ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಜಿಎಸ್ಪಿ ಪರಿಚಯಿಸಲು ಸಹಕಾರ ನೀಡಿದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರರಿಗೆ ಕೃತಜ್ಞತೆ ವ್ಯಕ್ತಪಡಿಸುವ ನಿರ್ಣಯವನ್ನು ಅಂಗೀಕರಿಸಿದೆ.
“ಜಿಎಸ್ಟಿ ಸ್ವತಂತ್ರ ಭಾರತದ ಒಂದು ಅತಿ ದೊಡ್ಡ ತೆರಿಗೆ ಸುಧಾರಣೆಯಾಗಿದೆ. ಇದು ಜಗತ್ತಿನ ಯಾವುದೇ ಒಕ್ಕೂಟ ರಾಜಕೀಯದ ಪರೋಕ್ಷ ತೆರಿಗೆ ಸುಧಾರಣೆಯಲ್ಲಿ ಅತ್ಯಂತ ವ್ಯಾಪಕವಾದ್ದಾಗಿದೆ, ಇದರಲ್ಲಿ ಬಹುಬಾರಿ ತೆರಿಗೆ ಮತ್ತು ಉಪಕರ, ಬಹುಬಾರಿಯ ದರ, ಬಹುವಿಧದ ಅನುಸರಣೆ ಮತ್ತು ವ್ಯಾಪಕ ತೆರಿಗೆಯಂಥ ಸಂಕೀರ್ಣತೆಗಳನ್ನು ತೆಗೆದುಹಾಕಲಾಗಿದೆ. ಇದು ನಿರ್ಣಾಯಕ ಸುಧಾರಣೆಯಾಗಿದ್ದು, ಗಣನೀಯವಾಗಿ ಸುಲಭವಾಗಿ ವಾಣಿಜ್ಯ ನಡೆಸುವುದಕ್ಕೆ ಕಾರಣವಾಗುತ್ತದೆ ಮತ್ತು ಗ್ರಾಹಕರ ಮೇಲೆ ಮತ್ತು ಸಾಮಾನ್ಯ ನಾಗರಿಕರ ಮೇಲಿನ ತೆರಿಗೆಯ ಹೊರೆಯನ್ನು ಇಳಿಸುತ್ತದೆ.
ಜಿಎಸ್ಟಿ ರಾಷ್ಟ್ರೀಯ ಏಕತೆ ಮತ್ತು ವಿತ್ತೀಯ ಒಕ್ಕೂಟ ವ್ಯವಸ್ಥೆಗೆ ಉತ್ತಮ ಜ್ವಲಂತ ಉದಾಹರಣೆಯಾಗಿದೆ. ಭಾರತೀಯ ಒಕ್ಕೂಟ ಪ್ರಜಾಪ್ರಭುತ್ವದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಇದು ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳ ಹಾಗೂ ಎಲ್ಲ ರಾಜಕೀಯ ಪಕ್ಷಗಳೊಂದಿಗಿನ ಆಪ್ತ ಸಹಕಾರದಿಂದ ಮಾತ್ರವೇ ಸಾಧ್ಯವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 2017ರ ಜೂನ್ 22ರಂದು ನಡೆದ ಸಚಿವ ಸಂಪುಟ ಸಭೆ, 2017ರ ಜುಲೈ 1ರಿಂದ ದೇಶದಾದ್ಯಂತ ಜಿಎಸ್ಟಿ ಅನುಷ್ಠಾನಗೊಳ್ಳಲು ಸಹಕಾರ ನೀಡಿದ ಎಲ್ಲ ರಾಜ್ಯ ಸರ್ಕಾರಗಳು, ಎಲ್ಲ ಮುಖ್ಯಮಂತ್ರಿಗಳು ಮತ್ತು ರಾಜ್ಯಗಳ ಹಣಕಾಸು ಸಚಿವರು ಮತ್ತು ಎಲ್ಲ ರಾಜಕೀಯ ಪಕ್ಷಗಳ ಕೊಡುಗೆಯನ್ನು ಪರಿಗಣಿಸಿತು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಜಿಎಸ್ಟಿ ಮಂಡಳಿಗೆ, ಎಲ್ಲ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ, ಸಂಸತ್ತಿನ ಎಲ್ಲ ಸದಸ್ಯರಿಗೆ, ಎಲ್ಲ ರಾಜ್ಯ ವಿಧಾನಸಭೆಗಳ ಸದಸ್ಯರಿಗೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳನ್ನೊಳಗೊಂಡ ಸಮಾಜದ ಎಲ್ಲ ವರ್ಗದ ಜನರಿಗೆ ಕೇಂದ್ರ ಸಚಿವ ಸಂಪುಟ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿತು.”
*****
KSD/VBA/SH