಡುತ್ತದೆ ಎಂಬ ಸಂದೇಶವನ್ನು  ಸಾರುತ್ತದೆ.

ಪ್ರಧಾನ ಮಂತ್ರಿ ಅವರು ತಮ್ಮ  X  ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

नित्यं परिचरेच्चैव तद्वै सुकृतमुत्तमम्।

कीर्तिं पुण्यं यशो लोकान् प्राप्स्यसे राजसत्तम।।

 

*****