ಪಿಎಂಇಂಡಿಯಾ
ಸಹೋದರ ಸಹೋದರಿಯರೇ,,,
ಕಾಂಡ್ಲಾಮಿನಿ ಇಂಡಿಯಾದ ರೀತಿಯಲ್ಲಿ ಕಾಣುತ್ತಿದೆ ಮತ್ತು ವಿಮಾನ ನಿಲ್ದಾಣದಿಂದ ಕಾಂಡ್ಲಾದವರೆಗಿನ ಹಾದಿಯಲ್ಲಿ ನೀವು ನನ್ನನ್ನ ಸ್ವಾಗತಿಸಿದಂತಹ ರೀತಿ, ನನ್ನನ್ನಆಭಾರಿಯನ್ನಾಗಿಸಿದೆ ಹಾಗೂ ನಿಮ್ಮ ಈ ಗೌರವಾದರದ ಸ್ವಾಗತಕ್ಕೆ ನಾನು ಚಿರರುಣಿ…
ಮಾಜಿಮುಖ್ಯಮಂತ್ರಿಯಾಗಿ ಕಚ್ ನ ಜೊತೆಗಿನ ನನ್ನ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸುವಅಗತ್ಯವೇ ಇಲ್ಲ.. ಕಾಲ ಮತ್ತೆ ನನ್ನನ್ನ ಮತ್ತೆ ಇಲ್ಲಿಗೆ ಕರೆದುಕೊಂಡು ಬಂದಿದೆ. ಕಚ್ ನ ಈ ಮಣ್ಣಲ್ಲಿ ಒಂದು ಬಗೆಯ ಅದ್ಭುತವಾದ ಶಕ್ತಿ ಇದೆ.. ಯಾರೋ ಒಬ್ಬ ಈ ಕಚ್ ನಿಂದವಿಶ್ವದ ಯಾವುದೋ ಮೂಲೆಗೆ ವಲಸೆ ಹೋಗಲಿ, ಅಂತಹ ವ್ಯಕ್ತಿ ಕುಟುಂಬದ ನಾಲ್ಕನೇ ಅಥವಾಐದನೇ ತಲೆಮಾರಿನವನಾಗಿರಲಿ. ಎಂದಾದ್ರೂ ಅವನು ಅನಾರೋಗ್ಯಕ್ಕೀಡಾದಾಗ ಆತನ ಮನಸ್ಸಿಗೆಬರುವ ಮೊದಲ ಆಲೋಚನೆ ಕಚ್ ಗೆ ವಾಪಸ್ ಹೋಗಿ ಬಿಡಲಾ ಅನ್ನೋದು..ಕಚ್ ಗೆ ವಾಪಸ್ ಬಂದರೆಗುಣಮುಖ ಆಗುಬಹುದಾ ಅನ್ನೋ ಭರವಸೆಯಿಂದ ಕಚ್ ಗೆ ಹಿಂತಿರುಗುವ ಯೋಚನೆಮಾಡುತ್ತಾನೆ…ನಾವು ಅಂದ್ರೆ ಈ ಕಚ್ ನ ನಾಗರಿಕರು ಅಪಾರ ಜಲಸಂಪನ್ಮೂಲಗಳನ್ನುಹೊಂದಿದ್ದೇವೆ..ಆದರೆ ಅವುಗಳಿಂದ ಹೊರತಾಗಿ ಜೀವಿಸುವುದನ್ನು ಕಲಿತಿದ್ದೇವೆ.. ಇಲ್ಲಿನನಾಗರಿಕರಿಗೆ ನೀರಿನ ಮಹತ್ವದ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಅದರ ಅರಿವುಉಳಿದೆಲ್ಲದ್ದಕ್ಕಿಂತ ವಿಶೇಷವಾಗಿ ಹೊಂದಿದ್ದಾರೆ …ವಿಶಾಲವಾದ ಸಮುದ್ರ, ಮರುಭೂಮಿ, ಪ್ರರ್ವತ ಶ್ರೇಣಿ, ಐದು ಸಾವಿರ ವರ್ಷಗಳಷ್ಟು ಹಿಂದಿನ ಸಂಸ್ಕೃತಿಯನ್ನು ಹೊಂದಿರುವಂತಹಪ್ರಖ್ಯಾತ ಇತಿಹಾಸ , ಹೀಗೆ ಕಚ್. ಎಲ್ಲವೂ ಕಚ್ ನ ಮಡಿಲಲ್ಲಿದೆ…ಈ ವಿಶಾಲಸಂಪನ್ಮೂಲಗಳನ್ನು ಕೇವಲ ಭಾರತಕ್ಕಷ್ಟೆ ಅಲ್ಲದೇ ಇಡೀ ವಿಶ್ವಕ್ಕೆ ತೆರೆದಿಡುವ ಶಕ್ತಿ ಕಚ್ಗಿದೆ. ಹೀಗಾಗಿ ವಿಶ್ವವನ್ನ ಸೂಜಿಗಲ್ಲಿನಂತೆ ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ..
ಈಗಷ್ಟೆನಿತಿನ್ ರವರು ನಮಗೆ ಹೇಳುತ್ತಿದ್ದರು. ಪ್ರಸ್ತುತ ಜಾಗತಿಕ ಮಾರುಕಟ್ಟೆ ಹಾಗೂ ಆರ್ಥಿಕತೆಮುಂದುವರಿಯುತ್ತಿರುವ ಹಾದಿಯಲ್ಲೇ ಭಾರತವೂ ಪ್ರಗತಿ ಸಾಧಿಸಬೇಕಾದರೇ, ನಾವುಸ್ಪರ್ಧಾತ್ಮಕ ವಾತಾವರಣದ ಲಾಭವನ್ನ ಪಡೆದುಕೊಳ್ಳುವುದು ಅನಿವಾರ್ಯ..ಮತ್ತು ಜಾಗತಿಕವಹಿವಾಟಿನಲ್ಲಿ ಭಾರತ ಸ್ಥಾನ ಪಡೆಯಬೇಕಾದರೇ ಮುಖ್ಯವಾಗಿ ದೇಶದಲ್ಲಿ ಉತ್ಕೃಷ್ಟಬಂದರುಗಳನ್ನ ಹೊಂದಬೇಕು ಅಂತಾ…ಯಾರಾದರೂ ಊಹಿಸಿದ್ದರಾ..?ಕಿರು ಕಾಲಘಟ್ಟದಲ್ಲಿ ಇಲ್ಲೇಉತ್ಪಾದಿಸಲ್ಪಟ್ಟ ವಸ್ತುಗಳಿಂದಾಗಿ ಏಷ್ಯಾದ ಪ್ರಮುಖ ಬಂದರುಗಳಲ್ಲಿ ಪ್ರಮುಖ ಸ್ಥಾನಪಡೆಯುತ್ತದೆ ಅನ್ನೋದನ್ನ ಯಾರಾದ್ರೂ ನಿರೀಕ್ಷಿಸಿದ್ದರಾ..?
ಅದುದ್ರವ ಸರಕುಗಳೇ ಆಗಲಿ ಅಥವಾ ಘನ ಸರಕುಗಳೇ ಆಗಲಿ , ಕಳೆದೆರಡು ವರ್ಷಗಳಲ್ಲಿ ಈ ಬಂದರುಕ್ಷೇತ್ರಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ , ಈ ಕ್ಷೇತ್ರಗಳ ಪ್ರಗತಿಯ ಬಗ್ಗೆಅರಿವು ಮೂಡಿತ್ತು. ಮತ್ತು ಈ ಪ್ರಗತಿ, ಬಂದರು ಕ್ಷೇತ್ರದ ಆರ್ಥಿಕತೆಯನ್ನಅರ್ಥೈಸಿಕೊಂಡಿರುವಂತಹವರಿಗೆ ಅಚ್ಚರಿ ಮೂಡಿಸಲಿದೆ ಅನ್ನೋದನ್ನು ಮನಗಂಡಿದ್ದರು..ಇದು ಈಕ್ಷೇತ್ರದಲ್ಲಿನ ಮಹತ್ತರ ಸಾಧನೆಯಾಗಿದೆ.. ಇನ್ನು ಇದರ ಜೊತೆಯಲ್ಲಿಯೇ ಸಲ್ವಸ್ವಲ್ಪವಾಗಿಬಂದರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನರು , ಕಾರ್ಮಿಕ ಸಂಘಟನೆಗಳುಪ್ರಗತಿಯ ಹಾದಿಯಲ್ಲಿ ಸಾಗುತ್ತಿವೆ ಅನ್ನೋದನ್ನು ಮನಗಾಣುತ್ತಿದ್ದಾರೆ. ಆದರೆ, ನಾವುಗಳುಒಗ್ಗಟ್ಟಾಗಿ ಈ ಬಂದರನ್ನು ಅಭಿವೃದ್ಧಿ ಹಾಗೂ ಸಶಕ್ತಗೊಳಿಸಲು ಶ್ರಮಿಸಬೇಕಾದರೇ ಎರಡುಸಾಮರ್ಥ್ಯಗಳನ್ನು ಹೊಂದಬೇಕಾಗಿದೆ . ಒಂದು ಮೂಲಭೂತ ಸೌಕರ್ಯಗಳು , ಎರಡನೆಯದ್ದು ದಕ್ಷತೆಹಾಗೂ ಪಾರದರ್ಶಕತೆ . ಇವೆರಡರ ಸಾಮರ್ಥ್ಯಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ನಂಬಲು ಅಸಾಧ್ಯವಾದ ಫಲಿತಾಂಶಗಳನ್ನೂ ಸಾಧಿಸುವಲ್ಲಿ ನಮ್ಮ ರಾಷ್ಟ್ರ ಯಶಸ್ಸನ್ನು ಸಾಧಿಸಬಲ್ಲದು…
ಇರಾನ್ ನ ಛಬಹಾರ್ ಬಂದರನ್ನೂ ಅಭಿವೃದ್ಧಿ ಪಡಿಸುವ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆಅನ್ನೋದನ್ನ ಈಗಷ್ಟೇ ನಿತಿನ್ ನವರು ಹೇಳದರು.. ಛಬಹಾರ್ ಬಂದರು ಕಾಂಡ್ಲಾ ಬಂದರ್ ನಜೊತೆಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಈ ನೇರ ಸಂಪರ್ಕದ ಅರ್ಥ ಸಾಗರಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತರಲಿರುವ ಅತಿದೊಡ್ಡ ಹೆಜ್ಜೆಯನ್ನು ಕಾಂಡ್ಲಾಬಂದರು ಇಡಲಿದೆ ಅನ್ನೋದಾಗಿದೆ. ಈ ಹೆಜ್ಜೆ ರಾಮಾಯಣದಲ್ಲಿ ಅಂಗದ ಇಟ್ಟಂತಹಹೆಜ್ಜೆಯಂತಿರುತ್ತದೆ… ಇವತ್ತು ಕಾಂಡ್ಲಾ ಬಂದರನ್ನು ಯಾಂತ್ರೀಕರಣಗೊಳಿಸುವ ನಿಟ್ಟಿನಲ್ಲಿಕೆಲ ಹಜ್ಜೆಗಳನ್ನು ಇಟ್ಟಿದ್ದೇವೆ…ಅಲ್ಲದೇ ಕಾಂಡ್ಲಾ ಬಂದರಿನ ಸಾಮರ್ಥ್ಯವನ್ನುವೃದ್ಧಿಗೊಳಿಸುವ ಸಲುವಾಗಿ 14 ಹಾಗೂ 16 ನೇ ಶ್ರೇಣಿಗಳನ್ನು ವಿಸ್ತರಿಸುವ ಹಾಗೂಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಮಾಡಲಾಗಿದೆ..ಮತ್ತು ಈ ಬದಲಾವಣೆ ಯುಗದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳು ಬಂದರು ನಗರ ಪರಿಕಲ್ಪನೆಯ ದೃಷ್ಟಿಯಲ್ಲಿಯೇ ಮಾಡಲಾಗುತ್ತಿದೆ.ಹಾಗೂ ಪ್ರತಿಯೊಂದು ಆರ್ಥಿಕ ಚಟುವಟಿಕೆಗಳನ್ನು ಬಂದರು ಅಭಿವೃದ್ಧಿಯ ನಿಟ್ಟಿನಲ್ಲೇನಡೆಸಲಾಗುತ್ತಿದೆ. ಹೀಗೆ ಈ ಹಿನ್ನೆಲೆಯಲ್ಲಿ ನಮ್ಮ ಸಾರಿಗೆ ಮೂಲ ಸೌಕರ್ಯಗಳುಪ್ರೇರಿತಗೊಳ್ಳಲಿವೆ ಮತ್ತು ದೇಶದ ವಿವಿಧ ಮೂಲೆಗಳನ್ನ ಕ್ಷಿಪ್ರಗತಿಯಲ್ಲಿ ಸರಕು ಸಾಮಗ್ರಿಗಳು ತಲುಪುವಷ್ಟರ ಮಟ್ಟಿಗೆ ನಮ್ಮ ಸಂಚಾರ ವ್ಯವಸ್ಥೆ ಸುಲಲಿತಗೊಳ್ಳಲಿದೆ..ಜಾಗತಿಕ ಮಾಪನವನ್ನು ಆಧರಿಸಿ ಸಮುದ್ರದಲ್ಲಿನ ಸಕಾರಾತ್ಮಕ ಸಮಯವನ್ನುಲೆಕ್ಕಹಾಕಲಾಗುತ್ತಿದೆ. ಇದರರ್ಥ ಬಂದರುಗಳ ಕಾರ್ಯದಕ್ಷತೆಯನ್ನು ಅಲ್ಲಿನ ಖಾಲಿ ಅಥವಾಸರುಕು ಸಾಮಗ್ರಿಗಳು ತುಂಬಿದ ಹಡುಗುಗಳು ಬಂದರಿನಲ್ಲಿ ಎಷ್ಟು ದಿನಗಳನ್ನು ವ್ಯಯಿಸಿವೆಹಾಗೂ ಬಂದರುಗಳಿಗೆ ಹಡಗುಗಳು ಬರುವುದಕ್ಕೆ ಹಾಗೂ ಬಂದರಿನಿಂದ ತೆರಳುವುದಕ್ಕೆ ಎಷ್ಟುದಿನಗಳು ತೆಗೆದುಕೊಂಡಿವೆ ಅನ್ನೋದರ ಮೇಲೆ ನಿರ್ಧರಿಸಲಾಗುತ್ತದೆ.. ಕಡಿಮೆ ಸಮಯತೆಗೆದುಕೊಂಡಷ್ಟು ಹೆಚ್ಚು ದಕ್ಷತೆಯನ್ನು ಹೊಂದಿದೆ ಅಂತಾ ಅರ್ಥ…
ಇನ್ನುಭಾರತದಲ್ಲಿ ಈ ಸಕ್ರೀಯ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನಿತಿನ್ ರವರನೇತೃತ್ವದಲ್ಲಿ ಇವತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ..ಇನ್ನೂ ಈ ವಿಚಾರಕ್ಕೆಸಂಬಂಧಿಸಿದಂತ ಸಕ್ರೀಯ ಸಮಯವನ್ನು ಕಡಿತಗೊಳಿಸುವುದಕ್ಕೆ ಮತ್ತೊಂದು ದಾರಿ ಇದೆ..ಅದುಸರಕುಗಳನ್ನು ತುಂಬಿಕೊಂಡು ಬಂದರನ್ನು ದಾಟಿದ ನಂತರ ನಿಮ್ಮೆಲ್ಲಾ ಟ್ರಕ್ ಗಳು ವೇಗವಾಗಿಸಾಗುತ್ತವೆ ಅನ್ನೋದನ್ನು ಇದು ಅವಲಂಬಿಸಿದೆ.. ಏಕೆಂದರೆ , ದಾರಿ ಮಧ್ಯೆ ಉಂಟಾಗುವಅಡಚಣೆಗಳಿಂದಾಗಿ ಟ್ರಕ್ ನಿಗದಿತ ಸ್ಥಳ ತಲುಪುವುದು ವಿಳಂಬವಾದರೇ, ನಾವು ಎಂತಹುದೇತಂತ್ರಜ್ಞಾನವನ್ನು ಸಕ್ರೀಯ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಅಳವಡಿಸಿಕೊಂಡರೂಅಡತಡೆಗಳು ಮುಂದುವರಿಯುತ್ತಲೇ ಇರುತ್ತವೆ …ಕಾಂಡ್ಲಾ ನಗರ ಗುಜರಾತ್ ನಲ್ಲಿ ಚಿಕ್ಕಪಟ್ಟಣವಾಗಿಬಹುದು ..ದೇಶದಲ್ಲಿ ಅತಿಚಿಕ್ಕ ಪಟ್ಟಣವಾಗಿರಬಹುದು.. ಆದರೆ ಇವತ್ತು ಸಾವಿರಕೋಟಿ ರೂಪಾಯಿ ಹೂಡಿಕೆಯ ಯೋಜನೆಗಳನ್ನ ಇಲ್ಲಿ ಕೈಗೊಳ್ಳಲಾಗಿದೆ.. ಒಂದು ಸಾವಿರ ಕೋಟಿರೂಪಾಯಿ ಸಣ್ಣದೇನಲ್ಲಾ…ಯೋಚಿಸಿ ನೋಡಿ…ಎಷ್ಟೊಂದು ವೇಗವಾಗಿ ನಾವು ಮುಂದಕ್ಕೆ ಅಡಿಇಡುತ್ತಿದ್ದೇವೆ ಅನ್ನೋದನ್ನು..
ಮುಂದಿನ 2 ವರ್ಷಗಳಅವಧಿಗಾಗಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸ್ಪಷ್ಟ ಗುರಿಯನ್ನ ಹೊಂದಿದ್ದೇವೆ ಅಂತಾಅವರು ನನಗೆ ಹೇಳಿದರು..ನಾನು ನಿತಿನ್ ರವರಿಗೆ ಹೇಳಲು ಬಯಸುತ್ತೇನೆ …ನಿತಿನ್ ರವರನೇತೃತ್ವದಲ್ಲಿ ರಸ್ತೆ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರಗತಿಯ ಅಭಿವೃದ್ಧಿಗೆ ಭಾರತ ಹಿಂದೆಂದೂ ಸಾಕ್ಷಿಯಾಗಿರಲಿಲ್ಲ..ಗುಜರಾತಿಯರು ಕೂಡ ನಿಮ್ಮ ಪ್ರತಿಭೆಯ ಲಾಭಪಡೆಯುವಂತಾಗಲಿ ಅನ್ನೋದನ್ನೂ ಅವರಿಗೆ ಹೇಳಿದ್ದೇನೆ. ಅದಕ್ಕವರು ಇದಕ್ಕಾಗಿ ಏನುಮಾಡಬೇಕು ಅಂತಾ ಕೇಳಿದರು. ಪ್ರತ್ಯುತ್ತರವಾಗಿ ನಾನು ಹೇಳಿದ್ದಿಷ್ಟೆ, 24 ತಿಂಗಳ ಕಾಲಾವಧಿಯ ಕೆಲಸವನ್ನು 18 ತಿಂಗಳಲ್ಲಿಯೇ ಸಂಪೂರ್ಣಗೊಳಿಸಿ. ನನಗೆ ಖಂಡಿತ ನಂಬಿಕೆಇದೆ. ನಿತಿನ್ ರವರು ಕೈಗೊಂಡಿರುವ ಈ ಕೆಲಸವನ್ನು ಮಾಡಿಯೇ ತೀರುತ್ತಾರೆ..
ಇಲ್ಲೊಂದುವಿಶಾಲವಾದ ಸಭಾಂಗಣವೊಂದು ನಿರ್ಮಾಣವಾಗಲಿದೆ. ಮತ್ತದು ಬಾಬಾಸಾಹೇಬ್ ಅಂಬೇಡ್ಕರ್ ರವರಹೆಸರಿಂದ ಕರೆಯಲ್ಪಡುತ್ತದೆ..ಇದು ಜನರ ಅಗತ್ಯತೆಗಳಿಗೆ ಅನುಗುಣವಾಗಿನಿರ್ಮಾಣವಾಗುತ್ತಿದೆ ಆದರೆ ಈ ಸಭಾಂಗಣದ ರೂಪುರೇಷೆಗಳನ್ನ ನೋಡಿದರೇ, ಈ ಯೋಜನೆ ಎಷ್ಟುಅನುದಾನವನ್ನು ಪಡೆಯಬಹುದು ..ಕಾರ್ಯನಿರ್ವಹಣೆ ಹೇಗೆ ಸಾಧ್ಯವಾಗಬಲ್ಲದು ಅನ್ನೋದನ್ನಯೋಚಿಸುವಲ್ಲಿ ರವಿಯವರು ಅನಿಶ್ಚಿತತೆ ಹೊಂದಿದ್ದಾರೆ ಅಂತಾ ನನಗನಿಸುತ್ತಿದೆ. ಹೀಗಾಗಿನಾನು ನಿತಿನ್ ರವರಿಗೆ ಕೆಲವು ನವೀನ ಪರಿಕಲ್ಪನೆಗಳ ಬಗ್ಗೆ ಚಿಂತಿಸುವಂತೆಸೂಚಿಸಿದ್ದೇನೆ. ಇದಕ್ಕವರು ಸ್ವಲ್ಪ ಕಾಲಾವಕಾಶವನ್ನೂ ಕೇಳಿದ್ದಾರೆ. ಕಚ್ ಜಿಲ್ಲೆ 1998 ರ ಸ್ಲೈಕೋನಿಂದಾಗಿ ಇನ್ನಿಲ್ಲದಂತೆ ಹಾನಿಗೀಡಾಗಿತ್ತು. 2001 ರಲ್ಲಿ ಭೂಕಂಪನಜಿಲ್ಲೆಯನ್ನು ಛಿದ್ರಗೊಳಿಸಿತ್ತು..ಯಾರಾದ್ರೂ ಇದನ್ನೂ ಊಹಿಸಿದ್ದರಾ..? ಆದರೆ ಈಜಿಲ್ಲೆಯ ಹಾಗೂ ಇಲ್ಲಿನ ನಾಗರಿಕರ ಸಾಮರ್ಥ್ಯವನ್ನು ನೋಡಿ . ಪ್ರಸ್ತುತ ಕಚ್ ಭಾರತದಲ್ಲೇ ಕ್ಷಿಪ್ರಗತಿಯಲ್ಲಿ ಪ್ರಗತಿಯತ್ತ ಸಾಗುತ್ತಿರುವ ಜಿಲ್ಲೆ. ಇವತ್ತು ಕಚ್ ಪ್ರಗತಿಪಥದಲ್ಲಿನ ಪಯಣವನ್ನು ಆರಂಭಿಸಿದೆ. ಹಾಗೂ ಕಾಂಡ್ಲಾ ಕೇವಲ ಗುಜರಾತಿನ ಆರ್ಥಿಕತೆಯಕೇಂದ್ರಬಿಂದು ಆಗದೇ ಸಾರಿಗೆ ಕ್ಷೇತ್ರದ ಮೂಲಕ ಭಾರತದ ಆರ್ಥಿಕತೆಯ ಪ್ರಗತಿಯಲ್ಲಿಗಮನಾರ್ಹ ಪಾತ್ರವನ್ನು ನಿರ್ವಹಿಸಲಿದೆ. ನಾವು ಕೂಡ ಅದೇ ದಿಕ್ಕಿನೆಡೆಗೆ ಹೆಜ್ಜೆ ಇಡಲುಬಯಸುತ್ತೇವೆ. ಭಾರತದ ಸಾಗರೋತ್ತರ ವ್ಯಾಪಾರದ ಪರಂಪರೆಗೆ ಸಾವಿರಾರು ವರ್ಷಗಳಇತಿಹಾಸವಿದೆ..
ಐದು ಸಾವಿರ ವರ್ಷಗಳ ಹಿಂದೆ ಲೋಥಾಲ್ಸಾಗರೋತ್ತರ ವ್ಯಾಪಾರದ ಕೇಂದ್ರವಾಗಿತ್ತು. ಅಲ್ಲದೇ ಅಲ್ಲಿಗೆ ಸಮೀಪದಲ್ಲೇ ವಲ್ಲಭಿವಿಶ್ವವಿದ್ಯಾಲಯವೂ ಇತ್ತು. ಸರಿಸುಮಾರು ಎಂಬತ್ತು ದೇಶಗಳ ವಿದ್ಯಾರ್ಥಿಗಳು ವಲ್ಲಭಿವಿಶ್ವವಿದ್ಯಾಲಯದ ಲಾಭವನ್ನು ಪಡೆದುಕೊಳ್ಳುತ್ತಿದ್ದರು . ಲೋಥಾಲ್ ಬಂದರಿನಲ್ಲಿ ಸುಮಾರು 84 ಧ್ವಜಗಳು ಇರುವುದನ್ನು ನಾಗರಿಕರು ಕಾಣಬಹುದು..ಸಾವಿರಾರು ವರ್ಷಗಳ ಹಿಂದೆ ಕಚ್ನಲ್ಲಿ, ದೇಶದಲ್ಲೇ ವಿಶೇಷವಾಗಿ ಹಡಗು ನಿರ್ಮಾಣ ಮಾಡುವುದು ನಮ್ಮ ಪೂರ್ವಜರ ಪರಂಪರೆಯಾಗಿಬೆಳದುಬಂದಿತ್ತು..ಆಗಿನ ಕಾಲದಲ್ಲಿ ವಿದೇಶಗಳಿಗೆ ಹಡಗುಗಳನ್ನು ಇಲ್ಲಿಂದಲೇ ಸರಬರಾಜುಮಾಡಲಾಗುತ್ತಿದೆ. ಅದು ನಮ್ಮ ಸಾಮರ್ಥ್ಯವಾಗಿತ್ತು. ಮತ್ತು ಆ ಸಾಮರ್ಥ್ಯವನ್ನು ಪುನರ್ಸ್ಥಾಪನೆಮಾಡಬೇಕಿದೆ.
ಇವತ್ತು ಮರಮಟ್ಟುಗಳು ಕಾಂಡ್ಲಾಬಂದರಿಗೆ ಬೃಹತ್ ಪ್ರಮಾಣದಲ್ಲಿ ಬರುತ್ತಿವೆ ಮತ್ತು ಕಚ್ ನ ನಮ್ಮ ಸಹೋದರರು ದೇಶದವಿವಿಧ ಮೂಲೆಗಳಲ್ಲಿ ಮರಮಟ್ಟು ವ್ಯಾಪಾರದಲ್ಲಿ ತೊಡಗಿಕೊಂಡಿದ್ಧಾರೆ. ಈ ವಹಿವಾಟಿನಲ್ಲಿಕಚ್ ಹೆಚ್ಚು ಮತ್ತಷ್ಟು ಮೌಲ್ಯಗಳನ್ನು ಸೇರ್ಪಡೆಗೊಳಿಸಬಲ್ಲುದು. ಮರಮಟ್ಟುಗಳಲ್ಲಿವಿವಿಧ ಕಲಾಕೃತಿಗಳನ್ನು ಕೆತ್ತನೆ ಮಾಡುವ ಮೂಲಕ ನಾವುಗಳು, ವಿಶ್ವದ ವಿವಿಧ ದೇಶಗಳಿಗೆಕಳಿಸಲ್ಪಡುವ ಮರಮಟ್ಟುಗಳ ಮೌಲ್ಯವನ್ನು ನಾವುಗಳು ಮತ್ತಷ್ಟು ಹೆಚ್ಚಿಸಬಹುದು . ಮತ್ತು ಈವಿಶಿಷ್ಟ ಕಲಾಕೃತಿಗಳನ್ನೂ ಕಟ್ಟಡಗಳ ನಿರ್ಮಾಣ , ದೇವಾಲಯ ನಿರ್ಮಾಣ ಹಾಗೂ ಇತರೇಕಾಮಗಾರಿಗಳಿಗೆ ವಿಶ್ವದ ಯಾವುದೇ ಭಾಗಕ್ಕಾದರೂ ರಪ್ತು ಮಾಡಬಹುದು..ಮೇಲಾಗಿ ವಿಶ್ವಕ್ಕೆಇದು ನಾವು ವಿಶ್ವಕ್ಕೆ ಕೊಡುವ ಅತಿದೊಡ್ಡ ಉಡುಗೊರೆಯಾಗಲಿದೆ. ಸಮುದ್ರ ಮಾರ್ಗದ ಮೂಲಕ ಉಪ್ಪಿನ ವ್ಯಾಪಾರವನ್ನು ಹೆಚ್ಚೆಚ್ಚು ನಡೆಸಿದ್ದಷ್ಟು ಅದಕ್ಕೆ ಸಂಬಂಧಿಸಿದಖರ್ಚುವೆಚ್ಚಗಳು ತಗ್ಗುತ್ತದೆ. ಭಾರತ 7500 ಸಾವಿರ ಕಿಲೋಮೀಟರ್ ನಷ್ಟು ಕಡಲ ತೀರ ಹಾಗೂಜಲಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಹೀಗಿರುವಾಗ ನಾವು ಸರಕು ಸಾಮಗ್ರಿಗಳನ್ನುರಸ್ತೆ ಅಥವಾ ರೈಲು ಮಾರ್ಗವಾಗಿ ಸಾಗಿಸುವ ಅವಶ್ಯಕತೆ ಏನಿದೆ…? ಇಡೀ ದೇಶವನ್ನುಸುತ್ತಿಬಳಸಿ ಹೋಗುವ ಬದಲಾಗಿ ಇಲ್ಲಿಂದ ಕೊಲ್ಕತ್ತಾಕ್ಕೆ ಸಮುದ್ರ ಮಾರ್ಗದ ಮೂಲಕ ಸರಕುಸಾಮಗ್ರಿಗಳನ್ನು ಏಕೆ ರವಾನೆ ಮಾಡಬಾರದು..?ನಾವು ಈ ಬದಲಾವಣೆ ತರುವ ನಿಟ್ಟಿನಲ್ಲಿಮುಂದಕ್ಕೆ ಸಾಗುತ್ತಿದ್ದೇವೆ. ಹಾಗೂ ಸಂಪೂರ್ಣ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ಕೊಡಬಲ್ಲಂತಹ ರೂಪಾಂತರವನ್ನು ತರುತ್ತೇವೆ..
ಹೊರಪ್ರಪಂಚಕ್ಕೆಲೋಥಾಲ್ ನಿಂದ ನಮ್ಮ ದೇಶದ ಗಳಿಸಿಕೊಂಡಂತಹ ವಿಶಿಷ್ಟ ಶಕ್ತಿಯನ್ನು ಪ್ರದರ್ಶಿಸುವ ಗುರಿಯಕುರಿತಾಗಿ ನಮ್ಮ ನಿತಿನ್ ರವರು ಮಾತನಾಡುತ್ತಿದ್ದರು. ಅಂತಹ ಸಂಗ್ರಹಾಲಯವನ್ನು ಹೇಗೆಸೃಷ್ಟಿಸಲು ಸಾಧ್ಯ…? ಅಮೆರಿಕಾದ ವಿಶ್ವವಿದ್ಯಾಲಯಗಳ ಕಾರ್ಯ ಜಾಗತಿಕ ವ್ಯಾಪಾರದಲ್ಲಿಬಹುಮುಖ್ಯವಾಗಿ ಕಾಣುತ್ತದೆ. ಅಲ್ಲದೇ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿನ ಕಾರ್ಯಗಮನಾರ್ಹವಾಗಿದೆ. ಮುಖ್ಯಮಂತ್ರಿಗಳು ಸಾಗರೋತ್ತರ ವಿಶ್ವವಿದ್ಯಾಲಯಗಳ ಮಸೂದೆಗೆವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವುದಾಗಿ ಹೇಳುತ್ತಿದ್ದರು. ಈ ಸಾಹಸಕ್ಕೆ ಕೈಹಾಕಿರುವ ಅವರಿಗೆ ನಮ್ಮ ಹಾರ್ದಿಕ ಹಾರೈಕೆ ಸದಾ ಇರುತ್ತದೆ. ಮಾನವ ಸಂಪನ್ಮೂಲಅಭಿವೃದ್ಧಿಯ ಕೆಲಸದಿಂದಾಗಿ ಕೇವಲ ಗುಜರಾತ್ ಹಾಗೂ ಕರಾವಳಿ ಪ್ರದೇಶಗಳಿಗಷ್ಟೆಅನುಕೂಲವಾಗುವುದಿಲ್ಲ.. ಬದಲಾಗಿ ಭಾರತದಲ್ಲಿನ ವ್ಯಾಪಾರಿ ಕ್ಷೇತ್ರದ ಅಭಿವೃದ್ಧಿಗೆಬಲವಾದ ಪ್ರೇರಣೆಯಾಗುತ್ತದೆ..
ಸಹೋದರ ಹಾಗೂ ಸಹೋದರಿಯರೆ, 2022 ನೇ ಸಾಲಿನಲ್ಲಿ ನಾವು ದೇಶದ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದೇವೆ.ಇವತ್ತು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸಮ್ಮುಖದಲ್ಲಿ ಕಾಂಡ್ಲಾದ ನಾಗರಿಕರಿಗೆ, ಕಚ್ ನನಾಗರಿಕರಿಗೆ , ಗುಜರಾತ್ ನ ನಾಗರಿಕರಿಗೆ, ಹಾಗೂ ಈ ದೇಶದ ಸಮಸ್ತ ನಾಗರಿಕ ಬಂಧುಗಳಿಗೆ ನನ್ನ ಮನವಿ ಇಷ್ಟೆ..ನಾವುಗಳು 2022 ನೇ ಸಾಲಿನಲ್ಲಿ ಎಪ್ಪತ್ತೈದನೇಸಾತಂತ್ರ್ಯೋತ್ಸವನ್ನು ಆಚರಿಸಲಿದ್ದೇವೆ..ಈ ಸಂದರ್ಭದಲ್ಲಿ ಈ ದೇಶದ ವೀರ ಪುತ್ರರನ್ನುಮರೆಯಬಾರದು. ಸಾತಂತ್ರ್ಯಕ್ಕಾಗಿ ಜೀವ ಬಲಿದಾನ ನೀಡಿದ ಮಹಾನ್ ನಾಯಕರನ್ನು ಮರೆಯಬಾರದು..ಹಲವಾರು ಮಂದಿ ಸೆರೆವಾಸದಲ್ಲೇ ಹುತಾತ್ಮರಾಗಿದ್ದಾರೆ. ಹಲವಾರು ನಾಯಕರು ಗಲ್ಲುಶಿಕ್ಷೆಗೆ ಗುರಿಯಾಗಿದ್ದಾರೆ. ತಲೆಮಾರುಗಳಿಂದ ತಲೆಮಾರುಗಳಿಗೆ ಹಲವು ಮಹಾನ್ ನಾಯಕರು ಈದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ..ಹೀಗಿರುವಾಗ 2022 ನೇಸಾಲಿನಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಹೇಗೆ ಆಚರಿಸಬೇಕು ನಾವು..? ಈ ದೇಶದನಾಗರಿಕರಾಗಿ ನಾವೊಂದು ನಿರ್ಣಯವನ್ನು ಕೈಗೊಳ್ಳಬೇಕಿದೆ..ನಮಗೆ ಸ್ವಾತಂತ್ರ್ಯಕ್ಕಾಗಿಹೋರಾಡುವ , ಆ ಹೋರಾಟದಲ್ಲಿ ಅವಕಾಶ ಸಿಗದಿದ್ದರೂ ಭಾರತಕ್ಕೆ ವಿಶ್ವದ ನಾಯಕತ್ವಕಲ್ಪಿಸಿಕೊಡುವ ಅದ್ಭುತ ಅವಕಾಶ ಸಿಕ್ಕಿದೆ.. ಈ ನಿಟ್ಟಿನಲ್ಲೇ ನಮ್ಮ ದೇಶದ ಅಭಿವೃದ್ಧಿಗಾಗಿ ನಾವುಗಳು ಕೆಲವೊಂದು ರಚನಾತ್ಮಕ ಕೆಲಸಗಳನ್ನು ಅವಶ್ಯವಾಗಿಮಾಡಬೇಕಿದೆ.. 2022 ರ ಒಳಗಾಗಿ ಈ ದೇಶದ ನಾಗರಿಕರಾಗಿ ಏನನ್ನಾದರೂ ನಾವು ಮಾಡಲೇಬೇಕು..ಹಾಗೇ ಮಾಡಿದರೇ ನಮ್ಮ ಕೊಡುಗೆಗಳು ದೇಶವನ್ನು ಹೊಸ ಶೃಂಗಕ್ಕೆಕೊಂಡೊಯ್ಯುತ್ತದೆ..ಪಂಚಾಯತ್ ಗಳು, ನಗರಾಡಳಿತಗಳು, ರಾಜ್ಯ ಸರ್ಕಾರಗಳು ಹೀಗೆಪ್ರತಿಯೊಂದು ಸಂಸ್ಥೆಗಳು ಈ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. 2022 ರಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಮುನ್ನ ಇರುವ ಐದು ವರ್ಷಗಳು ನಮ್ಮನ್ನ ನಾವುಸಾಬೀತು ಪಡಿಸಿಕೊಳ್ಳುವುದಕ್ಕೆ ಇರುವ ಕಾಲಾವಕಾಶ ಎಂಬುವುದನ್ನ ನಿರ್ಣಯಿಸಿದೆ ನಾವುಗಳುಮುಂದಕ್ಕೆ ಹೆಜ್ಜೆ ಇಡಬೇಕಾಗಿದೆ.
ನಾವು ಈ ದೇಶದ ಬಡಜನತೆಯಜೀವನಕ್ರಮವನ್ನು ಬದಲಾಯಿಸಲು ಬಯಸುತ್ತೇವೆ. ಉಚಿತ ಗ್ಯಾಸ್ ಸಂಪರ್ಕ ವಿತರಿಸುವ ಮೂಲಕವೋಬಡ ಜನತೆಯ ಗುಡಿಸಲಿಗೆ ವಿದ್ಯುತ್ ಕಲ್ಪಿಸುವ ಮೂಲಕವೋ ಅಲ್ಲ. ನೀರು, ವಿದ್ಯುತ್ ಹಾಗೂಶೌಚಾಲಯದಂತಹ ಸೌಲಭ್ಯಗಳನ್ನು ಒಳಗೊಂಡಿರುವ ಸ್ವಂತಮನೆಯನ್ನು ಈ ದೇಶದ ಬಡವರಲ್ಲಿಕಡುಬಡುವರು ಹೊಂದುವಂತಾಗಬೇಕು ಅನ್ನುವುದು ನಮ್ಮ ಕನಸು, ಮಹತ್ವಾಕಾಂಕ್ಷೆ ..ಬಡವರಿಗೆಇಂತಹ ಮನೆಗಳನ್ನು ವಿತರಿಸುವಂತಹ ಮಹಾನ್ ಕನಸನ್ನು ಹಿಂಬಾಲಿಸುವ ಅವಶ್ಯಕತೆ ಇದೆ…
ಈವರ್ಷ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮಶತಮಾನೋತ್ಸವ ವರ್ಷ .. ಈ ದೇಶದಲ್ಲಿರುವ ಕಡುಬಡವರನ್ನು ನಾವುಗಳು ಬಡತನದಿಂದ ಹೊರಗೆ ತರುವುದು ಹೇಗೆ..?ಅವರು ಈ ಯೋಚನೆಯನ್ನಕೇಂದ್ರಬಿಂದುವಾಗಿಟ್ಟು ಕೊಂಡು ಹೊಸ ಯೋಜನೆಗಳನ್ನು ರೂಪಿಸಲು ಈ ದೇಶಕ್ಕೆ ಹೊಸದೃಷ್ಟಿಕೋನವನ್ನು ನೀಡಿದರು. ಇಡೀ ದೇಶದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಜಯಂತಿಯನ್ನು ಆಚರಿಸುತ್ತಿದೆ. ಹೀಗಾಗಿ ಕಾಂಡ್ಲಾ ಬಂದರನ್ನು ನಾವು ಏಕೆ ಪಂಡಿತ್ ದೀನ್ದಯಾಳ್ ಬಂದರು ಟ್ರಸ್ಟ್ ಅಂತಾ ಮರುನಾಮಕರಣ ಮಾಡಬಾರದು ಅನ್ನೋ ಸಲಹೆಯನ್ನು ಕಾಂಡ್ಲಾಬಂದರು ಟ್ರಸ್ಟ್ ಹಾಗೂ ನಿತಿನ್ ರವರಿಗೆ ಮತ್ತು ಅವರ ಇಲಾಖಗೆ ನೀಡುತ್ತಿದ್ದೇನೆ..ಏಕೆಂದರೇ ಈ ಕಾರ್ಯ ದೇಶದ ಬಡ ನಾಗರಿಕರ ಜೊತೆಯಲ್ಲಿ ಬಡತನ ಹಾಗೂ ಪಂಡಿತ್ ದೀನ್ ದಯಾಳರಸಾರ್ಥಕ ಕೊಡುಗೆಗಳಿಗೆ ಸಮರ್ಪಣೆಯಾಗುತ್ತದೆ. ಮತ್ತು ಇದು ನಮ್ಮೊಳಗೆ ಸಹಾನು ಭೂತಿಯನ್ನುಸೃಷ್ಟಿಸುತ್ತದೆ. ಹಾಗೂ ಸಮಾಜದಲ್ಲಿರುವ ತುಳಿತಕ್ಕೊಳಗಾದವರು, ಶೋಷಣೆಗೊಳಗಾದವರು ಹಾಗೂವಂಚಿತ ಸಮುದಾಯದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಈ ಭಾವನೆಯಿಂದಸಾಧ್ಯವಾಗುತ್ತದೆ.
ಮತ್ತೊಮ್ಮೆ, ಕಚ್ ಗೆ ಬರುವಂತಹ ಅವಕಾಶವನ್ನುಪಡೆದುಕೊಂಡಿದ್ದೇನೆ ಹಾಗೂ ನಿಮ್ಮೊಂದಿಗೆ ಒಬ್ಬನಾಗುವ ಅವಕಾಶವೂ ದೊರತಿದೆ..ಇಷ್ಟೊಂದುದೊಡ್ಡ ಸಂಖ್ಯೆಯಲ್ಲಿ ನೀವೆಲ್ಲಾ ಇಲ್ಲಿ ಪಾಲ್ಗೊಂಡು ಹಾರೈಸಿದ್ದೀರಾ..ನಿಮಗೆಲ್ಲರಿಗೂನಾನು ಆಭಾರಿಯಾಗಿದ್ದೇನೆ . ನಿತಿನ್ ರವರೇ ಈ ಕಾರ್ಯಕ್ರಮದ ಭಾಗವಾಗಲು ನನಗೆ ಅವಕಾಶಮಾಡಿಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು…
***
AKT/AK/IG
Sagarmala Project is going to have a very positive impact on Gujarat. Port-led development will bring more jobs too: Minister @nitin_gadkari
— PMO India (@PMOIndia) May 22, 2017
Gujarat is known for its rich maritime tradition. This spirit continues even today: Gujarat CM @vijayrupanibjp
— PMO India (@PMOIndia) May 22, 2017
Kandla has people from all over India. I thank the people of Kandla for the memorable welcome: PM @narendramodi pic.twitter.com/oOnkYrmXTn
— PMO India (@PMOIndia) May 22, 2017
There is something very special about the land of Kutch and the people who live here: PM @narendramodi pic.twitter.com/6tEw7A0Ch1
— PMO India (@PMOIndia) May 22, 2017
Good ports are essential for the progress of India. Kandla has emerged as one of the finest ports in Asia: PM @narendramodi pic.twitter.com/RuKDwv0nc4
— PMO India (@PMOIndia) May 22, 2017
Vital pillars of economic growth are infrastructure, efficiency and transparency: PM @narendramodi pic.twitter.com/o6QrwXymCM
— PMO India (@PMOIndia) May 22, 2017