Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಕಂಚಿನ ಪದಕ ಜಯಿಸಿರುವ ನವ್ ದೀಪ್‌ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ ಜಾವೆಲಿನ್ ಥ್ರೋ ಎಫ್ 40/ಎಫ್ 41 ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ನವ್ ದೀಪ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಹಿಂದಿನ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಈ ಬಾರಿ ಉತ್ತಮ ಪ್ರದರ್ಶನ ನೀಡಿರುವುದು ಈ ಗೆಲುವನ್ನು ವಿಶೇಷವಾಗಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಇದೇ ರೀತಿ ಅತ್ಯುತ್ತಮ ಪ್ರದರ್ಶನ ಮುಂದುವರಿಸಿ, ಭಾರತಕ್ಕೆ ಇನ್ನಷ್ಟು ಹೆಮ್ಮೆ ತರಲಿ ಎಂದು ಅವರು ಆಶಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್‌  ನಲ್ಲಿ ಹೀಗೆ ಪೋಸ್ಟ್‌ ಮಾಡಿದೆ:

“ಏಷ್ಯನ್ ಪ್ಯಾರಾ ಗೇಮ್ಸ್‌ ನ ಪುರುಷರ ಜಾವೆಲಿನ್ ಥ್ರೋ ಎಫ್‌ 40/ ಎಫ್‌ 41 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ನವ್ ದೀಪ್ ಅವರಿಗೆ ಅಭಿನಂದನೆಗಳು! ಹಿಂದಿನ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಈ ಬಾರಿ ಸಾಧನೆ ಸುಧಾರಿಸಿರುವುದು ಈ ಗೆಲುವನ್ನು ವಿಶೇಷವಾಗಿಸಿದೆ. ಅವರು ಹೀಗೆಯೇ ಉತ್ತಮ ಪ್ರದರ್ಶನ ನೀಡುತ್ತಾ, ಭಾರತಕ್ಕೆ ಇನ್ನಷ್ಟು ಹೆಮ್ಮೆ ತರಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”

 

*****