ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ರಾಷ್ಟ್ರಪತಿ ಶುಭ ಹಾರೈಕೆ ಮತ್ತು ಆತ್ಮೀಯ ನುಡಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸೇವೆಯ ಅತ್ಯಂತ ತೃಪ್ತಿದಾಯಕ ಪಯಣದ ಈ ವರ್ಷಗಳು, ಪ್ರತಿ ಹಂತದಲ್ಲೂ ಜನರ ವಾತ್ಸಲ್ಯ, ವಿಶ್ವಾಸ ಮತ್ತು ಆಶೀರ್ವಾದಗಳಿಂದ ರೂಪುಗೊಂಡಿವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಕೋಟ್ಯಂತರ ಭಾರತೀಯರು ಆತ್ಮವಿಶ್ವಾಸ ಮತ್ತು ದೃಢನಿಶ್ಚಯದಿಂದ ರಾಷ್ಟ್ರದ ಪರಿವರ್ತನೆಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿದ್ದರಿಂದ ದೇಶದ ಈಗಿನ ಪ್ರಗತಿ ಸಾಧ್ಯವಾಗಿದೆ ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಈ ಬದಲಾವಣೆಯು ಜನರ ದೈನಂದಿನ ಜೀವನದಲ್ಲಿ ಪ್ರತಿಫಲಿಸುತ್ತಿರುವುದನ್ನು ನೋಡುವುದು ವಿಶೇಷವಾಗಿ ಸಂತೋಷದಾಯಕ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
‘ವಿಕಸಿತ ಭಾರತ’ ನಿರ್ಮಾಣದತ್ತ ಎಲ್ಲರೂ ಒಟ್ಟಾಗಿ ಸಾಗುತ್ತಿರುವಾಗ, ಅದೇ ಕರ್ತವ್ಯನಿಷ್ಠೆ ಮತ್ತು ಸಮರ್ಪಣಾ ಭಾವದಿಂದ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಪ್ರಧಾನಮಂತ್ರಿ ಇದೇ ವೇಳೆ ಪುನರುಚ್ಚರಿಸಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ರಾಷ್ಟ್ರಪತಿಯವರೇ, ನಿಮ್ಮ ಶುಭಾಶಯಗಳು ಮತ್ತು ಆತ್ಮೀಯ ಮಾತುಗಳಿಗೆ ಧನ್ಯವಾದಗಳು.
ಈ ವರ್ಷಗಳು ಸೇವೆಯ ಅತ್ಯಂತ ತೃಪ್ತಿದಾಯಕ ಪಯಣವಾಗಿದ್ದು, ಪ್ರತಿ ಹಂತದಲ್ಲೂ ಜನರ ವಾತ್ಸಲ್ಯ, ನಂಬಿಕೆ ಮತ್ತು ಆಶೀರ್ವಾದಗಳಿಂದ ರೂಪುಗೊಂಡಿವೆ.
ಕೋಟ್ಯಂತರ ಭಾರತೀಯರು, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದಿಂದ ದೇಶದ ಪರಿವರ್ತನೆಯಲ್ಲಿ ಪಾಲ್ಗೊಳ್ಳಲು ಮುಂದಾದ ಕಾರಣದಿಂದಲೇ ನಾವು ಪ್ರಸ್ತುತದ ಪ್ರಗತಿಗೆ ಸಾಕ್ಷಿಯಾಗಿದ್ದೇವೆ. ಈ ಬದಲಾವಣೆಯು ದೈನಂದಿನ ಜೀವನದಲ್ಲಿ ಪ್ರತಿಫಲಿಸುತ್ತಿರುವುದನ್ನು ನೋಡುವುದು ವಿಶೇಷವಾಗಿ ಹರ್ಷದಾಯಕವಾಗಿದೆ.
‘ವಿಕಸಿತ ಭಾರತ’ವನ್ನು ನಿರ್ಮಿಸುವತ್ತ ನಾವೆಲ್ಲರೂ ಒಟ್ಟಾಗಿ ಸಾಗುತ್ತಿರುವಾಗ, ಅದೇ ಕರ್ತವ್ಯಪ್ರಜ್ಞೆ ಮತ್ತು ಶ್ರದ್ಧೆಯೊಂದಿಗೆ ನಾನು ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. @rashtrapatibhvn”
*****
Rashtrapati Ji, thank you for the wishes and generous words. These years have been a deeply fulfilling journey of service, shaped at every stage by the affection, faith and blessings of the people. Whatever progress we have witnessed has been possible because crores of Indians chose to participate in the nation’s transformation with confidence and determination. It is especially heartening to see this change reflected in everyday lives. I shall continue to serve our nation with the same spirit of duty and devotion as we all move together towards building a Viksit Bharat. @rashtrapatibhvn
— Narendra Modi (@narendramodi) October 7, 2026