ಪ್ರಗತಿಪರ ರಾಷ್ಟ್ರವೊಂದರ ಶಕ್ತಿ ಮತ್ತು ಸಾಮರ್ಥ್ಯವು ತಪಸ್ಸು, ಧಾರ್ಮಿಕ ಆಚರಣೆಗಳು ಹಾಗೂ ಸರ್ವರ ಕಲ್ಯಾಣದ ಆಶಯವನ್ನು ಆಧರಿಸಿದೆ ಎಂಬ ಸಂದೇಶ ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ;
“भद्रमिच्छन्त ऋषयः स्वर्विदस्तपो दीक्षामुपनिषेदुरग्रे।
ततो राष्ट्रं बलमोजश्च जातं तदस्मै देवा उपसन्नमन्तु॥”
ಸರ್ವರ ಕಲ್ಯಾಣವನ್ನು ಬಯಸುವ ಹಾಗೂ ಸ್ವರ್ಗದ ಜ್ಞಾನ ಹೊಂದಿರುವ ಋಷಿಮುನಿಗಳು ಆರಂಭದಲ್ಲಿ ತಪಸ್ಸು ಮತ್ತು ಧಾರ್ಮಿಕ ಆಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ತಪಸ್ಸು ಮತ್ತು ಧಾರ್ಮಿಕ ಆಚರಣೆಗಳ ಫಲವಾಗಿ ರಾಷ್ಟ್ರ, ಅದರ ಶಕ್ತಿ ಹಾಗೂ ಸಾಮರ್ಥ್ಯ ಉದಯಿಸಿದವು. ಇಂತಹ ಪ್ರಗತಿಪರ ರಾಷ್ಟ್ರ ಮತ್ತು ಅದರ ಶಕ್ತಿಗೆ ದೇವತೆಗಳೂ ಗೌರವ ಸಲ್ಲಿಸುತ್ತಾರೆ.
*****
भद्रमिच्छन्त ऋषयः स्वर्विदस्तपो दीक्षामुपनिषेदुरग्रे। ततो राष्ट्रं बलमोजश्च जातं तदस्मै देवा उपसन्नमन्तु॥ https://t.co/hSi37V0Dcs
— Narendra Modi (@narendramodi) November 11, 2026