Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತುಳಸಿಮತಿ ಮುರುಗೇಸನ್‌ ಮತ್ತು ಮಾನಸಿ ಜೋಶಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಮಹಿಳಾ ಡಬಲ್ಸ್‌ ಎಸ್‌ಎಲ್‌3-ಎಸ್‌ಯು 5 ಏಷ್ಯನ್‌ ಪ್ಯಾರಾ ಗೇಮ್ಸ್‌ ಚಾಂಪಿಯನ್‌ ಆಗಿರುವ ತುಳಸಿಮತಿ ಮುರುಗೇಸನ್‌ ಮತ್ತು ಮಾನಸಿ ಜೋಶಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಅವರ ಅತ್ಯುತ್ತಮ ಪ್ರದರ್ಶನವು ರಾಷ್ಟ್ರಕ್ಕೆ ಹೆಚ್ಚಿನ ಹೆಮ್ಮೆಯನ್ನು ತಂದಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುವುದನ್ನು ಮುಂದುವರಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್‌ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದೆ:

‘‘ತುಳಸಿಮತಿ ಮುರುಗೇಸನ್‌ ಮತ್ತು ಮಾನಸಿ ಜೋಶಿ ಅವರಿಗೆ ಅದ್ಭುತ ಚಿನ್ನ!

ಮಹಿಳಾ ಡಬಲ್ಸ್‌ ಎಸ್‌ಎಲ್‌ 3-ಎಸ್‌ ಯು 5 ನಲ್ಲಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಚಾಂಪಿಯನ್‌ ಆದ ಇವರಿಬ್ಬರಿಗೆ ಅಭಿನಂದನೆಗಳು. ಅವರ ಅದ್ಭುತ ಪ್ರದರ್ಶನವು ರಾಷ್ಟ್ರಕ್ಕೆ ಹೆಚ್ಚಿನ ಹೆಮ್ಮೆಯನ್ನು ತಂದಿದೆ. ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುವುದನ್ನು ಮುಂದುವರಿಸಲಿ: ಪ್ರಧಾನಮಂತ್ರಿ @narendramodi’’

 

*****