ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಪೋರ್ಚುಗಲ್ ನಡುವೆ ಪುನರ್ ನವೀಕರಿಸಬಹುದಾದ ಇಂಧನ ಕುರಿತಂತೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಿರುವುದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ನವದೆಹಲಿಯಲ್ಲಿ 2017ರ ಜನವರಿ 6ರಂದು ಸಹಿ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಹಕಾರ ಬಲಪಡಿಸಲು ಸಹಕಾರಿಯಾಗಲಿದೆ.
ಪರಸ್ಪರ ಹಿತ ಹಾಗೂ ಸಮಾನತೆ ಮತ್ತು ಪರಸ್ಪರ ಸಂಬದ್ಧತೆಯ ಆಧಾರದ ಮೇಲೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ದ್ವಿಪಕ್ಷೀಯ ತಾಂತ್ರಿಕ ಸಹಕಾರವನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸಾಂಸ್ಥಿಕ ಸಹಕಾರಿ ಬಾಂಧವ್ಯದ ಆಧಾರ ಸ್ಥಾಪಿಸುವ ಗುರಿಯನ್ನು ಎರಡೂ ಕಡೆಯವರು ಹೊಂದಿದ್ದಾರೆ. ಈ ತಿಳಿವಳಿಕೆ ಒಪ್ಪಂದವು, ವೈಜ್ಞಾನಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾಲಯಗಳು ಅಥವಾ ಯಾವುದೇ ಇತರ ಕಾಯದಿಂದ ಅಗತ್ಯ ಬಿದ್ದಾಗ ಸಹ ಸದಸ್ಯನನ್ನಾಗಿ ಮಾಡಿಕೊಳ್ಳುವ ಅಧಿಕಾರ ಇರುವ ಜಂಟಿ ಕಾರ್ಯ ಗುಂಪಿನ ಸ್ಥಾಪನೆಗೆ ಅವಕಾಶ ನೀಡುತ್ತದೆ.
AKT/VBA/SH