Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ಬಸ್ತಾರ್ ನ ಕರಣ್ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ಬಸ್ತಾರ್ ನ ಕರಣ್ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದರು


   ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಲು ಬಸ್ತಾರ್ ಮತ್ತು ಅಬುಜಹಮದ್ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಿಗೆ ತರಬೇತಿ ನೆಲೆ ಮತ್ತು  ಕೇಂದ್ರವಾಗಿ ಕಾರ್ಯನಿರ್ವಹಿಸಿದ ಛತ್ತೀಸ್‌ಗಢದ ಬಸ್ತಾರ್ನ ಕರಣ್ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಗೆ ಭೇಟಿ ನೀಡಿದರು. ದೇಶ ಮತ್ತು ಪ್ರಪಂಚದಾದ್ಯಂತ ಕೋಟ್ಯಂತರ ಭಾರತೀಯರು ತಮ್ಮ ಪ್ರೀತಿಪಾತ್ರರೊಂದಿಗೆ ದೀಪಗಳ ಪವಿತ್ರ ಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹಿಮಾಲಯದಕಾರ್ಗಿಲ್ ಮತ್ತು ಲೆಪ್ಚಾದಿಂದ ಕರಾವಳಿಯ ಸರ್ ಕ್ರೀಕ್ ಮತ್ತು ಸಾಗರದಲ್ಲಿ ಐಎನ್ಎಸ್ ವಿಕ್ರಾಂತ್ ಹಡಗಿನವರೆಗೆ ವೀರ ಸೈನಿಕರೊಂದಿಗೆ ತಾವು ಆಚರಿಸಿದ ಸ್ಮರಣೀಯ ದೀಪಾವಳಿಯನ್ನು ಸ್ಮರಿಸಿದರು. “ಗಡಿಗಳಲ್ಲಿ ಮತ್ತು ದೇಶದೊಳಗೆ, ದೇಶವನ್ನು ರಕ್ಷಿಸುವ ರಾಷ್ಟ್ರದ ಕಾವಲುಗಾರರು, ಭಾರತ ಮಾತೆಯ ವೀರ ಪುತ್ರರು, ನೀವೆಲ್ಲರೂ ನನ್ನ ಪ್ರೀತಿಪಾತ್ರರು, ನೀವೆಲ್ಲರೂ ನನ್ನ ಕುಟುಂಬದ ಭಾಗ” ಎಂದು ಶ್ರೀ ಮೋದಿ ಹೇಳಿದರು.

ಮಾವೋವಾದಿ ಭಯೋತ್ಪಾದನೆಯ ವಿರುದ್ಧ ಭಾರತವು ದಶಕಗಳಷ್ಟು ಹಳೆಯದಾದ ಯುದ್ಧವನ್ನು ಗೆದ್ದು, ಪ್ರತಿ ಜಿಲ್ಲೆಯನ್ನು ನಕ್ಸಲ್ ಮುಕ್ತಗೊಳಿಸಿದ ಮತ್ತು ಕೋಟ್ಯಂತರ ನಾಗರಿಕರಿಗೆ ಭಯವನ್ನು ನಿವಾರಿಸಲು ಅನುವು ಮಾಡಿಕೊಟ್ಟ ನಂತರ 2026 ರ ದೀಪಾವಳಿಯನ್ನು ನಿಜವಾಗಿಯೂ ವಿಶೇಷವೆಂದು ಬಣ್ಣಿಸಿದ ಪ್ರಧಾನಮಂತ್ರಿ, ಈ ಅಸಾಧಾರಣ ಮೈಲಿಗಲ್ಲನ್ನು ಸಾಧ್ಯವಾಗಿಸಿದ ಲಕ್ಷಾಂತರ ಭದ್ರತಾ ಸಿಬ್ಬಂದಿಯೊಂದಿಗೆ ಆಚರಿಸಲು ಮತ್ತು 140 ಕೋಟಿ ನಾಗರಿಕರ ಕೃತಜ್ಞತೆಯನ್ನು ತಿಳಿಸಲು ತಾನು ಬಸ್ತಾರ್ಗೆ ಬಂದಿದ್ದೇನೆ ಎಂದು ವಿವರಿಸಿದರು. “ಇಂದು ನಾನು ನಿಮ್ಮ ತ್ಯಾಗ, ಸಮರ್ಪಣೆ ಮತ್ತು ಸೇವಾ ಮನೋಭಾವಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಂದಿದ್ದೇನೆ” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.

ಆಂತರಿಕ ಭದ್ರತೆ ಬಲಿಷ್ಠವಾಗಿರುವ ರಾಷ್ಟ್ರಕ್ಕೆ ಬಾಹ್ಯ ಶತ್ರುಗಳು ಹಾನಿ ಮಾಡಲು ಸಾಧ್ಯವಿಲ್ಲ ಆದರೆ ಆಂತರಿಕ ಭದ್ರತೆ ದುರ್ಬಲವಾದಾಗ ಅವರುತಲೆ ಎತ್ತುತ್ತಾರೆ ಎಂದು ವಿವರಿಸಲು ಪ್ರಾಚೀನ ಸಂಸ್ಕೃತ ಜ್ಞಾನದ ಉಕ್ತಿಯಾದ’ಅಭಯಂತರಂ ಭಯಂ ರಕ್ಷ್ಯಂ, ಆಸಾರಾಂ ಬಾಹ್ಯತೋ ಭಯಂ’ ಅನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಭದ್ರತಾ ಪಡೆಗಳ ಆಂತರಿಕ ಪಾತ್ರವನ್ನು ಗಡಿಯಲ್ಲಿರುವ ಸಶಸ್ತ್ರ ಪಡೆಗಳ ಪಾತ್ರಕ್ಕೆ ಹೋಲಿಸಿದರು ಮತ್ತು ಸಿಆರ್ಪಿಎಫ್, ಕೋಬ್ರಾ, ಬಿಎಸ್ಎಫ್, ಐಟಿಬಿಪಿ, ಎಸ್ಎಸ್ಬಿ, ಐಆರ್ಬಿ, ರಾಜ್ಯ ಪೊಲೀಸ್ ಪಡೆಗಳು, ಬಸ್ತಾರ್ ಫೈಟರ್ಸ್ ಕಮಾಂಡೋಗಳು ಮತ್ತು ಮಹಿಳಾ ಹೋರಾಟಗಾರರ ಅಪರಿಮಿತತ್ಯಾಗವನ್ನು ಶ್ಲಾಘಿಸಿದರು. “ನಿಮ್ಮ ಸೇವೆಗಳಿಗಾಗಿ ಈ ದೇಶವು ನಿಮಗೆ ಋಣಿಯಾಗಿದೆ ಮತ್ತು ಕೋಟ್ಯಂತರ ದೇಶವಾಸಿಗಳು ನಿಮ್ಮ ಬಗ್ಗೆ ಹೆಮ್ಮೆಪಡುತ್ತಾರೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಬಿಹಾರ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಸುಮಾರು 20 ರಾಜ್ಯಗಳ 230 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಡಪಂಥೀಯ ಉಗ್ರವಾದವು ಆವರಿಸಿದ್ದ ಕಠೋರ ಯುಗವನ್ನು ಸ್ಮರಿಸಿದ ಅವರು, ಅಲ್ಲಿ ಸಂಜೆ ಭಯದ ಕರ್ಫ್ಯೂ ಜಾರಿಯಲ್ಲಿತ್ತು, ಮತದಾನದ ಹಕ್ಕುಗಳನ್ನು ಕೂಡಾ ಕಸಿಯಲಾಗಿತ್ತು, ವಾರ್ಷಿಕ 2,000 ದಾಳಿಗಳು ನಡೆಯುತ್ತಿದ್ದವು, ಛತ್ತೀಸ್‌ಗಢವೊಂದರಲ್ಲೇ 1,000 ಕ್ಕೂ ಹೆಚ್ಚು ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದರು, ಐಇಡಿ ಸ್ಫೋಟದಿಂದ ಅಸಂಖ್ಯಾತ ಸೈನಿಕರು ಕೈಕಾಲುಗಳನ್ನು ಕಳೆದುಕೊಂಡರು ಮತ್ತು 2010 ರ ಪ್ರತ್ಯೇಕ ದಾಂತೇವಾಡ ದಾಳಿಗಳಲ್ಲಿ 76 ಸಿಆರ್ಪಿಎಫ್ ಸಿಬ್ಬಂದಿ ಮತ್ತು 44 ಮುಗ್ಧ ನಾಗರಿಕರು ಸಾವನ್ನಪ್ಪಿದರು, 2004 ಮತ್ತು 2013 ರ ನಡುವೆ ನಕ್ಸಲರು ಕೊಲ್ಲಲ್ಪಟ್ಟಿದ್ದಕ್ಕಿಂತ ಹೆಚ್ಚಿನ ಭದ್ರತಾ ಸಿಬ್ಬಂದಿ ವಾರ್ಷಿಕವಾಗಿ ಹುತಾತ್ಮರಾಗಿದ್ದರು, ಇದು ಮಾವೋವಾದಿ ನಾಯಕರಿಗೆ ಧೈರ್ಯ ತುಂಬಿತು ಎಂಬ ಅಂಶದ ಕಡೆಗೆಅವರುಗಮನಸೆಳೆದರು.

ಯಾವುದೇ ರಾಷ್ಟ್ರವು ತನ್ನ ಶತ್ರುಗಳ ಬಗ್ಗೆ ನಿಷ್ಕ್ರಿಯ ವಿಧಾನ ಅನುಸರಿಸುವುದಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಮತ್ತು ಅದರಬದಲಿಗೆ ಹೆಚ್ಚಿನ ನೈತಿಕ ಸ್ಥೈರ್ಯದಿಂದ ಅವರನ್ನು ವ್ಯೂಹಾತ್ಮ್ಕವಾಗಿ  ಹತ್ತಿಕ್ಕಬೇಕು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 2014 ರ ನಂತರ, ಭದ್ರತಾ ಪಡೆಗಳಲ್ಲಿ ಹೆಚ್ಚಿನ ಸಾವುನೋವುಗಳ ದಶಕಗಳಷ್ಟು ಹಳೆಯದಾದ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಿ, ಕಳೆದ ಒಂದು ವರ್ಷದಲ್ಲಿ ಒಬ್ಬ ಸಿಆರ್ಪಿಎಫ್ ಯೋಧರೂ ಕೂಡಾಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಳ್ಳದಂತಹ ಐತಿಹಾಸಿಕ ಮೈಲಿಗಲ್ಲು ಸಾಧನೆಸಾಧ್ಯವಾಗಿದೆ, ಇದು ಕಳೆದ ನಲವತ್ತೇಳುವರ್ಷದಲ್ಲಿ ಇದೇ ಮೊದಲು ಎಂದೂ ಅವರು ಹೇಳಿದರು. “ಇದು ದೇಶದ ಸರಿಯಾದ ನೀತಿಗಳು ಮತ್ತು ದೃಢವಾದ ಇಚ್ಛಾಶಕ್ತಿಯ ಗೆಲುವು ಮತ್ತು ಇದು ನಿಮ್ಮ ಶೌರ್ಯ, ಧೈರ್ಯ ಮತ್ತು ಸಂಯಮದ ಗೆಲುವು” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಯಶಸ್ಸಿಗೆ ಸರಿಯಾದ ಉದ್ದೇಶ ಮತ್ತು ಸರಿಯಾದ ನೀತಿಗಳು ಇವುಎರಡೂ ಬೇಕಾಗುತ್ತವೆ ಎಂದು ಹೇಳಿದ ಪ್ರಧಾನಮಂತ್ರಿ, ನಕ್ಸಲ್ ಮತ್ತು ಪ್ರತ್ಯೇಕತಾವಾದಿ ಧನಸಹಾಯದ ಮೂಲಗಳ ಮೇಲೆ ದಾಳಿ ಮಾಡಿದ ಮತ್ತು ನಕಲಿ ಕರೆನ್ಸಿ ಜಾಲವನ್ನು ನಾಶಪಡಿಸಿದ ಹಲವಾರು ಬಹಿರಂಗಪಡಿಸದ, ರಾಷ್ಟ್ರೀಯ ಭದ್ರತಾ ನಿರ್ಧಾರಗಳು ಸೇರಿದಂತೆ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. “ಇದು ಅವರ ಆರ್ಥಿಕ ಬೆನ್ನೆಲುಬನ್ನು ಮುರಿಯಿತು ಮಾತ್ರವಲ್ಲ, ಇಡೀ ಪೂರೈಕೆ ಮಾರ್ಗವು ಉಸಿರುಗಟ್ಟಿತು, ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸಿತು ಮತ್ತು ನಕ್ಸಲರ ಚಲನವಲನ ಮತ್ತು ನೇಮಕಾತಿಯನ್ನು ನಿಲ್ಲಿಸಿತು” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಪ್ರತಿಯೊಂದು ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ತಮ್ಮ ಸರ್ಕಾರ ಭದ್ರತಾ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯಾವುದೇ ತಾಯಿ ತನ್ನ ಮಗುವನ್ನು ಕಳೆದುಕೊಳ್ಳಬಾರದು, ಯಾವುದೇ ಕುಟುಂಬ ಹಾಳಾಗಬಾರದು ಮತ್ತು ಯಾವುದೇ ಯುಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬಾರದು ಎಂಬ ಏಕೈಕ ಗುರಿಯತ್ತ ಸರ್ಕಾರವು ಪ್ರಚಾರ ಅಥವಾ ಆಡಂಬರವಿಲ್ಲದೆ ದಣಿವರಿಯದೆ ಕೆಲಸ ಮಾಡಿದೆ ಎಂದು ವಿವರಿಸಿದ ಅವರು, ಮಾವೋವಾದಿ ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿಯುವ ಸೂಕ್ಷ್ಮ ಭದ್ರತಾ ಕಾರ್ಯಾಚರಣೆಗಳನ್ನು ಸಾರ್ವಜನಿಕ ಸೇವಾ ಮನೋಭಾವದೊಂದಿಗೆ ಸಂಯೋಜಿಸುವುದು ಹೇಗೆ ಅವರ ಜೀವನವನ್ನು ಬದಲಾಯಿಸಿತು ಮತ್ತು ಸಂತ್ರಸ್ತ ನಾಗರಿಕರನ್ನು ಸರ್ಕಾರ ಮತ್ತು ಭದ್ರತಾ ಪಡೆಗಳ ಹಿಂದೆ ಹೇಗೆ ಒಟ್ಟುಗೂಡಿಸಿತು ಎಂಬುದನ್ನು ವಿವರಿಸಿದ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದ ಸ್ಥಳೀಯ ನಾಗರಿಕರಿಗೆ ಹಾಗು ಅವರ ಪ್ರಮುಖ ಸಹಕಾರಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. “ಸೇವಾ ಮನೋಭಾವದೊಂದಿಗೆ, ನಾವು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಜನರ ಜೀವನವನ್ನು ಪರಿವರ್ತಿಸಿದ್ದೇವೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ರಾಷ್ಟ್ರ ಮೊದಲು ಎಂಬ ಮನೋಭಾವದಿಂದ ಕೆಲಸ ಮಾಡುವುದು ಶಾಂತಿ ಮತ್ತು ಭದ್ರತೆಯನ್ನು ಖಾತ್ರಿಗೊಳಿಸುತ್ತದೆ, ದೇಶವನ್ನು ಹೊಸ ಅಭಿವೃದ್ಧಿಯ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ರಾಷ್ಟ್ರೀಯ ಪ್ರಗತಿಯಲ್ಲಿ ಬಡವರು ಮತ್ತು ವಂಚಿತರ ಭಾಗವಹಿಸುವಿಕೆಯನ್ನು ವಿಸ್ತರಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ, ಕಳೆದ ಹನ್ನೆರಡು ವರ್ಷಗಳಲ್ಲಿ ರಾಷ್ಟ್ರವು ಸಾಧಿಸಿದ ದ್ವಿ ವಿಜಯದ ಬಗ್ಗೆ ಗಮನಸೆಳೆದರು. “ಕಳೆದ 12 ವರ್ಷಗಳಲ್ಲಿ, ದೇಶವು ನಕ್ಸಲಿಸಂ ಮತ್ತು ಪ್ರತ್ಯೇಕತಾವಾದದ ವಿರುದ್ಧದ ಯುದ್ಧವನ್ನು ಗೆದ್ದಿರುವುದು ಮಾತ್ರವಲ್ಲ, ಜೊತೆಗೆ ದೇಶವು ಬಡತನದ ವಿರುದ್ಧದ ಪ್ರಮುಖ ಯುದ್ಧವನ್ನು ಗೆದ್ದಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ದೀಪಾವಳಿಗೆ ಸ್ವಲ್ಪ ಮುಂಚಿತವಾಗಿ ಬಿಡುಗಡೆಯಾದ ವ್ಯಾಪಕವಾಗಿ ಚರ್ಚಿಸಲಾದ ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಳೆದ 12 ವರ್ಷಗಳಲ್ಲಿ 50 ಕೋಟಿ ಭಾರತೀಯರು ತೀವ್ರ ಬಡತನದಿಂದ ಪಾರಾಗಿದ್ದಾರೆ ಎಂದರು.

ಕಳೆದ 12 ವರ್ಷಗಳಲ್ಲಿ ಭಾರತದ ಕಲ್ಯಾಣ ವಾಸ್ತುಶಿಲ್ಪವನ್ನು ದೀಪಾವಳಿ ರಂಗೋಲಿಗೆ ಹೋಲಿಸಿದ ಪ್ರಧಾನಮಂತ್ರಿಯವರು, ಸಣ್ಣ, ವಿಭಿನ್ನ ರೇಖೆಗಳು ಒಟ್ಟಿಗೆ ಸೇರಿ ಭವ್ಯವಾದ ಚಿತ್ರಣವನ್ನು ರೂಪಿಸುತ್ತವೆ. ಜನ್ ಧನ್ ಬ್ಯಾಂಕಿಂಗ್, ಪಿಎಂ ಆವಾಸ್ ಪಕ್ಕಾ ಮನೆಗಳು, ಮೇಲಾಧಾರ ರಹಿತ ಮುದ್ರಾ ಸಾಲಗಳು, ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಬೆಂಬಲ, ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷಣೆ, ಉಚಿತ ಮಾಸಿಕ ಪಡಿತರ, ಮಕ್ಕಳ ಶಿಕ್ಷಣ ನೀತಿಗಳು, ಸ್ವಚ್ಛ ಭಾರತ್ ಮತ್ತು ಹರ್ ಘರ್ ಜಲ್ ಒಟ್ಟಾಗಿ ಉಚಿತ ಔಷಧ, ಉಚಿತ ಶಿಕ್ಷಣ ಮತ್ತು ಉಚಿತ ಅಡುಗೆಮನೆಯನ್ನು ಹೇಗೆ ಖಾತ್ರಿಪಡಿಸಿವೆ ಎಂಬುದನ್ನು ವಿವರಿಸಿದರು. “ಇಡೀ ಜೀವನವನ್ನು ಕೇವಲ ಚಿಂತೆಯಲ್ಲಿ ಕಳೆಯುತ್ತಿದ್ದ ಬಡ ಕುಟುಂಬಗಳು ಈಗ ಸರ್ಕಾರದ ಭರವಸೆಯನ್ನು ಪಡೆದಿವೆ ಮತ್ತು ಅವರಲ್ಲಿ ಹೊಸ ಆತ್ಮವಿಶ್ವಾಸ ಬಂದಿದೆ” ಎಂದು ಶ್ರೀ ಮೋದಿ ಹೇಳಿದರು.

ಈ ಹಿಂದೆ ಶಾಲೆಗಳು, ಆಸ್ಪತ್ರೆಗಳು, ವೈದ್ಯಕೀಯ ಮಳಿಗೆಗಳು, ಪೋಲಿಯೊ ಲಸಿಕೆಗಳು, ಮೊಬೈಲ್ ಟವರ್ ಗಳು ನಿರಾಕರಿಸಲ್ಪಟ್ಟಿದ್ದವು ಮತ್ತು ಕೈಗಾರಿಕೆಗಳನ್ನು ತಡೆಯಲಾಗಿತ್ತು,  ರೈಲ್ವೆ ಹಳಿಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಲಕ್ಷಾಂತರ ಮುಗ್ಧ ನಾಗರಿಕರನ್ನು ಅವಕಾಶ ನಿರಾಕರಿಸಿ ಜಾಲದಲ್ಲಿ ಸಿಲುಕಿಸಲಾಗಿತ್ತು. ಆದ್ದರಿಂದ ನಕ್ಸಲಿಸಂ ವಿರುದ್ಧದ ಹೋರಾಟ ಹೇಗೆ ಬಡತನದ ವಿರುದ್ಧದ  ಗೆಲುವಿನ ಜೊತೆಗೆ ಆಳವಾಗಿ ಸಂಬಂಧ ಹೊಂದಿದೆ ಎಂಬುದರತ್ತ ಗಮನಸೆಳೆದ ಪ್ರಧಾನಮಂತ್ರಿಯವರು, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ವಿಶೇಷ ಅಭಿವೃದ್ಧಿಕಾರ್ಯಕ್ರಮಗಳ ಮೂಲಕ15,000 ಕಿಲೋಮೀಟರ್ ರಸ್ತೆಗಳು, 9,500 ಕ್ಕೂ ಹೆಚ್ಚು ಮೊಬೈಲ್ ಟವರ್ಗಳು, ಸುಮಾರು 175 ಏಕಲವ್ಯ ಶಾಲೆಗಳು, ಸುಮಾರು 50 ಐಟಿಐಗಳು, 50 ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಮತ್ತು ಸಾವಿರಾರು ಅಂಚೆ ಕಚೇರಿಗಳು, ಬ್ಯಾಂಕ್ ಶಾಖೆಗಳು ಮತ್ತು ಎಟಿಎಂಗಳನ್ನು ನಿರ್ಮಿಸಲಾಗಿದೆ ಎಂದರು. “ನಾವು ನಕ್ಸಲಿಸಂ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದಾಗ, ಅದೇ ಸಮಯದಲ್ಲಿ ನಾವು ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಅಭಿಯಾನಗಳನ್ನು ನಡೆಸಿದ್ದೇವೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು

‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಅಭಿಯಾನವು ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಿದೆ ಮತ್ತು 50 ಕೋಟಿ ಜನರನ್ನು ತೀವ್ರ ಬಡತನದಿಂದ ಮೇಲೆತ್ತುವುದರ ಜೊತೆಗೆ ನಕ್ಸಲ್ ಹಿಂಸಾಚಾರವನ್ನು ಕೊನೆಗೊಳಿಸಿದೆ ಎಂದು ಹೇಳಿದ ಪ್ರಧಾನಮಂತ್ರಿ, ಪ್ರಸ್ತುತ ನಡೆಯುತ್ತಿರುವ ಬಸ್ತಾರ್ ಒಲಿಂಪಿಕ್ಸ್ ಈ ಪ್ರದೇಶದ ಪರಿವರ್ತನೆಯ ಸಂಕೇತವಾಗಿದೆ ಎಂದು ಉಲ್ಲೇಖಿಸಿದರು. “ಇಂದು ಇದೇ ಬಸ್ತಾರ್ನಲ್ಲಿ, ಬಸ್ತಾರ್ ಒಲಿಂಪಿಕ್ಸ್ ನಡೆಯುತ್ತಿದೆ, ಮತ್ತು ಮಕ್ಕಳು ಕ್ರೀಡೆಯಲ್ಲಿ ತಮ್ಮ ಶಕ್ತಿಯನ್ನು ವಿನಿಯೋಗಿಸುತ್ತಿದ್ದಾರೆಯೇ ಹೊರತು ಬಂದೂಕುಗಳ ಮೇಲಲ್ಲ” ಎಂದು ಶ್ರೀ ಮೋದಿ ಹೇಳಿದರು.

ಇಂದಿನ ಮೈಲಿಗಲ್ಲುಗಳು ನಿಲುಗಡೆಯ, ವಿರಾಮದ ಬಿಂದುವಾಗದೆ ಉತ್ಸಾಹದ ಲಾಂಚ್ ಪ್ಯಾಡ್ ಆಗಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಹೊಸ ಯಾನವು ಸ್ವಾತಂತ್ರ್ಯ ಹೋರಾಟಗಾರರ   ಶತಮಾನಗಳಷ್ಟು ಹಳೆಯ ಕನಸುಗಳನ್ನು, ನಕ್ಸಲಿಸಂ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಗಡಿ ಸೈನಿಕರು ಮತ್ತು ಸಿಬ್ಬಂದಿಯ ಕನಸುಗಳನ್ನು ಈಡೇರಿಸುತ್ತದೆ ಎಂದೂ ಹೇಳಿದರು. ‘ತೇರಾ ಗೌರವ್ ಅಮರ್ ರಹೇ ಮಾ, ಹಮ್ ದಿನ್ ಚಾರ್ ರಹೇ ನಾ ರಹೇನ್’ ಎಂಬ ಧ್ಯೇಯವಾಕ್ಯದೊಂದಿಗೆ ಬದುಕುತ್ತಿರುವ ಪಡೆಗಳಿಗೆ ಹೊಸಆತ್ಮವಿಶ್ವಾಸದೊಂದಿಗೆ ಸಾಗುವಂತೆ ಆಗ್ರಹಿಸಿದರು “ರಾಷ್ಟ್ರಕ್ಕಾಗಿ ಬದುಕುವ ಮತ್ತು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಮಯ ಇದಾಗಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸುವುದು, ಗೃಹ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸುವಂತಹ ಪ್ರಮುಖ ಪ್ರತಿಜ್ಞೆಗಳನ್ನು ಈಡೇರಿಸುವಲ್ಲಿ ರಾಷ್ಟ್ರದ ಸಾಬೀತಾದ ದಾಖಲೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭದ್ರತಾ ಪಡೆಗಳು ಮತ್ತು ನಾಗರಿಕರಲ್ಲಿ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದರು.ಭಾರತವು ಅದೇ ರೀತಿ ಬಡತನವನ್ನು ನಿರ್ಮೂಲನೆ ಮಾಡುವ ಮತ್ತು ಮಾದಕ ದ್ರವ್ಯ ಮುಕ್ತ, ಆತ್ಮನಿರ್ಭರ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವ ತನ್ನ ಗುರಿಗಳನ್ನು ಸಾಧಿಸುತ್ತದೆ ಎಂದು ಅವರು ಹೇಳಿದರು. ದೀಪಾವಳಿಯ ಶುಭಾಶಯಗಳೊಂದಿಗೆ ಮಾತುಗಳನ್ನುಮುಕ್ತಾಯಗೊಳಿಸುವ ಮೊದಲು ಈ ಕನಸುಗಳು ನನಸಾಗಲು ಪ್ರತಿಯೊಬ್ಬರೂ ಕೆಲಸ ಮಾಡಬೇಕೆಂದು ಆಗ್ರಹಿಸಿದರು. “ನಿಮ್ಮ ತ್ಯಾಗ ಮತ್ತು ಕಠಿಣ ಪರಿಶ್ರಮವು ವಿಕಸಿತ ಭಾರತದ ಭವ್ಯ ಕಟ್ಟಡಕ್ಕೆ ಬಲವಾದ ಅಡಿಪಾಯವಾಗಲಿದೆ” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.

 

*****