Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಚಿನ್ನದ ಪದಕ ಜಯಿಸಿರುವ ನವೀನ್ ಸಿವಕುಮಾರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ ಸಿಂಗಲ್ಸ್ ಎಸ್‌ ಎಲ್‌ 4 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೆನಪಿನಲ್ಲಿ ಉಳಿಯುವ ಶುಭಾರಂಭ ಮಾಡಿರುವ  ನವೀನ್ ಸಿವಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ನವೀನ್‌ ಅವರ ಅತ್ಯುತ್ತಮ ಸಾಧನೆಯು ರಾಷ್ಟ್ರಕ್ಕೆ ಕೀರ್ತಿ ತಂದಿದೆ ಎಂದು ಹೇಳಿರುವ ಶ್ರೀ ಮೋದಿ ಅವರು, ಭವಿಷ್ಯದಲ್ಲೂ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಾ ಸಹ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಲಿ ಎಂದು ಆಶಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್‌ ಪೋಸ್ಟ್‌ ಹೀಗಿದೆ:

“ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ನವೀನ್ ಸಿವಕುಮಾರ್ ಅವರ ಸ್ಮರಣೀಯ ಪದಾರ್ಪಣೆ!

ಪುರುಷರ ಸಿಂಗಲ್ಸ್ ಎಸ್‌ ಎಲ್‌ 4 ನಲ್ಲಿ ಚಿನ್ನದ ಪದಕ ಜಯಿಸಿರುವುದಕ್ಕೆ ಅಭಿನಂದನೆಗಳು. ಅವರ ಈ ಅತ್ಯುತ್ತಮ ಪ್ರದರ್ಶನ ದೇಶಕ್ಕೆ ಕೀರ್ತಿ ತಂದಿದೆ. ಅವರು ಹೀಗೆಯೇ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿರಲಿ ಮತ್ತು ಇತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ: ಪ್ರಧಾನಮಂತ್ರಿ @narendramodi”

 

*****