ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮನಿಲಾದ ಖಾಲ್ಸಾ ದಿವಾನ್ ಗುರುದ್ವಾರಕ್ಕೆ ಭೇಟಿ ನೀಡಿದರು ಮತ್ತು ‘ಪಂಚ್ ಪ್ಯಾರೆ’ ಯವರ (ಸಾಂಪ್ರದಾಯಿಕ ವಿಧಿ ವಿಧಾನ ಕೈಗೊಳ್ಳುವ ಐವರು) ಸಮ್ಮುಖದಲ್ಲಿ, ಗುರುದ್ವಾರದ ಪುನರಾಭಿವೃದ್ಧಿಗಾಗಿ ಶಿಲಾನ್ಯಾಸ ಸಮಾರಂಭದ ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ಸೆನೆಟರ್ ಮಾನ್ಯ ಫ್ರಾನ್ಸಿಸ್ ಜೋಸೆಫ್ ಎಸ್ಕುಡೆರೊ, ಮನಿಲಾ ನಗರದ ಮೇಯರ್ ಮಾನ್ಯ ಫ್ರಾನ್ಸಿಸ್ಕೊ ಇಸ್ಕೊ ಮೊರೆನೊ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೂಲತಃ 1901ರಲ್ಲಿ ಸ್ಥಾಪನೆಗೊಂಡು, 1903ರಲ್ಲಿ ಔಪಚಾರಿಕವಾಗಿ ಸಂಘಟಿತವಾದ ಈ ಸಂಸ್ಥೆಯು, 1924ರಲ್ಲಿ ‘ಖಾಲ್ಸಾ ದಿವಾನ್’ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿತು. ಫಿಲಿಪ್ಪೈನ್ಸ್ ನಲ್ಲಿರುವ ಅತ್ಯಂತ ಹಳೆಯ ಗುರುದ್ವಾರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ‘ಖಾಲ್ಸಾ ದಿವಾನ್ ಗುರುದ್ವಾರ’, ಮನಿಲಾದಲ್ಲಿರುವ ಸಿಖ್ ಹಾಗೂ ಇತರ ಸಮುದಾಯಗಳಿಗಾಗಿ ತನ್ನ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳ ಮೂಲಕ ಪ್ರಮುಖ ಪಾತ್ರ ವಹಿಸುತ್ತಲಿದೆ.
ಖಾಲ್ಸಾ ದಿವಾನ್ ಗುರುದ್ವಾರವು ಭಾರತೀಯ-ಸಿಖ್ ಸಮುದಾಯ ಮತ್ತು ಫಿಲಿಪ್ಪೈನ್ ಸಮಾಜದ ನಡುವೆ ಪ್ರಮುಖ ಕೊಂಡಿಯಾಗಿದೆ.
*****
Feeling very blessed to be at the Gurudwara Khalsa Diwan in Manila. ਗੁਰਦੁਆਰਾ ਖ਼ਾਲਸਾ ਦੀਵਾਨ, ਮਨੀਲਾ ਵਿਖੇ ਆ ਕੇ ਬਹੁਤ ਵਡਭਾਗਾ ਮਹਿਸੂਸ ਕਰ ਰਿਹਾ ਹਾਂ। https://t.co/JNuNFMq6Ja
— Narendra Modi (@narendramodi) November 17, 2026