Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿಚಿನ್ನ ಗೆದ್ದು ಹೊಸ ವಿಶ್ವ ದಾಖಲೆ ನಿರ್ಮಿಸಿದ ಮೋನಾ ಅಗರ್ವಾಲ್‌ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಏಷ್ಯನ್‌ ಪ್ಯಾರಾ ಗೇಮ್ಸ್‌ನ ಮಹಿಳೆಯರ 50 ಮೀಟರ್‌ರೈಫಲ್‌ 3 ಪೊಸಿಷನ್ಸ್‌ ಎಸ್‌ಎಚ್‌ 1 ಸ್ಪರ್ಧೆಯಲ್ಲಿಹೊಸ ವಿಶ್ವ ದಾಖಲೆ ಮತ್ತು ದಾಖಲೆಯೊಂದಿಗೆ ಐತಿಹಾಸಿಕ ಚಿನ್ನದ ಪದಕ ಗೆದ್ದ ಮೋನಾ ಅಗರ್ವಾಲ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಸ್ಪರ್ಧೆಯಲ್ಲಿಪದಕ ಗೆದ್ದ ಮೊದಲ ಭಾರತೀಯ ಪ್ಯಾರಾ ಶೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಈ ಸಾಧನೆಯನ್ನು ಇನ್ನಷ್ಟು ವಿಶೇಷವಾಗಿಸುತ್ತದೆ ಎಂದು ಹೇಳಿದ ಶ್ರೀ ನರೇದ್ರ ಮೋದಿ ಅವರು, ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡುವುದನ್ನು ಮುಂದುವರಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್‌ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದೆ:

‘‘ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿಮೋನಾ ಅಗರ್ವಾಲ್‌ ಅವರಿಗೆ ಐತಿಹಾಸಿಕ ಚಿನ್ನ!

ಹೊಸ ವಿಶ್ವ ದಾಖಲೆ ಮತ್ತು ಏಷ್ಯನ್‌ ಪ್ಯಾರಾ ಗೇಮ್ಸ್‌ ದಾಖಲೆಯೊಂದಿಗೆ ಮಹಿಳೆಯರ 50 ಮೀಟರ್‌ರೈಫಲ್‌ 3 ಪೊಸಿಷನ್ಸ್‌ ಎಸ್‌ಎಚ್‌ 1 ಸ್ಪರ್ಧೆಯನ್ನು ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಈ ಸ್ಪರ್ಧೆಯಲ್ಲಿಪದಕ ಗೆದ್ದ ಮೊದಲ ಭಾರತೀಯ ಪ್ಯಾರಾ ಶೂಟರ್‌ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಈ ಸಾಧನೆಯನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡುವುದನ್ನು ಮುಂದುವರಿಸಲಿ: ಪ್ರಧಾನಮಂತ್ರಿ @narendramodi’’

 

*****