ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಿಣಿದಾರರಿಗೆ ತುಟ್ಟಿ ಪರಿಹಾರವನ್ನು 01.01.2017ರಿಂದ ಅನ್ವಯವಾಗುವಂತೆ ಹೆಚ್ಚುವರಿ ಕಿಂತಿನ ಬಿಡುಗಡೆಗೆ ತನ್ನ ಅನುಮೋದನೆ ನೀಡಿದೆ.
ದರ ಏರಿಕೆಯನ್ನು ಸರಿದೂಗಿಸಲು ಪ್ರಸ್ತುತ ಇರುವ ಮೂಲ ವೇತನ/ಪಿಚಣಿಯ ಶೇ.2 ದರದ ಮೇಲೆ ಶೇ.2ರಷ್ಟು ಏರಿಕೆ ಮಾಡಲಾಗಿದೆ.
ಈ ಏರಿಕೆಯು ಒಪ್ಪಿತ ಸೂತ್ರಕ್ಕೆ ಅನುಗುಣವಾಗಿದ್ದು, ಇದು 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲಿದೆ.
ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡೂ ಸೇರಿ ಒಟ್ಟಾರೆ ಬೊಕ್ಕಸಕ್ಕೆ ವಾರ್ಷಿಕ ರೂ.5,857.28 ಕೋಟಿ ಮತ್ತು 2017-18ನೇ ಆರ್ಥಿಕ ವರ್ಷದಲ್ಲಿ ರೂ. 6,833.50 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. (ಜನವರಿ 2017ರಿಂದ 2018ರ ಫೆಬ್ರವರಿಯವರೆಗೆ 14 ತಿಂಗಳುಗಳಿಗೆ).
ಇದರಿಂದ ಸುಮಾರು 48.45 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 55.51 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
AKT/VBA/SH