ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಆಸ್ತಾನದಲ್ಲಿ ನಡೆಯುತ್ತಿರುವ ಎಸ್.ಸಿ.ಓ. ಶೃಂಗಸಭೆಯ ವೇಳೆ ಕಜಕಿಸ್ತಾನ್, ಚೈನಾ ಮತ್ತು ಉಜ್ಬೇಕಿಸ್ತಾನದ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಕಜಕಿಸ್ತಾನದ ಅಧ್ಯಕ್ಷ ನೂರ್ ಸುಲ್ತಾನ್ ನಜರ್ಬಯೇವ್ ಅವರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಪ್ರಧಾನಮಂತ್ರಿಯವರು 2017-18ನೇ ಸಾಲಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವಕ್ಕಾಗಿ ಕಜಕಿಸ್ತಾನಕ್ಕೆ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷ ನಜರ್ಬಯೇವ್ ಅವರು ಪ್ರಧಾನಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು 2015ರಲ್ಲಿ ಕಜಕಿಸ್ತಾನದಲ್ಲಿ ನಡೆದ ಹಿಂದಿನ ಭೇಟಿಯನ್ನು ಸ್ಮರಿಸಿದರು. ಆ ಸಭೆಯ ವೇಳೆ ಕೈಗೊಂಡ ನಿರ್ಧಾರ ಮತ್ತು ಒಪ್ಪಂದಗಳ ಪ್ರಗತಿಯನ್ನು ಇಬ್ಬರೂ ನಾಯಕರು ಪರಾಮರ್ಶಿಸಿದರು. ಕಜಕಿಸ್ತಾನವು ಪ್ರಸ್ತುತ ಭಾರತಕ್ಕೆ ಯುರೇನಿಯಂನ ದೊಡ್ಡ ಪೂರೈಕೆದಾರ ರಾಷ್ಟ್ರವಾಗಿದ್ದು, ಎರಡೂ ಕಡೆಯವರು ಈ ಪಾಲುದಾರಿಕೆ ನಿರ್ವಹಿಸಲು ಒಪ್ಪಿದ್ದಾರೆ. ಹೈಡ್ರೋಕಾರ್ಬನ್ ಕ್ಷೇತ್ರದ ಸಹಕಾರ ಕುರಿತೂ ಈ ಭೇಟಿಯ ವೇಳೆ ಚರ್ಚಿಸಲಾಯಿತು.
ಪ್ರಧಾನಮಂತ್ರಿಯವರು ಕಜಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಸೌರ ಸಹಯೋಗದ ಸದಸ್ಯನಾಗುವಂತೆ ಆಹ್ವಾನ ನೀಡಿದರು. ಇಬ್ಬರೂ ನಾಯಕರು ಸಂಪರ್ಕ ಹೆಚ್ಚಿಸುವ ಮಹತ್ವ ಕುರಿತು ಚರ್ಚಿಸಿದರು. ಈ ನಿಟ್ಟಿನಲ್ಲಿ ಇರಾನ್ ನ ಚಬಹಾರ್ ಬಂದರು ಮೂಲಕ ಸಂಪರ್ಕ ಕುರಿತೂ ಚರ್ಚಿಸಲಾಯಿತು. ದೆಹಲಿ ಮತ್ತು ಆಸ್ತಾನ ನಡುವೆ ಎರಡು ವಿಮಾನಗಳ ಸಂಪರ್ಕವು ಶೀಘ್ರವೇ ಆರಂಭವಾಗಲಿದೆ.
ಪ್ರಧಾನಮಂತ್ರಿಯವರು ಚೈನದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೊಂದಿಗೆ ಇಂದು ಸೌಹಾರ್ದಯುತ ವಾತಾವರಣದಲ್ಲಿ ಧನಾತ್ಮಕವಾಗಿ ಚರ್ಚಿಸಿದರು. ಎಸ್.ಸಿ.ಓ. ದಲ್ಲಿ ಭಾರತದ ಸೇರ್ಪಡೆಗೆ ಚೈನಾ ನೀಡಿದ ಬೆಂಬಲಕ್ಕೆ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸಿದರು. ಬಹುದ್ರುವೀಯ ವಿಶ್ವದಲ್ಲಿ ಮತ್ತು ಅನಿಶ್ಚಿತತೆಯ ಜಗತ್ತಿನಲ್ಲಿ, ಭಾರತ – ಚೈನಾ ಸಂಬಂಧ ಸ್ಥಿರತೆಯ ವಿಷಯವಾಗಿದ್ದು, ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂಬುದನ್ನು ಇಬ್ಬರೂ ನಾಯಕರು ಉಲ್ಲೇಖಿಸಿದರು. ವಾಣಿಜ್ಯ, ಹೂಡಿಕೆ, ಸಂಪರ್ಕ, ಯುವ ಮತ್ತು ಸಾಂಸ್ಕೃತಿಕ ವಿನಿಮಯ ಚರ್ಚೆಯ ಸಂದರ್ಭದಲ್ಲಿ ಬಂದ ವಿಷಯಗಳಾಗಿದ್ದವು.
ಪ್ರಧಾನಮಂತ್ರಿಯವರು ಉಜ್ಬೇಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಜಿಯೋವೆವ್ ಅವರೊಂದಿಗೆ ಆಪ್ತ ಮತ್ತು ಫಲಪ್ರದ ಸಭೆ ನಡೆಸಿದರು. ಆರ್ಥಿಕ, ವಾಣಿಜ್ಯ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಬಲವಾದ ಸಂಬಂಧಗಳ ಕುರಿತ ವಿಷಯಗಳು ಚರ್ಚಿತವಾದವು.
AKT/NT
Began my programmes in Astana with a productive meeting with President Nursultan Nazarbayev of Kazakhstan. pic.twitter.com/a1HP1bOoJ2
— Narendra Modi (@narendramodi) June 8, 2017
Met President Xi Jinping. We spoke about India-China relations and how to further improve ties. pic.twitter.com/67aPIi6GFF
— Narendra Modi (@narendramodi) June 9, 2017
Held talks with President Shavkat Mirziyoyev. We discussed ways to boost India-Uzbekistan relations, especially economic cooperation. pic.twitter.com/kc3wFqSqyA
— Narendra Modi (@narendramodi) June 9, 2017