Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಲ್ಮಾಂಟ್ ಫೋರಂ ಸೆಕ್ರೇಟರಿಯೆಟ್ ಗೆ ಬೆಂಬಲ ನೀಡಲು ಸಹಯೋಗ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಫ್ರೆಂಚ್ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎ.ಎನ್.ಆರ್.), ಫ್ರಾನ್ಸ್ ನೊಂದಿಗೆ ಬೆಲ್ಮಾಂಟ್ ಫೋರಂ ಸೆಕ್ರೇಟರಿಯೆಟ್ ಗೆ 2015-ಜನವರಿಯಿಂದ 2017ರ ಡಿಸೆಂಬರ್ ವರೆಗೆ ಒಟ್ಟು 40,000 ಯೂರೋ ಅಂದಾಜು ವೆಚ್ಚದೊಂದಿಗೆ ಬೆಂಬಲ ನೀಡಲು ಸಹಯೋಗ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಒಪ್ಪಿಗೆ ನೀಡಿದೆ. ಸಂಪುಟವು 2017ರ ನಂತರವೂ ಬೆಲ್ಮಾಂಟ್ ಫೋರಂ ಸೆಕ್ರೇಟರಿಯೆಟ್ ಗೆ ಆರ್ಥಿಕ ಬೆಂಬಲ ಮುಂದುವರಿಸಲೂ ತನ್ನ ಸಮ್ಮತಿ ಸೂಚಿಸಿದೆ.

ಜಾಗತಿಕ ಪರಿಸರಾತ್ಮಕ ಬದಲಾವಣೆ ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಮಂಡಳಿಯ ವಿಶ್ವದ ಪ್ರಮುಖ ಮತ್ತು ಹೊರಹೊಮ್ಮುತ್ತಿರುವ ಹೂಡಿಕೆದಾರನಾಗಿ  ಬೆಲ್ಮಾಂಟ್ ಫೋರಂ ಅನ್ನು 2009 ರಲ್ಲಿ ರಚಿಸಲಾಯಿತು. ಸ್ವಾಭಾವಿಕ ಮತ್ತು ಸಾಮಾಜಿಕ ವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಸಂಪನ್ಮೂಲಗಳ ಸರಿ ಜೋಡಣೆಯೊಂದಿಗೆ ಬಹುರಾಷ್ಟ್ರೀಯ ಸಂಶೋಧನೆ ಸಹಯೋಗದ ಮೂಲಕ ಸಮಾಜಕ್ಕೆ ಅಂತಾರಾಷ್ಟ್ರೀಯ ಪರಿಸರಾತ್ಮಕ ಸಂಶೋಧನೆ ಆದ್ಯತೆಗಳ ಅಧ್ಯಯನಕ್ಕೆ ಗುರುತಿಸುವುದಕ್ಕೆ ಒಂದು ಅವಕಾಶವನ್ನು ಇದು ಒದಗಿಸುತ್ತದೆ.

ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಜರ್ಮನಿ, ಜಪಾನ್, ನೆದರ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಯು.ಕೆ. ಮತ್ತು ಯು.ಎಸ್.ಎ. ಇತ್ಯಾದಿಯೊಂದಿಗೆ ಭಾರತತವು ಬೆಲ್ಮಾಂಟ್ ಫೋರಂನ ಸದಸ್ಯ ರಾಷ್ಟ್ರವಾಗಿದೆ. ಭೂ ವಿಜ್ಞಾನಗಳ ಸಚಿವಾಲಯವು (ಎಂ.ಓ.ಇ.ಎಸ್) ಬೆಲ್ಮಾಂಟ್ ಫೋರಂನಲ್ಲಿ ಭಾರತವನ್ನು 2012ರಿಂದ ಪ್ರತಿನಿಧಿಸುತ್ತಿದೆ.

ಬೆಲ್ಮೌಂಟ್ ನ ಚಟುವಟಿಕೆಗಳೊಂದಿಗೆ ಸಹಯೋಗ ನೀಡುವ ಸಲುವಾಗಿ, ಬೆಲ್ಮೌಂಟ್ ಫೋರಂನ ಸೆಕ್ರೇಟರಿಯೆಟ್ ಅನ್ನು ಆವರ್ತನ ಆಧಾರದ ಮೇಲೆ ರೂಪಿಸಲಾಗಿದೆ. ಎ.ಎನ್.ಆರ್. ಫ್ರಾನ್ಸ್ 2015ರ ಜನವರಿಯಿಂದ 2017ರ ಡಿಸೆಂಬರ್ ವರೆಗೆ ಈ ಸೆಕ್ರೇಟರಿಯೆಟ್ ಆತಿಥ್ಯವಹಿಸಲಿದೆ. ಸೆಕ್ರೇಟರಿಯೆಟ್ ಹೋಸ್ಟಿಂಗ್ ನ ವೆಚ್ಚವನ್ನು ಬೆಲ್ಮಾಂಟ್ ಫೋರಂ ಸದಸ್ಯರು ನಗದು ಅಥವಾ ಸೇವೆಯ ರೂಪದಲ್ಲಿ ಭರಿಸುತ್ತಾರೆ.   

 

ಪರಿಣಾಮ:

ಈ ಒಪ್ಪಂದವು ಬೆಲ್ಮಾಂಟ್ ಫೋರಂನ ಕಾರ್ಯಚಟುವಟಿಕೆಯಲ್ಲಿ ನಿರ್ದಿಷ್ಟ ಕೋನದ ನಿರಂತರತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ ಮತ್ತು ಬೆಲ್ಮಾಂಟ್ ಫೋರಂನ ಚಟುವಟಿಕೆಗಳ ಸರಾಗ ಸಹಯೋಗಕ್ಕೂ ಸಹಕಾರಿಯಾಗುತ್ತದೆ. ಭಾರತವು ಈಗಾಗಲೇ 4 ಸಹಯೋಗದ ಸಂಶೋಧನಾ ಕ್ರಮಗಳಲ್ಲಿ (ಸಿ.ಆರ್.ಎಗಳು)ಭಾಗಿಯಾಗಿದೆ ಮತ್ತು ಸೆಕ್ರೇಟರಿಯೆಟ್ ಬೆಲ್ಮಾಂಟ್ ಫೋರಂನ ಚಟುವಟಿಕೆಗಳಿಗೆ ಸಹಯೋಗ ನೀಡುತ್ತದೆ, ಭಾರತೀಯ ವೈಜ್ಞಾನಿಕ ಸಮುದಾಯವು ಈ ಒಪ್ಪಂದದಿಂದ ಪ್ರಯೋಜನ ಪಡೆಯಲಿದೆ.

ಹಿನ್ನೆಲೆ

ಬೆಲ್ಮಾಂಟ್ ಫೋರಂ ಆರಂಭವಾದ 2009ರಿಂದ, ಅದರ ಕಾರ್ಯಚಟುವಟಿಕೆಗಳನ್ನು ಬೆಲ್ಮಾಂಟ್ ಫೋರಂನ ಸಂಬಂಧಿತ ಅಧ್ಯಕ್ಷತೆಯೊಂದಿಗೆ ಜೊತೆಗೂಡಿದ  ಅರೆಕಾಲಿಕ ಸೆಕ್ರೇಟರಿಯೆಟ್ ನಿರ್ವಹಿಸುತ್ತಿತ್ತು.  ಸಹ ಅಧ್ಯಕ್ಷತೆಯು ಆವರ್ತನವಾಗಿದ್ದ ಕಾರಣ, ಸೆಕ್ರೇಟರಿಯೆಟ್ ಕೂಡ ಆವರ್ತನಗೊಳ್ಳುತ್ತಿತ್ತು ಮತ್ತು ಕೆಲವೊಮ್ಮೆ ಸಹ ಅಧ್ಯಕ್ಷ ರಾಷ್ಟ್ರಗಳು ಅನ್ಯ ಸಮಯ ವಲಯಕ್ಕೆ ಸೇರಿತ್ತಿತ್ತು.  ಫೋರಂನ ಕಾರ್ಯಚಟುವಟಿಕೆಗಳ ನಿರಂತರತೆಯ ನಿರ್ದಿಷ್ಟ ಕೋನದ ನಿರ್ವಹಣೆಯನ್ನು ನಡೆಸುವ ಸಲುವಾಗಿ ಆವರ್ತನ ಆಧಾರದಲ್ಲೇ ಪೂರ್ಣ ಪ್ರಮಾಣದ ಸೆಕ್ರೇಟರಿಯೆಟ್ ಅನ್ನು ಸ್ಥಾಪಿಸುವ ಕುರಿತು ಬೆಲ್ಮಾಂಟ್ ಫೋರಂ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಎ.ಎನ್.ಆರ್. ಫ್ರಾನ್ಸ್ 2015ರ ಜನವರಿಯಿಂದ 2017ರ ಡಿಸೆಂಬರ್ ವರೆಗೆ ಸೆಕ್ರೇಟರಿಯೆಟ್ ಆತಿಥ್ಯಕ್ಕೆ ಸಮ್ಮತಿಸಿತ್ತು.

******

AKT/VBA/SH