Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಯಂ ಆಡಳಿತದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ನಿಜವಾದ ವೀರ ಭಕ್ತರ ಬದ್ಧತೆ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರ ಸೇವೆಗಾಗಿ ವೈಯಕ್ತಿಕ ಆರಾಮಗಳನ್ನು ತ್ಯಜಿಸುವವರ ನಿಸ್ವಾರ್ಥತೆ ಮತ್ತು ಬದ್ಧತೆಯನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್‌ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“भस्मीकृतस्वार्थसौख्यपरिचर्चितविग्रहाः।

स्वराज्ययोगनिर्मग्ना धन्यास्ते वीरयोगिनः॥”

ತಮ್ಮ ವೈಯಕ್ತಿಕ ಸುಖಭೋಗಗಳನ್ನು ತ್ಯಜಿಸಿ, ಸ್ವಯಂ-ಆಳ್ವಿಕೆಯ ಸೇವೆಗೆ ತಮ್ಮ ಸಂಪೂರ್ಣ ಅಸ್ತಿತ್ವವನ್ನೇ ಮುಡಿಪಾಗಿಟ್ಟಿರುವವರೇ ನಿಜವಾದ ವೀರ ಭಕ್ತರು; ಅವರು ನಿಜಕ್ಕೂ ರಾಷ್ಟ್ರದ ಭಾಗ್ಯಶಾಲಿಗಳಾಗಿದ್ದಾರೆ.

 

*****