ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು (ಎನ್ಎಸ್ಎಪಿ) 2026-27ರಿಂದ 2030-31ರವರೆಗೆ ಐದು ವರ್ಷಗಳ ಅವಧಿಗೆ ಒಟ್ಟು ₹53,428 ಕೋಟಿ ವೆಚ್ಚದಲ್ಲಿ ಮುಂದುವರಿಸುವ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಈ ಅನುಮೋದನೆಯಡಿ, (i) ಯೋಜನೆ ಮತ್ತು ಉಪಯೋಜನೆಗಳ ಮರು ನಾಮಕರಣ, (ii) ದಿವ್ಯಾಂಗರ ಪಿಂಚಣಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು, ಫಲಾನುಭವಿಗಳ ವ್ಯಾಪ್ತಿ ಹಾಗೂ ಆರ್ಥಿಕ ನೆರವಿನ ಮೊತ್ತದಲ್ಲಿ ಪರಿಷ್ಕರಣೆ ಮತ್ತು (iii) ವೃದ್ಧರು ಹಾಗೂ ವಿಧವೆಯರ ಪಿಂಚಣಿ ಯೋಜನೆಗಳು ಮತ್ತು ಕುಟುಂಬ ನೆರವು ಯೋಜನೆಯನ್ನು ಈಗಿರುವ ಸ್ವರೂಪದಲ್ಲೇ ಮುಂದುವರಿಸುವುದು ಸೇರಿವೆ.
ವಿವರಗಳು:
|
ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (ಎನ್ಎಸ್ಎಪಿ) |
ಪ್ರಧಾನಮಂತ್ರಿ ಸಾಮಾಜಿಕ ಸಹಾಯ ಯೋಜನೆ |
|
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (ಐಜಿಎನ್ಒಎಪಿಎಸ್) |
ಪ್ರಧಾನಮಂತ್ರಿ ವೃದ್ಧಾಪ್ಯ ಪಿಂಚಣಿ ಯೋಜನೆ |
|
ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ (ಐಜಿಎನ್ಡಬ್ಲ್ಯುಪಿಎಸ್) |
ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ |
|
ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಲಕರ ಪಿಂಚಣಿ ಯೋಜನೆ (ಐಜಿಎನ್ಡಿಪಿಎಸ್) |
ಪ್ರಧಾನಮಂತ್ರಿ ದಿವ್ಯಾಂಗರ ಪಿಂಚಣಿ ಯೋಜನೆ |
|
ರಾಷ್ಟ್ರೀಯ ಕುಟುಂಬ ನೆರವು ಯೋಜನೆ |
ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ |
ಪ್ರಸ್ತುತ ಹೆಸರು | ಅನುಮೋದಿತ ಹೆಸರು |
|---|
2. ದಿವ್ಯಾಂಗರ ಪಿಂಚಣಿಯಲ್ಲಿ ಬದಲಾವಣೆಗಳು:
ದಿವ್ಯಾಂಗರ ಪಿಂಚಣಿ ಯೋಜನೆಯಡಿ ಇನ್ನು ಮುಂದೆ 0ರಿಂದ 79 ವರ್ಷ ವಯಸ್ಸಿನವರಿಗೆ ₹375 ಹಾಗೂ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ₹625 ಆರ್ಥಿಕ ನೆರವು ನೀಡಲಾಗುತ್ತದೆ. ಯೋಜನೆಯಡಿ ಆರ್ಥಿಕ ನೆರವಿನ ಮೊತ್ತವನ್ನು ಹೆಚ್ಚಿಸುವುದರ ಜೊತೆಗೆ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ:
(ಎ) ಪ್ರಸ್ತುತ ಶೇ. 80ರಷ್ಟಿರುವ ಅಂಗವೈಕಲ್ಯದ ಮಾನದಂಡವನ್ನು ಯೋಜನೆಯಡಿ ಶೇ. 40ಕ್ಕೆ ಇಳಿಸಲಾಗಿದೆ.
(ಬಿ) ಅಂಗವೈಕಲ್ಯ ಪಿಂಚಣಿಗೆ ಕನಿಷ್ಠ ವಯೋಮಿತಿಯ ಮಾನದಂಡವು ಹುಟ್ಟಿನಿಂದಲೇ ಅನ್ವಯಿಸುತ್ತದೆ.
iii. ವೃದ್ಧರು ಮತ್ತು ವಿಧವೆಯರ ಪಿಂಚಣಿ ಯೋಜನೆಗಳು ಹಾಗೂ ಕುಟುಂಬ ನೆರವು ಯೋಜನೆಯನ್ನು ಈಗಿರುವ ಸ್ವರೂಪದಲ್ಲೇ ಮುಂದುವರಿಸಲಾಗುತ್ತದೆ.
ಪ್ರಯೋಜನಗಳು:
ಈ ಅನುಮೋದನೆಯಿಂದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಒಟ್ಟು 3.20 ಕೋಟಿ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ:
ದಿವ್ಯಾಂಗರ ಪಿಂಚಣಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು, ಫಲಾನುಭವಿಗಳ ಸಂಖ್ಯೆ ಮತ್ತು ಆರ್ಥಿಕ ನೆರವಿನ ಮೊತ್ತದಲ್ಲಿನ ಬದಲಾವಣೆಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಮೂರು ತಿಂಗಳೊಳಗೆ ಹೊರಡಿಸಿ ಅನುಷ್ಠಾನಗೊಳಿಸಲಾಗುವುದು.
ಹಿನ್ನೆಲೆ:
ಭಾರತದ ಸಂವಿಧಾನದ 41ನೇ ವಿಧಿಯಲ್ಲಿನ ರಾಜ್ಯನೀತಿ ನಿರ್ದೇಶಕ ತತ್ವಗಳಡಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ಈಡೇರಿಸುವ ಉದ್ದೇಶದಿಂದ, ಬಡ ಕುಟುಂಬಗಳಿಗೆ ನೆರವು ಒದಗಿಸಲು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು 1995ರ ಆಗಸ್ಟ್ 15ರಂದು ಪ್ರಾರಂಭಿಸಲಾಯಿತು. ದೇಶದ ಎಲ್ಲೆಡೆ ಫಲಾನುಭವಿಗಳಿಗೆ ಸಮಾನ ರೀತಿಯಲ್ಲಿ ನೆರವು ದೊರೆಯುವುದನ್ನು ಖಚಿತಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮದಡಿ ಶೇ. 100ರಷ್ಟು ಆರ್ಥಿಕ ನೆರವನ್ನು ಕೇಂದ್ರ ಸರ್ಕಾರವೇ ಒದಗಿಸುತ್ತದೆ.
ವಿಕಲಚೇತನರ ಹಕ್ಕುಗಳ ಕಾಯ್ದೆ, 2016ರ ಹಿನ್ನೆಲೆಯಲ್ಲಿ ಅಂಗವೈಕಲ್ಯ ಪಿಂಚಣಿಯ ಅರ್ಹತಾ ಮಾನದಂಡಗಳಲ್ಲಿ ಬದಲಾವಣೆ ಮಾಡುವುದು ಅಗತ್ಯವಾಗಿದೆ. ಅದರಂತೆ, ಅರ್ಹತೆಗೆ ಸಂಬಂಧಿಸಿದಂತೆ ಶೇ. 40ರಷ್ಟು ಅಂಗವೈಕಲ್ಯವನ್ನು ‘ನಿಗದಿತ ಅಂಗವೈಕಲ್ಯ’ದ ಮಾನದಂಡವಾಗಿ ಪರಿಗಣಿಸಲಾಗಿದೆ. ಇದರ ಜೊತೆಗೆ, ಇತರ ವರ್ಗಗಳಿಗೆ ರೂಪಿಸಲಾಗುವ ಇದೇ ರೀತಿಯ ಯೋಜನೆಗಳಲ್ಲಿ ನೀಡುವ ನೆರವಿಗಿಂತ ಅಂಗವೈಕಲ್ಯಕ್ಕೆ ಸಂಬಂಧಿಸಿದ ನೆರವು ಕನಿಷ್ಠ ಶೇ. 25ರಷ್ಟು ಹೆಚ್ಚಿರಬೇಕು ಎಂಬುದನ್ನೂ ಈ ಕಾಯ್ದೆ ಕಡ್ಡಾಯಗೊಳಿಸಿದೆ.
*****