Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಬೆಳ್ಳಿ ಪದಕ ಗೆದ್ದ ಮೊಹಮ್ಮದ್ ಬಾಸಿಲ್ ಎಂ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


2026ರ ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ 100 ಮೀಟರ್ ಟಿ 47 ಸ್ಪರ್ಧೆಯಲ್ಲಿ ಅದ್ಭುತ ಕ್ರೀಡಾ ಸಮಯದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡು ಬೆಳ್ಳಿ ಪದಕ ಗೆದ್ದ ಮೊಹಮ್ಮದ್ ಬಾಸಿಲ್ ಎಂ. ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಹೀಟ್ಸ್‌ ನಲ್ಲಿ ಗೇಮ್ಸ್ ದಾಖಲೆಯನ್ನು ಮುರಿದು ಫೈನಲ್‌ ನಲ್ಲಿ ತಮ್ಮದೇ ಆದ ದಾಖಲೆಯನ್ನು ಸುಧಾರಿಸಿಕೊಂಡಿರುವುದು ನಿಜಕ್ಕೂ ಪ್ರತಿಭೆ ಮತ್ತು ದೃಢಸಂಕಲ್ಪದ ಅದ್ಭುತ ಪ್ರದರ್ಶನವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು ಮತ್ತು ಈ ಸ್ಮರಣೀಯ ಪ್ರದರ್ಶನಕ್ಕಾಗಿ ಬಾಸಿಲ್ ಅವರನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ಕೆಳಗಿನ ಮಾಹಿತಿಯನ್ನು ಹಂಚಿಕೊಂಡಿದೆ:

“ಮೊಹಮ್ಮದ್ ಬಾಸಿಲ್ ಎಂ. ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಪುರುಷರ 100 ಮೀಟರ್ ಟಿ47 ಸ್ಪರ್ಧೆಯಲ್ಲಿ ಅದ್ಭುತ ಕ್ರೀಡಾ ಸಮಯದೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. ಹೀಟ್ಸ್ ನಲ್ಲಿ ಈಗಾಗಲೇ ಗೇಮ್ಸ್ ದಾಖಲೆಯನ್ನು ಮುರಿದಿರುವ ಅವರು ಫೈನಲ್ ನಲ್ಲಿ ತಮ್ಮದೇ ಆದ ಸಾಧನೆಯನ್ನು ಸುಧಾರಿಸಿಕೊಂಡರು. ಇದು ಪ್ರತಿಭೆ ಮತ್ತು ದೃಢಸಂಕಲ್ಪದ ಅದ್ಭುತ ಪ್ರದರ್ಶನವಾಗಿದೆ. ಈ ಸ್ಮರಣೀಯ ಪ್ರದರ್ಶನಕ್ಕಾಗಿ ಬಾಸಿಲ್ ಅವರಿಗೆ ನನ್ನ ಅಭಿನಂದನೆಗಳು: ಪ್ರಧಾನಮಂತ್ರಿ @narendramodi”

 

*****