Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ರಿಯಾದ್ ನ ಎಲ್ಅಂಡ್ ಟಿ ವಸತಿ ಸಂಕೀರ್ಣದಲ್ಲಿ ಎಲ್ ಅಂಡ್ ಟಿ ಸಂಸ್ಥೆಯ ನೌಕರರನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ಪಠ್ಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ರಿಯಾದ್ ನ ಎಲ್ಅಂಡ್  ಟಿ ವಸತಿ ಸಂಕೀರ್ಣದಲ್ಲಿ ಎಲ್ ಅಂಡ್  ಟಿ ಸಂಸ್ಥೆಯ ನೌಕರರನ್ನುದ್ದೇಶಿಸಿ  ಮಾಡಿದ ಭಾಷಣದ ಕನ್ನಡ ಪಠ್ಯ


ನನ್ನ ಪ್ರೀತಿಯ ಗೆಳೆಯರೇ, ನಿಮ್ಮ ಬೆವರಿನ ವಾಸನೆ ನನ್ನನ್ನು ಇಲ್ಲಿಗೆ ಎಳೆದು ತಂದಿದೆ. 
 
ನಿಮ್ಮ ಈ ಬೆವರು ನಿಮ್ಮ ಕುಟುಂಬದವರ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಡಾಲರ್, ಪೌಂಡ್ ಸಂಪಾದಿಸಿಕೊಡುವುದಷ್ಟೇ ಅಲ್ಲದೆ ಭಾರತದ ಗೌರವ,ಘನತೆ ಮತ್ತು ವೈಭವವನ್ನು ಹೆಚ್ಚಿಸುತ್ತದೆ. ನಾವು ಕೆಲಸಮಾಡುವಾಗ ಇದು ನಮಗೆ ಗೊತ್ತಾಗುವುದೇ ಇಲ್ಲ. ನಾವು ಯಾವುದೋ ಪ್ರಾಜೆಕ್ಟನೊಡನೆ ಸೇರಿಕೊಂಡಿದ್ದೇವೆ ಎಂದು ಕೊಂಡಿರುತ್ತೇವೆ. ಆದರೆ ಇತಿಹಾಸವನ್ನು ನೋಡಿದರೆ ಪ್ರಪಂಚದಲ್ಲಿ ಇಂತಹ ಅನೇಕ ಸ್ಥಾನಗಳಿರುವುದರ ಅರಿವಾಗುತ್ತದೆ. 
 
ನೀವೇನಾದರೂ ಆಫ್ರಿಕಾಗೆ ಹೋದರೆ ಅಲ್ಲಿಯ ಜನ ಒಂದು ರೈಲ್ವೆ ಬಗ್ಗೆ ಹೇಳುತ್ತಾರೆ, ಆ ಕಾಲದಲ್ಲಿ 45%  ಎತ್ತರದಲ್ಲಿ ಆ ರೈಲ್ವೆಯನ್ನು ಓಡಿಸಲಾಗಿತ್ತು. ಅಲ್ಲಿಯ ಜನರು ಈಗಲೂ ಹೆಮ್ಮೆಯಿಂದ ಭಾರತದ ಜನರು ಬಂದು ಕಷ್ಚಪಟ್ಟು ಈ ರೈಲ್ವೆ ಲೈನನ್ನು ಹಾಕಿದ್ದರು, ಅದು ಇಲ್ಲಿ ಹಾದು ಹೋಗುತ್ತದೆ ಎಂದು ಹೇಳುತ್ತಾರೆ. ನೀವೇನಾದರೂ ಇಂದು ಮಾರಿಷಸ್ಸಿಗೆ ಹೋದಲ್ಲಿ ಮಾರಿಷಸ್ಸಿನ ಸರಕಾರ   ಎಲ್ಲಿ ಭಾರತೀಯ ಜನರು ಮೊದಲಬಾರಿಗೆ ಭೂಮಿ ಮೇಲೆ ಕಾಲಿಟ್ಟರೋ   ಅಲ್ಲಿ ಒಂದು    ವಸ್ತು  ಸಂಗ್ರಹಾಲಯ   ಕಟ್ಟಿಸಿದ್ದಾರೆ  ಹಾಗೂ ಅವರ ಪೂರ್ವಿಕರು ಹಿಂದೂಸ್ಥಾನದಿಂದ ಯಾವಾಗ ಬಂದರು, ಯಾವ ಸ್ಥಿತಿಯಲ್ಲಿ ಬಂದರು, ಹೇಗೆ ಬದುಕುತ್ತಿದ್ದರು ಹಾಗೂ ಇವರು ಹೇಗೆ ಮಾರಿಷಸ್ಸನ್ನು ಕಟ್ಟಿದರು  ಎನ್ನುವುದರ ಸಂಪೂರ್ಣ ಚಿತ್ರಣವನ್ನು ಅಲ್ಲಿ ಮಾಡಿಟ್ಟಿದ್ದಾರೆ   . ಅವುಗಳನ್ನು ನೋಡಿದಾಗ ಮೈ ನವಿರೇಳುತ್ತದ,  150  ವರ್ಷಗಳ ಹಿಂದೆ,ಕಠಿಣ  ಪರಿಸ್ಥಿತಿಯಲ್ಲಿ  ಭಾರತದಿಂದ ಹೋದ ಜನ ತಮ್ಮ ಬೆವರು ರಕ್ತಗಳನ್ನು ಹರಿಸಿ ಅಲ್ಲಿ ಮಾನವತೆಯ ಚರಿತ್ರೆಯನ್ನುಹೇಗೆ ಹೊಸದಾಗಿ ಬರೆದರು ಎಂದು ಯೋಚಿಸಿದಾಗ ರೋಮಾಂಚನವಾಗುತ್ತದೆ. ನೀವೂ ಸಹ ಏನು ಮಾಡುತ್ತಿರುವಿರಿ ಎಂದು ನಿಮಗೆ ಇಂದು ಗೊತ್ತಿಲ್ಲದೆ ಇರಬಹುದು. ಆದರೆ ಶತಮಾನಗಳ ನಂತರ ಈ ವಸ್ತುಗಳ ಚರ್ಚೆಯಾದಾಗ ಹಿಂದೂಸ್ಥಾನದಿಂದ ಈ ರೀತಿ ಕೆಲವು ಯುವಕರು ಬಂದಿದ್ದರು ಅವರು   ರಿಯಾದ್  ಗೆ ಈ ಹೊಸ ಅಮೂಲ್ಯ ಖಜಾನೆ ಕೊಟ್ಟಿದ್ದರು ಎಂದು ಜೋರಾಗಿ ಹೇಳಲಾಗುವುದು.
 
ನಿಮ್ಮಲ್ಲಿ ಬಹಳ ಕಡಿಮೆ ಜನರು ನನಗೆ ಸೀದಾ ಪತ್ರ ಬರೆಯುತ್ತಾರೆ. ಆದರೆ ನೀವು ನಿಮ್ಮ ಕುಟುಂಬಕ್ಕೆ ಪತ್ರ ಬರೆಯುತ್ತೀರಿ, ನಿಮ್ಮ ಕುಟುಂಬಗಳು ಆ ಪತ್ರಗಳನ್ನು ನನಗೆ ಕಳಿಸಿದ್ದಾರೆ., ಈ ರೀತಿ ಬಹಳಷ್ಟು ಸಮಾಚಾರಗಳು ನನಗೆ ತಲುಪುತ್ತಿರುತ್ತವೆ. ಅದರಲ್ಲಿ ನೋವಿರುತ್ತೆ, ಸಂಕಟವಿರುತ್ತೆ, ಚಿಂತೆಯಿರುತ್ತೆ, ಕೆಲವುಬಾರಿ ಖುಷಿಯ ಖಜಾನೆ ಕೂಡ ಇರುತ್ತೆ. ನಾನು ಇದನ್ನೆಲ್ಲಾ ನೋಡಿದಾಗ ನಿಮ್ಮ ಜೀವನದ ಕಷ್ಟಗಳು ನಿಮ್ಮ ಪರಿಸ್ಥಿತಿಗಳು, ಒಳ್ಳೆಯ ಸುದ್ದಿ ಬಂದಾಗ ನಾನೂ ಕೂಡ ನಿಮ್ಮ ಕುಟುಂಬದವರಷ್ಚೇ ಖುಷಿ ಪಡುತ್ತೇನೆ. ಚಿಂತೆಯ ಸಮಾಚಾರ ಬಂದಾಗ ನಿಮ್ಮ ಕುಟುಂಬದವರಷ್ಚೇ ನೋವು  ನನಗಾಗುತ್ತದೆ. ಏಕೆಂದರೆ ನೀವು ಒಂದುರೀತಿಯಲ್ಲಿ ನನ್ನ ಕುಟುಂಬದವರೂ ಕೂಡ. 
 ನಿಮ್ಮ ಸುಖ-ದು:ಖ ನನ್ನ ಸುಖ- ದು:ಖವೂ ಆಗಿರುತ್ತೆ.   ಹೀಗಿರುವುದರಿಂದಲೇ ಭಾರತ  ಸರ್ಕಾರವು ತನ್ನ ಕಡೆಯಿಂದ ವಿಶ್ವದಲ್ಲೆಲ್ಲಾ ಹರಡಿರುವ ಭಾರತೀಯ ಸಮುದಾಯಕ್ಕೆ ಏನೇನು ಒಳ್ಳೆಯದು ಮಾಡಬಹುದು ಎಂಬ ದಿಕ್ಕಿನಲ್ಲಿ ಯಾವಾಗಲೂ ಕೆಲಸ ಮಾಡುತ್ತಿರುತ್ತದೆ. ನಾನು ಹಿಸ್  ಮೆಜೆಸ್ಟಿ  ಕಿಂಗ್  ರವರಿಗೂ ಚಿರಋಣಿ. ಏಕೆಂದರೆ ಅವರೊಡನೆ ಮಾತನಾಡುವ ಅವಕಾಶ ದೊರೆತಾಗಲೆಲ್ಲಾ ನಾನು ನಿಮ್ಮ ಕಡೆಯಿಂದ ಹೇಳಬೇಕಾದ್ದನ್ನು ಹೇಳಿದೆ. ಭಾರತೀಯ ಸಮುದಾಯ ಹೇಗೆ ಕೆಲಸ ಮಾಡುತ್ತಿದೆ ಎಂದು ಕೇಳಿದೆ.  ಅವರು ನಿಮ್ಮ ಬಗ್ಗೆ ಬಹಳ ಸಂತೋಷಕರ ಮಾತುಗಳನ್ನಾಡಿದರು, ಅದನ್ನು ಕೇಳಿ ನಾನು ಹಿಗ್ಗಿಹೋದೆ.  
 
ನೀವುಗಳು ಇಲ್ಲಿ ಕೆಲಸ ಮಾಡುವಿರಿ.  ಹಿಂದೂಸ್ಥಾನದ ವರ್ಕ್ಫೊರ್ಸ್  ವಿಶ್ವದ ಅನೇಕ ಕ್ಷೇತ್ರಗಳನ್ನು ತಲುಪುತ್ತದೆ, ಏಕೆಂದರೆ ಪ್ರಪಂಚಕ್ಕೆ ಇಂದು ಯಾವ ರೀತಿಯ ಮಾನವ  ಸಂಪನ್ಮೂಲ  ಅವಶ್ಯಕತೆಯಿದೆ ಅದನ್ನು ನೀಡುವ ತಾಕತ್ತು ಹಿಂದೂಸ್ಥಾನಕ್ಕೆ ಮಾತ್ರ ಇದೆ.  ಮಿಲಿಯ ಗಟ್ಟಲೆ  ಘಂಟೆಗಳ  ಕೆಲಸ ಆಗುತ್ತಿದೆ.   ಮಿಲಿಯ ಗಟ್ಟಲೆ  ಮಾನವ ದಿನಗಳ    ಕೆಲಸದಲ್ಲಿ ತೊಡಗಿದ್ದಾರೆ.    ಈ ಬಗ್ಗೆ ಬಹಳ ಹೆಮ್ಮೆಯಿಂದ ಇಂಥ ದೊಡ್ಡ ಕೆಲಸ, ಇಂತಹ ವಿಶಾಲ ಕೆಲಸ, ಇಷ್ಚೊಂದು ಜನರ ಕೆಲಸ ಇವ್ಯಾವೂ ಅಕಸ್ಮಾತ್ ಆದವಲ್ಲ ಎಂದು ನನಗೆ ಹೇಳಲಾಯಿತು .
 
ಈ ಜೀರೋ  ಲೂಸ್  ಎನ್ನುವುದು  ಟೆಕ್ನಾಲಜಿ ಯ ಕಾರಣದಿಂದಾದುದಲ್ಲ, ಮ್ಯಾನೇಜ್ಮೆಂಟ್ ನ ಯೋಗ್ಯತೆಯ ಕಾರಣದಿಂದಾದುದಲ್ಲ, ಇದರ ಹೆಗ್ಗಳಿಕೆ ನಿಮಗೇ ಸೇರಬೇಕು ಏಕೆಂದರೆ ನೀವು ಆ ಶಿಸ್ತನ್ನು   ಪಾಲಿಸಿದ್ದೀರಿ . ನೀವು ಯಾವಾಗಲೂ ಯಾವುದೇ ಕೆಲಸವನ್ನು ಗಡಿಬಿಡಿಯಲ್ಲಿ ಮಾಡಿಲ್ಲ. ಎಲ್ಲಿಯವರೆಗೆ  ತಾಂತ್ರಿಕವಾಗಿ  ತೃಪ್ತಿಯಾಗದ ಹೊರತು  ನೀವು ಹೆಜ್ಜೆ ಮುಂದಿಡಲಿಲ್ಲ.  ಯಾರಿಗೂ ಯಾವ ನಷ್ಟವೂ ಆಗದಿರಲು ಇದೇ ಕಾರಣ.
 
ಒಂದುವೇಳೆ ಗೋಡೆ ಬಿದ್ದರೆ ಕಟ್ಟಿಕೊಳ್ಳಬಹುದು. ಮನುಷ್ಯ ಹೊರಟುಹೋದರೆ ಏನೂ ಉಳಿಯದು. ಇಲ್ಲಿಯವರೆಗೆ ನೀವು  ಯಾವ ಶಿಸ್ತಿನ   ಜೊತೆ ಕೆಲಸ ಮಾಡುತ್ತಾ ಭಾರತದ ಗೌರವವನ್ನು ಹೆಚ್ಚಿಸಿದ್ದೀರೋ , ನೀವುಗಳು ಕೆಲಸ ಮಾಡುತ್ತಿದ್ದೀರಿ, ಕೆಲಸ ಮಾಡುತ್ತಾ ನಿಮ್ಮ ದೇಶದಲ್ಲಿ ನಿಮ್ಮ ಮಕ್ಕಳ ಓದಿನ ಬಗ್ಗೆ  ಚಿಂತಿಸುತ್ತಿರಬಹುದು , ಆದರೆ ನೀವು ಮಾಡುತ್ತಿರುವ ಕೆಲಸದ ಒಂದು ಉಪ ಉತ್ಪನ್ನ  ಕೂಡ ಇದೆ .   ಆ ಉಪ ಉತ್ಪನ್ನ   ಏನೆಂದರೆ ನಿಮ್ಮನ್ನು ನೋಡುತ್ತಾ ಜನರು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಾರಲ್ವ, ಇನ್ಯಾವುದಾದರೂ ಪ್ರಾಜೆಕ್ಟ್   ಇದ್ದರೆ ಯುವಕರನ್ನು ಕರೆದುಕೊಂಡು ಬರಬೇಕಾದರೆ ಹಿಂದೂಸ್ಥಾನದಿಂದ ಕರೆದು ತಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಯೋಚಿಸುತ್ತಾರೆ. ಇದು ನೀವು ಭಾರತಕ್ಕೆ ದೊರಕಿಸಿಕೊಡುವ ಗೌರವ, ಭಾರತದ ಯೌವ್ವನಕ್ಕೆ ನೀಡುವ ತಾಕತ್ತು. ಹೀಗೆ ಭಾರತದಲ್ಲಿರುವ ನವಯುವಕರಿಗೆ ನೀವು ಅವಕಾಶಗಳ ಬಾಗಿಲನ್ನು ತೆರೆದಿಟ್ಟಂತಾಯಿತು. ಆದ್ದರಿಂದ ನಿಮಗೂ ನಿಮ್ಮ ಕೌಶಲ್ಯಕ್ಕೂ, ನಿಮ್ಮ ಸಾಮರ್ಥ್ಯಕ್ಕೂ ಧನ್ಯವಾದಗಳು.
 
ಈಗ ಇಲ್ಲಿ ಎಷ್ಟೆಷ್ಟೋ ದೂರದಲ್ಲಿ ನಿಮ್ಮ ಕೆಲಸದ  ಸ್ಥಳ  ಇರುತ್ತೆ.  ಯಾವಾಗಲೋ ರಾಯಭಾರ  ಕಚೇರಿಯ  ಕೆಲಸವಿರುತ್ತೆ, ರಜಾ ದಿನಗಳಲ್ಲಿ ರಾಯಭಾರ  ಕಚೇರಿ   ಇರುವುದಿಲ್ಲ.   ಅದು  ನಡೆಯುವಾಗ ನಿಮಗೆ ರಜೆಯಿಲ್ಲ, ನಿಮ್ಮ ಕಷ್ಟಗಳು ಬಹಳ.  ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದು  ಡಿಜಿಟಲ್ ಯುಗ  . ಹೀಗಾಗಿ ಸರ್ಕಾರ ಒಂದು “ಮದದ್” ಎಂಬ ಪೋರ್ಟಲ್  ಅನ್ನು  ಆರಂಭಿಸಿದೆ.  ನೀವುಗಳು ಅದರ ಲಾಭ ಪಡೆಯುತ್ತಿರಬಹುದು. ಈ “ಮದದ್ “  ಪೋರ್ಟಲ್ ನಿಂದ   ಪ್ರಪಂಚದಲ್ಲಿ ಎಲ್ಲಿಯಾದರೂ ಇರುವ ಭಾರತೀಯನು ತನ್ನ ಅಭಿಪ್ರಾಯವನ್ನು ಭಾರತ ಸರ್ಕಾರಕ್ಕೆ ಸುಲಭವಾಗಿ ತಲುಪಿಸಬಲ್ಲನು.
 
  ಈ ದಿನಗಳಲ್ಲಿ ಭಾರತಕ್ಕೆ ಇನ್ನೊಂದು ಗುರುತು ಸಿಕ್ಕಿದೆ. ಅದರ ಡಿಪ್ಲೊಮಸಿ ಯಲ್ಲಿ   ಎದ್ದು ಕಾಣುವ ಮಾನವ ಮುಖವಿದೆ . ಮಾನವ ಪ್ರಕೃತಿ ಇದೆ .   ಪ್ರಪಂಚದಲ್ಲಿ ಎಲ್ಲಿಯಾದರೂ ಭಾರತೀಯರಿಗೆ ಸಂಕಟ ಬಂದರೆ ಭಾರತ ಸರ್ಕಾರವು ಅಲ್ಲಿಗೆ   ತಕ್ಷಣ ತಲುಪುವುದು. ಯಮನ್ ನಿಂದ ಹೇಗೆ ಸಾವಿರಾರು ಜನರ ಜೀವನ ಉಳಿಸಲಾಯಿತು, ಇಂದು ವಿಶ್ವದ ಯಾವ ಮೂಲೆಯಿಂದಲಾದರೂ ಸುದ್ದಿ ಬಂದರೆ, ಒಂದೆರಡು ಕುಟುಂಬದ ಸುದ್ದಿಯೇ ಆದರೂ ನಮ್ಮ ವಿದೇಶ ಮಂತ್ರಾಲಯ, ನಮ್ಮ ವಿದೇಶಮಂತ್ರಿ ಸುಶ್ಮಾ  ಜೀ ಹಾಗೂ ಅವರ ಪೂರ್ತಿ ಟೀಮ್, ತಕ್ಷಣ ಆ ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಾ,   ಪ್ರಪಂಚದ ಯಾವುದೋ ಮೂಲೆಯಲ್ಲಿ  ಒಬ್ಬ ಪ್ರಜೆ ಸಂಕಟದಲ್ಲಿದ್ದರೆ ಅದರ ಪರಿಹಾರಕ್ಕೆ ಭಾರತ ಸರ್ಕಾರ ಯಾವ ದೇಶದೊಡನೆ ಸಂಬಂಧಕ್ಕೆ  ಎಷ್ಟು ತಾಕತ್ತು ಹಾಕಬೇಕೋ ಅದಕ್ಕಿಂತ ಹೆಚ್ಚಿನ ತಾಕತ್ತನ್ನು  ಹಾಕುತ್ತದೆ. ಹಾಗೂ ಇದಕ್ಕಾಗಿಯೇ “ಮದದ್” ಪೋರ್ಟಲ್ ಅನ್ನು  ಸ್ಥಾಪಿಸಲಾಗಿದೆ. 
 
 ಅದೇ ರೀತಿಯಲ್ಲಿ ಎರಡನೆಯ ವ್ಯವಸ್ಥೆಯೆಂದರೆ ”  E-migrate, ” ಇ-ಮಿಗ್ರಾಟ್  ವ್ಯವಸ್ಥೆ ಯೆಂದರೆ ಯಾವ ಉದ್ಯೋಗದಾತ  ಇದ್ದಾನೋ ಯಾವ ನೌಕರರು  ಇದ್ದಾರೋ ಅವರ ನಡುವಿನ ಸಮನ್ವಯ  ಮತ್ತು ಇವರಿಬ್ಬರ ಮೂಲಕ ವ್ಯವಸ್ಥೆಯೊಡನೆ ಸಮನ್ವಯ .  ಇದೂ ಕೂಡ ತುಂಬಾ ಸುಲಭವಾಯಿತು, ಇದರ ಕಾರಣದಿಂದ ಎಲ್ಲೂ ಯಾವ ಮೋಸ   ಆಗುವ ಸಾಧ್ಯತೆ ಅತ್ಯಂತ ಕಡಿಮೆ.    ಇದರಿಂದ ತಪ್ಪು ವ್ಯಕ್ತಿಗಳ ಕೈಗೆ ಸಿಲುಕುವ, ದಲ್ಲಾಲಿಗಳ ಕೈಲಿ ಸಿಕ್ಕಿಹಾಕಿಕೊಳ್ಳುವ ಸಂಭವ ಕಡಿಮೆ. ಹೀಗೆ ಈ ದಿಕ್ಕಿನಲ್ಲೂ ಒಂದು ಪ್ರಯತ್ನವನ್ನು ಮಾಡಿದ್ದೇವೆ.
 
ಮಂಬರಲಿರುವ ದಿನಗಳಲ್ಲಿ ಎರಡು, ಒಂದು ಇಮಿಗ್ರಂಟ್    ಅನ್ನು   ಖಾಯಂ   ಮಾಡಲಿಕ್ಕೋಸ್ಕರ, ಎರಡನೆಯದಕ್ಕೆ ನಾವು ಇಲ್ಲೇ ಪ್ರಯತ್ನಪಡುವವರಿದ್ದೇವೆ.  ರಿಯಾದ್  ನಲ್ಲಿ ಜೆಡ್ಡಾಹ್  ವರ್ಕರ್ಸ್  ರಿಸೋರ್ಸ್  ಸೆಂಟರ್  ಅನ್ನು  ತೆರೆಯುವುದು, ಇದರಿಂದ ನಮ್ಮ ಅವಶ್ಯಕತೆಗಳು ಪೂರ್ಣಗೊಳ್ಳುತ್ತವೆ.  ಎರಡನೆಯದು 24X7) ಒಂದು ಹೆಲ್ಪ್ ಲೈನ್   ಕಾಲ್  ಸೆಂಟರ್  ನ   ವ್ಯವಸ್ಥೆ ಮಾಡುವುದು.  ಉಚಿತವಾದ   ಈ ಹೆಲ್ಪ್ ಲೈನ್   ನಡೆಯುತ್ತಿರುತ್ತದೆ.  ಏಕೆಂದರೆ ಬೇರೆ-ಬೇರೆ ಭಾಷೆಗಳಲ್ಲಿ ಕೂಡ ಈ ವ್ಯವಸ್ಥೆಯ ಸೇವೆಗಳು ನಿಮಗೆ   ದೊರೆಯಲಿವೆ.  ಅಂದರೆ ನಿಮಗೆ ಎಲ್ಲಾದರೂ  ಯಾವುದಾದರೂ ಅವಶ್ಯಕತೆ ಕಂಡು ಬಂದರೆ ಆ ಹೆಲ್ಪ್ ಲೈನ್   ನ ಮೂಲಕ ನೀವು ನಮ್ಮ ಮಾತನ್ನು ಹೇಳಬಹುದು.
ಎರಡನೆಯದಾಗಿ ನಾನು 24 ಗಂಟೆಯೂ ಖಾಲಿ ಇದ್ದೇನೆ., ನನಗೆ ಯಾವುದೇ ಕೆಲಸ ಬೊಗಸೆಗಳಿಲ್ಲ.  ಒಂದುವೇಳೆ ಕೆಲಸವಿದ್ದರೆ ಅದು ನನ್ನ   ಕೆಲಸವಲ್ಲ ನೂರಿಪ್ಪತ್ತೈದು ಕೋಟಿ ದೇಶವಾಸಿಗಳ ಕೆಲಸ.   ಹೀಗಾಗಿ ಭಾರತ ಸರ್ಕಾರವು ನೇರವಾಗಿ ಪ್ರಧಾನ ಮಂತ್ರಿ ಕಛೇರಿಯೊಡನೆ ಬೆಸೆದುಕೊಂಡಿದೆ.  ಒಂದು  ” mygov.ಇನ್”   ಇದೆ. ಇದರಲ್ಲೂ ನೀವು ನಿಮ್ಮ  ಮಾತುಗಳನ್ನು ತಲುಪಿಸಬಹುದು, ಅದು ಸೀದಾ ನನ್ನವರೆವಿಗೂ   ತಲುಪುತ್ತದೆ.  ಅದೇ ರೀತಿ ನೀವು ಯಾವಾಗಬೇಕಾದರೂ   Narendra Modi App ನ್ನು ಡೌನ್ಲೋಡ್  ಮಾಡಿ ಕೊಳ್ಳಬಹುದು, ಆಗ ನಾನು ಯಾವಾಗಲೂ ನಿಮ್ಮ ಜೇಬಲ್ಲೇ ಇರುತ್ತೇನೆ.  ನಿಮ್ಮ ಪ್ರಧಾನಮಂತ್ರಿ ನಿಮ್ಮ ಜೇಬಲ್ಲಿರುವಾಗ, ಇದಕ್ಕಿಂತ ಇನ್ನೇನು ಬೇಕು ನಿಮಗೆ?  ನೀವು ನಿಮ್ಮ ಮೊಬೈಲ್ನಲ್ಲಿ Narendra Modi App   ಡೌನ್ಲೋಡ್  ಮಾಡುವಿರಿ, ನಿಮ್ಮ ಪ್ರತಿಯೊಂದು ಮಾತೂ ನನ್ನವರೆಗೆ ತಲುಪಬಲ್ಲದು, ನನ್ನ ಮಾತು ನಿಮ್ಮವರೆಗೂ ತಲುಪಬಲ್ಲದು, ನಾವು ಯಾವಾಗಲೂ ಪರಸ್ಪರ ಸಂಪರ್ಕದಲ್ಲಿರಬಹುದು. ನನಗೆ ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ದೊರೆಯಿತು.
 
ಈ ದಿನಗಳಲ್ಲಿ ಭಾರತವು ಅತ್ಯಂತ ಕ್ಷಿಪ್ರಗತಿಯಿಂದ ಮುಂದುವರೆಯುತ್ತಿದೆ ಎಂಬುದು ನಿಮಗೆ ಗೊತ್ತಿದೆ, ಸಂಪೂರ್ಣ ವಿಶ್ವದ ಕೆಲಸ  ಭಾರತದ ಆರ್ಥಿಕ ವಿಕಾಸದ ಮಾರ್ಗದಲ್ಲಿದೆ   ಹಾಗೂ ಭಾರತವು ಇಂದು ವಿಶ್ವದಲ್ಲಿ ತನ್ನ ಸ್ಥಾನವನ್ನು ಮತ್ತೊಮ್ಮೆ ಪುನ: ಪ್ರತಿಸ್ಥಾಪಿಸಿಕೊಂಡಿದೆ. ನೀವೂ ಸಹ, ನೀವು ಭಾರತವನ್ನು ಕುರಿತು ಜನರ ಪ್ರತಿಕ್ರಿಯೆ  ಹೇಗೆ ದೊರಕುತ್ತಿದೆ. ? ಯಾರಿಗಾದರೂ ಹಿಂದೂಸ್ಥಾನದಿಂದ ಎಂದು ಹೇಳಿದಾಗ ಏನಾಗುತ್ತೆ ?  ಸಂತೋಷವಾಗುತ್ತೋ ಇಲ್ಲವೋ? ಕೈ ಹಿಡಿದವನು ಕೈ ಬಿಡುವುದಿಲ್ಲ ಅಲ್ಲವೇ ?  ಕೇಳುತ್ತಾನೆ. ಓ ಒಳ್ಳೆಯದು ಇಂಡಿಯಾದಿಂದಲಾ? ಮೊದಲು ಹೇಗಿತ್ತು, ಸರಿ-ಸರಿ ಇಂಡಿಯಾದಿಂದ ಲಾ? ಹಿಂದೂಸ್ಥಾನಿಗಳನ್ನು ಈಗಲೂ ಇಡೀ ಪ್ರಪಂಚವೇ ಗೌರವದಿಂದ ನೋಡುತ್ತಲಿದೆ. ಹಾಗೂ ಭಾರತದ ಯುವ ಶಕ್ತಿಗೆ ಒಂದು   ಪರಿಚಯವನ್ನು ನೀಡಿದೆ. ಒಂದು ತಾಕತ್ತನ್ನು ಉಂಟುಮಾಡಿದೆ.
 
ನಿಮ್ಮೆಲ್ಲರಿಗೂ ನನ್ನ ಅನೇಕಾನೇಕ ಶುಭ ಹಾರೈಕೆಗಳು  . ನಿಮ್ಮ ಮುಖಾಂತರ  ಭಾರತದ ಹೆಸರು ಚಿರವಾಗಲಿದೆಯೆಂಬ ನಂಬಿಕೆ ನನಗಿದೆ.  ಬಹಳ- ಬಹಳ ಧನ್ಯವಾದಗಳು. 
 
***