ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪೊಲೀಸ್ ತರಬೇತಿ ಮತ್ತು ಅಭಿವೃದ್ಧಿ ಕುರಿತ ತಾಂತ್ರಿಕ ಸಹಕಾರಕ್ಕಾಗಿ ಭಾರತ ಮತ್ತು ಆಫ್ಘಾನಿಸ್ತಾನಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಆಫ್ಘಾನಿಸ್ತಾನ ರಾಷ್ಟ್ರೀಯ ಪೊಲೀಸ್ ಸಾಮರ್ಥ್ಯ ನಿರ್ಮಾಣ ಮತ್ತು ವಲಯದಲ್ಲಿ ಭದ್ರತಾ ಉಪಕರಣಗಳ ಸುಧಾರಣೆಗೆ ನೆರವಾಗಲಿದೆ.
ಇದು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ ದಿನದಿಂದ ಐದು ವರ್ಷಗಳವರೆಗೆ ಅನುಮೋದನೆಗೊಂಡಿದೆ ಮತ್ತು ಯಾವುದೇ ಮುಂದಿನ ಬದಲಾವಣೆ ಮತ್ತು ಅಥವಾ ಪರಿಷ್ಕರಣೆಗೆ ಅವಕಾಶವಿಲ್ಲ ಎಂಬ ಷರತ್ತಿನೊಂದಿಗೆ ಅದನ್ನು ಮತ್ತೂ ಐದು ವರ್ಷಗಳ ಕಾಲ ಮುಂದುವರಿಸಬಹುದಾಗಿದೆ.
ಹಿನ್ನೆಲೆ:
ಭಾರತ ಮತ್ತು ಆಫ್ಘಾನಿಸ್ತಾನಗಳು ಸ್ನೇಹ ಸಂಬಂಧವನ್ನು ಹೊಂದಿವೆ ಮತ್ತು ಆಫ್ಘಾನಿಸ್ತಾನ ರಾಷ್ಟ್ರೀಯ ಪೊಲೀಸ್ ನ ಪೊಲೀಸ್ ಸಿಬ್ಬಂದಿ ಭಾರತದ ವಿವಿಧ ತರಬೇತಿ ಸಂಸ್ಥೆಗಳಿಗೆ ನಿಯಮಿತವಾಗಿ ತರಬೇತಿ ಉದ್ದೇಶಕ್ಕಾಗಿ ಆಗಮಿಸುತ್ತಿದ್ದಾರೆ.
ಭಾರತ ಮತ್ತು ಆಫ್ಘಾನಿಸ್ತಾನಗಳು ಈಗಾಗಲೇ 2011ರ ಅಕ್ಟೋಬರ್ “ವ್ಯೂಹಾತ್ಮಕ ಪಾಲುದಾರಿಕೆಯ ಒಪ್ಪಂದ”ಕ್ಕೆ ಸಹಿ ಹಾಕಿವೆ. ಆಫ್ಘಾನಿಸ್ತಾನದ ಒಳಾಡಳಿತ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯು.ಎನ್.ಡಿ.ಪಿ.), ಆಫ್ಘಾನಿಸ್ತಾನ ಮತ್ತು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಶಾಖೆಯ ಅಧಿಕಾರಿಗಳು (ಬಿಪಿಆರ್ ಅಂಡ್ ಡಿ), ಎಂ.ಎಚ್.ಎ., ನವದೆಹಲಿಯ ನಡುವೆ 2016ರ ಅಕ್ಟೋಬರ್ ನಲ್ಲಿ ಸಭೆ ನಡೆಸಲಾಗಿದೆ ಮತ್ತು ಆಫ್ಘನ್ ಪ್ರತಿನಿಧಿಗಳು, ಪೊಲೀಸ್ ತರಬೇತಿ, ಪೊಲೀಸ್ ಅಭಿವೃದ್ಧಿ, ಕಾನೂನು ಜಾರಿ, ಆಫ್ಘಾನಿಸ್ತಾನದಲ್ಲಿ ಕಾನೂನು ಆಡಳಿತ ಮತ್ತು ದೀರ್ಘಕಾಲೀನ ಸುಸ್ಥಿರ ಸಹಕಾರ ನಿರ್ಮಾಣದಲ್ಲಿ ಭಾರತದಿಂದ ನೆರವಿನ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಹಕಾರವನ್ನು ಮತ್ತಷ್ಟು ಮುಂದುವರಿಸಲು ಈ ತಿಳಿವಳಿಕೆ ಒಪ್ಪಂದವು ರಾಜತಾಂತ್ರಿಕ ಮಾರ್ಗಗಳ ಮೂಲಕ ಜಂಟಿಯಾಗಿ ಒಪ್ಪಿಗೆ ಸೂಚಿಸಿದೆ.
******