Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಟಿಬಿಪಿ ಸಿಬ್ಬಂದಿಗೆ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಂಸ್ಥಾಪನಾ ದಿನದ ಅಂಗವಾಗಿ ಇಂದು ಅಲ್ಲಿನ ಸಿಬ್ಬಂದಿಗೆ ಶುಭಾಶಯ ಕೋರಿದ್ದಾರೆ.

ಐಟಿಬಿಪಿ ಹಿಮ ವೀರರು ತಮ್ಮ ಅಸಾಧಾರಣ ಶೌರ್ಯದ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ ಮತ್ತು ಅವರು ಪ್ರತಿ ಸವಾಲನ್ನೂ ಅನನ್ಯ ಬದ್ಧತೆಯೊಂದಿಗೆ ಎದುರಿಸಿ ಮುನ್ನಡೆದಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗಗಳು ರಾಷ್ಟ್ರಕ್ಕೆ ಅಪಾರ ಸ್ಫೂರ್ತಿಯ ಸೆಲೆಯಾಗಿವೆ ಎಂದು ಅವರು ಹೇಳಿದ್ದಾರೆ.

 ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಐಟಿಬಿಪಿಯ ಸಂಸ್ಥಾಪನಾ ದಿನದಂದು, ಅದರ ಎಲ್ಲಾ ಸಿಬ್ಬಂದಿಗೆ ಶುಭಾಶಯಗಳು.

ಐಟಿಬಿಪಿಯ ‘ಹಿಮವೀರ’ರು ತಮ್ಮ ಅಸಾಧಾರಣ ಶೌರ್ಯದ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದಾರೆ.

ಅವರು ಯಾವಾಗಲೂ ಅನನ್ಯ ದೃಢನಿಶ್ಚಯದೊಂದಿಗೆ ಪ್ರತಿಯೊಂದು ಸವಾಲನ್ನೂ ಎದುರಿಸಿ ಮುನ್ನಡೆದಿದ್ದಾರೆ.

ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗಗಳು ರಾಷ್ಟ್ರಕ್ಕೆ ಅಗಾಧ ಸ್ಫೂರ್ತಿಯ ಮೂಲವಾಗಿವೆ.

@ITBP_official”

 

*****