ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನವದೆಹಲಿಯ ಚಾಣಕ್ಯಪುರಿಯ ಡಾ.ರಾಧಾಕೃಷ್ಣನ್ ಮಾರ್ಗದೊಂದಿಗೆ ಹೊಂದಿಕೊಂಡ ಜೀಸಸ್ ಮತ್ತು ಮೇರಿ ಮಾರ್ಗದಲ್ಲಿನ ಟಿ – ಜಂಕ್ಷನ್ ನಲ್ಲಿ ನಿವೇಶನ ಸಂಖ್ಯೆ 29-ಸಿ ಮತ್ತು 29-ಡಿಯಲ್ಲಿ 5882.96 ಚದರ ಮೀಟರ್ ಗಳ ಅಥವಾ 1.478 ಎಕರೆ ಭೂಮಿಯನ್ನು ಹಾಲಿ ಇರುವ ದರ ಹಾಗೂ ಕೆಳಕಂಡ ಷರತ್ತುಗಳೊಂದಿಗೆ ಮಧ್ಯಪ್ರದೇಶ ಸರ್ಕಾರಕ್ಕೆ ದೆಹಲಿಯಲ್ಲಿ ತನ್ನ ರಾಜ್ಯದ ಅತಿಥಿಗೃಹ ನಿರ್ಮಾಣಕ್ಕಾಗಿ ಮಂಜೂರು ಮಾಡಲು ತನ್ನ ಅನುಮೋದನೆ ನೀಡಿದೆ.
(i) ಮಧ್ಯಪ್ರದೇಶ ಸರ್ಕಾರವು ತನಗೆ ಮಂಜೂರಾಗಿರುವ ನಿವೇಶನದಲ್ಲಿ ರಾಜ್ಯದ ಅತಿಥಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಂಡ ತರುವಾಯ ನವದೆಹಲಿಯ, ಚಾಣಕ್ಯಪುರಿಯ, ಗೋಪಿನಾಥ್ ಬಾರ್ದೋಲಯ್ ಮಾರ್ಗ್ ದ 2ನೇ ನಂಬರ್ ನಲ್ಲಿರುವ 0.89 ಎಕರೆ ಜಮೀನನ್ನು ಎಲ್ ಮತ್ತು ಡಿಓ/ಎಂಓಎಚ್.ಯು.ಎ. ವಶಕ್ಕೆ ನೀಡಲಿದೆ.
(ii) ಮಧ್ಯಪ್ರದೇಶ ಸರ್ಕಾರವು ಎರಡೂ ಜಮೀನು ಒಂದೇ ಭೂದರದ ವಲಯದಲ್ಲಿರುವ ಕಾರಣ, 0.59 ಎಕರೆ ಭೂ ಪ್ರದೇಶದ ವ್ಯತ್ಯಾಸದ ಮೊತ್ತವನ್ನು ಹಾಲಿ ಇರುವ ದರದಂತೆ ಪಾವತಿ ಮಾಡಲಿದೆ.
(iii) ಮಧ್ಯಪ್ರದೇಶ ಸರ್ಕಾರವು ಹಾಲಿ ಸ್ವಾಧಿನದಲ್ಲಿರುವ 0.89 ಎಕರೆ ಜಮೀನನ್ನು ಸರ್ಕಾರಕ್ಕೆ ಮರಳಿಸುವವರೆಗೆ ವಸತಿ ವೆಚ್ಚವನ್ನು ಹಾಲಿ ದರದಂತೆ ಎಲ್ ಮತ್ತು ಡಿಓ/ಎಂಓಎಚ್.ಯು.ಎಗೆ ಪಾವತಿ ಮಾಡಲಿದೆ.
ಈ ಭೂ ಮಂಜೂರಾತಿಯು ಮಧ್ಯಪ್ರದೇಶ ಸರ್ಕಾರಕ್ಕೆ ಇಂದಿನ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಕಲ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ರಾಜ್ಯದ ಅತಿಥಿಗೃಹವನ್ನು ನಿರ್ಮಾಣ ಮಾಡಲು ಸಹಕಾರಿಯಾಗಲಿದೆ.
ಮಧ್ಯಪ್ರದೇಶ ಸರ್ಕಾರವು, ತನ್ನ ರಾಜ್ಯದ ಅತಿಥಿ ಗೃಹ ನಿರ್ಮಾಣದ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಈ ಜಮೀನಿನ ಬಳಕೆ ಮಾಡಿಕೊಳ್ಳುವುದಿಲ್ಲ. ಈ ಮಧ್ಯೆ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮಧ್ಯಪ್ರದೇಶ ಸರ್ಕಾರವು ಹಾಲಿ ಇರುವ ಎಲ್ಲ ಕಟ್ಟಡ ನಿರ್ಮಾಣ ಕಾನೂನು, ಅಂಗರಚನೆ, ಮಾಸ್ಟರ್ ನಕ್ಷೆಯ ನಿಯಮಾವಳಿ ಇತ್ಯಾದಿಯನ್ನು ಪಾಲಿಸಲಿದೆ.