Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಿಷ್ಪಕ್ಷಪಾತತೆ, ನಿಸ್ವಾರ್ಥತೆ ಮತ್ತು ನ್ಯಾಯದ ಸದ್ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಜವಾದ ಸದ್ಗುಣಶೀಲ ವ್ಯಕ್ತಿಗಳ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. ಈ ಶ್ಲೋಕವು ಎಲ್ಲಾ ಜೀವಿಗಳನ್ನು ಸಮಾನತೆಯಿಂದ ಪರಿಗಣಿಸುವುದು, ವೈಯಕ್ತಿಕ ಆಸೆಗಳು ಮತ್ತು ಕೋಪದಿಂದ ಮುಕ್ತವಾಗಿರುವುದು ಮತ್ತು ನ್ಯಾಯದ ಹಾದಿಯಿಂದ ಎಂದಿಗೂ ವಿಮುಖರಾಗಬಾರದು ಎಂದು ಒತ್ತಿಹೇಳುತ್ತದೆ.

ಸಂಸ್ಕೃತ ಸುಭಾಷಿತ ಪತ್ರವನ್ನು ಹಂಚಿಕೊಂಡ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“समाः सर्वेषु भूतेषु कामक्रोधविवर्जिताः।

न्यायमार्गं न मुञ्चन्ति ते वै सत्पुरुषाः स्मृताः।”

 

*****