Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಸ್ವರ್ಣ ಪದಕ ಪಡೆದಿರುವ ಸಚಿನ್ ಖಿಲಾರಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಶಾಟ್ ಪುಟ್ ಎಫ್ 46 ವಿಭಾಗದಲ್ಲಿ, ಸಚಿನ್ ಖಿಲಾರಿ ಅವರು ಋತುವಿನ ಅತ್ಯುತ್ತಮ ಎಸೆತದೊಂದಿಗೆ ಮತ್ತೊಮ್ಮೆ ವಿಜೇತರಾಗಿ ತಮ್ಮ ಚಿನ್ನದ ಪದಕವನ್ನು ಉಳಿಸಿಕೊಂಡಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವುದು ಮತ್ತು ಪೋಡಿಯಂನ ಎಲ್ಲಾ ಸ್ಥಾನಗಳನ್ನೂ ಭಾರತದವರೇ ಗಳಿಸಿ ಮುನ್ನಡೆಸುವುದು ಅಮೋಘ ಸಾಧನೆ. ಅವರ ಸ್ಥಿರತೆ, ಬದ್ಧತೆ ಮತ್ತು ನಿರಂತರ ಕ್ರೀಡಾ ಶ್ರೇಷ್ಠತೆ ನಿಜಕ್ಕೂ ಪ್ರೇರಣಾದಾಯಕ ಎಂದು ಹೇಳುತ್ತಾ ಶ್ರೀ ಮೋದಿ ಅವರು, ಮಾದರಿ ಚಾಂಪಿಯನ್ ಖಿಲಾರಿ ಅವರ ಕ್ರೀಡಾ ಪಯಣದ ಮತ್ತೊಂದು ಅದ್ಭುತ ಅಧ್ಯಾಯಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:

“ಓರ್ವ ಅತ್ಯುತ್ತಮ ಚಾಂಪಿಯನ್!

ಸಚಿನ್ ಖಿಲಾರಿ ಅವರು ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಶಾಟ್ ಪುಟ್ ಎಫ್ 46 ಸ್ಪರ್ಧೆಯಲ್ಲಿ ಮತ್ತೊಮ್ಮೆ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಈ ಋತುವಿನ ಅಮೋಘ ಎಸೆತದೊಂದಿಗೆ ಅವರು ಮತ್ತೆ ಚಿನ್ನದ ಪದಕ ಜಯಿಸಿದ್ದಾರೆ. ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವುದು ಮತ್ತು ಪದಕ ವೇದಿಕೆಯ ಮೇಲಿರುವ ಮೂರೂ ಸ್ಥಾನಗಳನ್ನು ಭಾರತೀಯರೇ ಅಲಂಕರಿಸುವಂತೆ ಮುನ್ನಡೆಸುವುದು ಅನನ್ಯ ಸಾಧನೆಯಾಗಿದೆ. ಅವರ ಸ್ಥಿರತೆ, ದೃಢನಿಶ್ಚಯ ಮತ್ತು ನಿರಂತರ ಕ್ರೀಡಾ ಶ್ರೇಷ್ಠತೆಯು ನಿಜಕ್ಕೂ ಸ್ಫೂರ್ತಿದಾಯಕ. ಸಚಿನ್ ಅವರ ಕ್ರೀಡಾ ಪಯಣದಲ್ಲಿನ ಈ ಮತ್ತೊಂದು ಭವ್ಯ ಅಧ್ಯಾಯಕ್ಕಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು: ಪ್ರಧಾನಮಂತ್ರಿ @narendramodi”

 

*****