Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಬೂನ್ ನಿಂದ ಭಾರತಕ್ಕೆ ಆಗಮಿಸಿದ ಪ್ರಥಮ ಏರ್ ಫ್ರೈಟ್ ಕಾರಿಡಾರ್ ವಿಮಾನ ಸ್ವಾಗತಿಸಿದ ಪ್ರಧಾನಿ, ಉಪಕ್ರಮಕ್ಕಾಗಿ ಅಧ್ಯಕ್ಷ ಘನಿ ಅವರಿಗೆ ಧನ್ಯವಾದ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಕಾಬೂಲ್ ನಿಂದ ಭಾರತ್ಕೆ ಆಗಮಿಸಿದ ಪ್ರಥಮ ಏರ್ ಪ್ರೈಟ್ ಕಾರಿಡಾರ್ ವಿಮಾನವನ್ನು ಸ್ವಾಗತಿಸಿದರು. ಪ್ರಧಾನಿಯವರು ಆಫ್ಘಾನಿಸ್ತಾನದ ಅಧ್ಯಕ್ಷ ಘನತೆವೆತ್ತ ಅಷರಫ್ ಘನಿ ಅವರ ಉಪಕ್ರಮಕ್ಕೆ ಧನ್ಯವಾದ ಅರ್ಪಿಸಿದರು.

“ಕಾಬೂಲ್ ನಿಂದ ಪ್ರಥಮ ಏರ್ ಫ್ರೈಟ್ ವಿಮಾನ ಸ್ವಾಗತಿಸಲು ಸಂತೋಷವಾಗುತ್ತದೆ. ಭಾರತ ಮತ್ತು ಆಫ್ಘನ್ ನಡುವಿನ ನೇರ ಸಂಪರ್ಕ ಪ್ರಗತಿಗೆ ಸೋಪಾನವಾಗಲಿದೆ. ನಾನು ಈ ಉಪಕ್ರಮಕ್ಕಾಗಿ ಅಧ್ಯಕ್ಷ ಅಷರಫ್ ಘನಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

***

AK