ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಭಾರತೀಯ ಸೆಕ್ಯೂರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ) ಮತ್ತು ಸೆಕ್ಯೂರಿಟೀಸ್ ಮತ್ತು ವಿನಿಮಯ ಸಂಸ್ಥೆ (ಎಸ್.ಇ.ಓ), ಇರಾನ್ ನಡುವೆ ಸೆಕ್ಯೂರಿಟಿ ಮಾರುಕಟ್ಟೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು, ಎರಡೂ ದೇಶಗಳ ನಡುವೆ ಸಮರ್ಥವಾದ ಸೆಕ್ಯೂರಿಟೀಸ್ ಮಾರುಕಟ್ಟೆಯ ಅಭಿವೃದ್ಧಿಗೆ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳು ಮತ್ತು ಸಹಕಾರವನ್ನು ಇನ್ನೂ ಅಭಿವೃದ್ಧಿಪಡಿಸಲು ಮತ್ತು ಎರಡೂ ನಿಯಂತ್ರಕರ ನಡುವೆ ಸಹಕಾರಕ್ಕೆ ಪ್ರೋತ್ಸಾಹ ನೀಡುತ್ತದೆ. ಎರಡೂ ರಾಷ್ಟ್ರಗಳ ನಡುವೆ ಮಾಹಿತಿ ವಿನಿಮಯ ಚೌಕಟ್ಟು ಬಲಪಡಿಸುವ ನಿಟ್ಟಿನಲ್ಲೂ ಇದು ಕೊಡುಗೆ ನೀಡುತ್ತದೆ. ಇದು ಸಾಗರೋತ್ತರ ಪರಸ್ಪರ ಸಹಕಾರ ಮತ್ತು ಸೆಬಿ ಮತ್ತು ಇರಾನ್ ಎಸ್.ಇ.ಓ. ನಿಯಂತ್ರಣ ಚಟುವಟಿಕೆಗಳ ನಿಯಂತ್ರಣಕ್ಕೆ ಹೆಚ್ಚಿನ ಮೌಲ್ಯ ತುಂಬುತ್ತದೆಂದು ನಿರೀಕ್ಷಿಸಲಾಗಿದೆ.
ಈ ತಿಳಿವಳಿಕೆ ಒಪ್ಪಂದವು, ಸೆಬಿ ಮತ್ತು ಎಸ್.ಇ.ಓ. ಇರಾನ್ ನಡುವೆ ಮಾಹಿತಿ ವಿನಿಮಯ ಚೌಕಟ್ಟು ಬಲಪಡೆಸಲೂ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
AKT/VBA/SH