Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ರತ್ನ ಶ್ರೀ ಎಲ್. ಕೆ. ಅಡ್ವಾಣಿ ಅವರು 100ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಂದ ಶುಭ ಹಾರೈಕೆ


ಭಾರತರತ್ನ ಪುರಸ್ಕೃತರು ಹಾಗೂ ಮಾಜಿ ಉಪಪ್ರಧಾನಮಂತ್ರಿ ಶ್ರೀ ಎಲ್. ಕೆ. ಅಡ್ವಾಣಿ ಅವರು ನವೆಂಬರ್ 8 ರಂದು 100ನೇ ವಸಂತಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿಯವರು ಲೇಖನವೊಂದರಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಾ, ಭಾರತಕ್ಕೆ ಅಡ್ವಾಣಿ ಅವರು ನೀಡಿರುವ ಚಿರಸ್ಮರಣೀಯ ಕೊಡುಗೆಗಳನ್ನು ವಿವರಿಸಿದ್ದಾರೆ. ದೇಶ ವಿಭಜನೆಯ ಭೀಕರತೆಯನ್ನು ಅನುಭವಿಸಿ, ಶೂನ್ಯದಿಂದ ಜೀವನವನ್ನು ಮತ್ತೆ ಕಟ್ಟಿಕೊಂಡಿದ್ದರಿಂದ ಹಿಡಿದು, ಜನಸಂಘವನ್ನು ಬಲಪಡಿಸುವುದು, ಬಿಜೆಪಿಯನ್ನು ರೂಪಿಸುವುದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕಾಗಿ ದನಿ ಎತ್ತುವುದು, ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆಯ ನೇತೃತ್ವ ವಹಿಸುವುದು ಹಾಗೂ ಸರ್ಕಾರದಲ್ಲಿ ರಾಷ್ಟ್ರಸೇವೆ ಸಲ್ಲಿಸುವವರೆಗಿನ ಅಡ್ವಾಣಿ ಅವರ ಸುದೀರ್ಘ ಪಯಣವನ್ನು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ.

ಅಡ್ವಾಣಿ ಅವರ ಓದಿನ ಆಸಕ್ತಿ, ಸಂಸ್ಕೃತಿ ಹಾಗೂ ಸಿನಿಮಾದ ಮೇಲಿನ ಒಲವು ಮತ್ತು ಒಬ್ಬ ಸಮರ್ಥ ಲೇಖಕರಾಗಿ ಅವರು ನೀಡಿರುವ ಕೊಡುಗೆಗಳನ್ನು ಸಹ ಶ್ರೀ ಮೋದಿ ಅವರು ವಿವರಿಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಇಂದು, ನವೆಂಬರ್ 8, ಒಂದು ಮಹತ್ವದ ದಿನ. ಮಾನ್ಯ ಎಲ್.ಕೆ. ಅಡ್ವಾಣಿ ಅವರು ತಮ್ಮ ನೂರನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ಅವರಿಗೆ ನನ್ನ ಶುಭಾಶಯಗಳು.

ಭಾರತಕ್ಕೆ ಅವರು ನೀಡಿರುವ ಅನುಪಮ ಕೊಡುಗೆಗಳನ್ನು ತಿಳಿಸುವ ಲೇಖನವೊಂದನ್ನು ನಾನು ಬರೆದಿದ್ದೇನೆ.

ವಿಭಜನೆಯ ಭೀಕರತೆಯನ್ನು ಅನುಭವಿಸಿರುವುದು ಮತ್ತು ಜೀವನವನ್ನು ಮೊದಲಿನಿಂದ ಪುನರ್ನಿರ್ಮಿಸುವುದು, ಜನಸಂಘವನ್ನು ಬಲಪಡಿಸುವುದು ಮತ್ತು ಬಿಜೆಪಿಯನ್ನು ನಿರ್ಮಿಸುವುದು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು, ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆಯನ್ನು ಮುನ್ನಡೆಸುವುದು ಅಥವಾ ಸರ್ಕಾರದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು – ಅವರ ಜೀವನ ಪಯಣವನ್ನು ನಾನು ನೆನಪು ಮಾಡಿಕೊಂಡಿದ್ದೇನೆ.

ಅಡ್ವಾಣಿ ಅವರ ಇತರ ಆಯಾಮಗಳ ಬಗ್ಗೆಯೂ ಬರೆದಿದ್ದೇನೆ – ಅವರು ಓದಿನಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರು, ಸಂಸ್ಕೃತಿ ಹಾಗೂ ಸಿನಿಮಾದ ಬಗ್ಗೆ ಅವರಿಗೆ ವಿಶೇಷ ಒಲವಿದೆ, ಅವರು ಒಬ್ಬ ಸಮರ್ಥ ಲೇಖಕರು, ಹೀಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಬರೆದಿದ್ದೇನೆ.

ಇಂಗ್ಲಿಷ್  – https://www.narendramodi.in/bharat-ratna-lk-advani-ji-at-100

ಹಿಂದಿ – https://www.narendramodi.in/hi/bharat-ratna-lk-advani-ji-at-100”
 

 

*****