Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಭದ್ರತಾ ಪಡೆ (NSG) ಸ್ಥಾಪನಾ ದಿನದಂದು ಸಿಬ್ಬಂದಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ಪಡೆ (NSG)ಯ ಸಿಬ್ಬಂದಿಗೆ ಸ್ಥಾಪನಾ ದಿನದಂದು ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ಧೈರ್ಯ, ನಿಖರತೆ ಮತ್ತು ಕರ್ತವ್ಯದ ಕಡೆಗೆ ಅಚಲವಾದ ಬದ್ಧತೆಯ ಸಾಕಾರಮೂರ್ತಿಗಳಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಬಣ್ಣಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಅವರ ದೃಢವಾದ ನಿಗಾ ಹಾಗೂ ಜನರನ್ನು ಮತ್ತು ರಾಷ್ಟ್ರದ ಪ್ರಮುಖ ಆಸ್ತಿಗಳನ್ನು ರಕ್ಷಿಸಲು ಅವರು ತೋರುವ ಸನ್ನದ್ಧತೆಯು ಅಪಾರ ವಿಶ್ವಾಸ ಮತ್ತು ಹೆಮ್ಮೆಯನ್ನು ಮೂಡಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಶ್ರೀ ಮೋದಿ ಅವರು ‘ಎಕ್ಸ್’ ನಲ್ಲಿ ಹೀಗೆ ಬರೆದಿದ್ದಾರೆ:

“ರಾಷ್ಟ್ರೀಯ ಭದ್ರತಾ ಪಡೆಯ ಸಿಬ್ಬಂದಿಗೆ ಅವರ ಸ್ಥಾಪನಾ ದಿನದಂದು ಶುಭಾಶಯಗಳು.

ಧೈರ್ಯ, ನಿಖರತೆ ಮತ್ತು ಕರ್ತವ್ಯದ ಕಡೆಗೆ ಅಚಲವಾದ ಬದ್ಧತೆಯ ಸಾಕಾರಮೂರ್ತಿಗಳು. ಭಯೋತ್ಪಾದನೆಯ ವಿರುದ್ಧ ಅವರ ದೃಢವಾದ ನಿಗಾ ಹಾಗೂ ನಮ್ಮ ಜನರನ್ನು ಮತ್ತು ರಾಷ್ಟ್ರದ ಪ್ರಮುಖ ಆಸ್ತಿಗಳನ್ನು ರಕ್ಷಿಸಲು ಅವರು ತೋರುವ ಸನ್ನದ್ಧತೆಯು ಅಪಾರ ವಿಶ್ವಾಸ ಮತ್ತು ಹೆಮ್ಮೆಯನ್ನು ಮೂಡಿಸುತ್ತದೆ.

@nsgblackcats”

 

*****