ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂತಾನ್ ಪ್ರಧಾನಮಂತ್ರಿ ತ್ಶೆರಿಂಗ್ ಟೋಬ್ಗೆ ಅವರಿಗೆ ಅವರ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದ ಅರ್ಪಿಸಿದ್ದಾರೆ. ಪರಸ್ಪರ ನಂಬಿಕೆ ಮತ್ತು ತಿಳುವಳಿಕೆಯ ಮೇಲೆ ಆಧಾರಿತವಾದ ದೀರ್ಘಕಾಲೀನ ಪಾಲುದಾರಿಕೆಯಿಂದ ಭಾರತ ಮತ್ತು ಭೂತಾನ್ ಬೆಸೆದುಕೊಂಡಿವೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ‘ವಿಕಸಿತ ಭಾರತ’ ಮತ್ತು ಸಮೃದ್ಧ ಭೂತಾನ್ ಕುರಿತಾದ ನಮ್ಮ ಜಂಟಿ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಿಕಟ ಸಹಕಾರವನ್ನು ಮುಂದುವರಿಸಲು ತಾವು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಶ್ರೀ ಮೋದಿ ಅವರು ‘ಎಕ್ಸ್’ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
ಪ್ರಧಾನಮಂತ್ರಿ ಟೋಬ್ಗೆ ಅವರೇ, ನಿಮ್ಮ ಆತ್ಮೀಯ ಮತ್ತು ಹೃದಯಪೂರ್ವಕ ಸಂದೇಶಕ್ಕಾಗಿ ಧನ್ಯವಾದಗಳು.
ಪರಸ್ಪರ ನಂಬಿಕೆ ಮತ್ತು ತಿಳುವಳಿಕೆಯ ಮೇಲೆ ಆಧಾರಿತವಾದ ದೀರ್ಘಕಾಲೀನ ಪಾಲುದಾರಿಕೆಯಿಂದ ಭಾರತ ಮತ್ತು ಭೂತಾನ್ ಬೆಸೆದುಕೊಂಡಿವೆ. ‘ವಿಕಸಿತ ಭಾರತ’ ಮತ್ತು ಸಮೃದ್ಧ ಭೂತಾನ್ ಕುರಿತಾದ ನಮ್ಮ ಜಂಟಿ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಿಕಟ ಸಹಕಾರವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.
@tsheringtobgay
*****
Thank you, Prime Minister Tobgay, for the warm and heartfelt message. India and Bhutan are bound by an enduring partnership rooted in mutual trust and understanding. I look forward to continuing our close cooperation to advance our shared vision of Viksit Bharat and a prosperous Bhutan. @tsheringtobgay
— Narendra Modi (@narendramodi) October 7, 2026