Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಕಾರ್ಮಿಕರಿಗಾಗಿ 8ನೇ ಸುತ್ತಿನ ವೇತನ ಹೆಚ್ಚಳ ಮಾತುಕತೆಗಾಗಿ ವೇತನ ನೀತಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್.ಇ.ಗಳು) ಕಾರ್ಮಿಕರ ವೇತನ ಹೆಚ್ಚಳದ 8ನೇ ಸುತ್ತಿನ ಮಾತುಕತೆಗಾಗಿ ವೇತನ ನೀತಿಗೆ ತನ್ನ ಅನುಮೋದನೆ ನೀಡಿದೆ.

ಮುಖ್ಯಾಂಶಗಳು:

  1. ಸಾಮಾನ್ಯವಾಗಿ 31.12.2016ಕ್ಕೆ ವೇತನ ಪರಿಷ್ಕರಣೆಯಾಗಿ ಐದು ವರ್ಷ ಅಥವಾ 10 ವರ್ಷಗಳ ಅವಧಿ ಮುಗಿದಿರುವ ಅಂಥ ಸಿಪಿಎಸ್.ಇ.ಗಳ ಆರ್ಥಿಕ ಸುಸ್ಥಿರತೆ ಮತ್ತು ಅದರ ಹೊರೆ ಭರಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು   ಸಿಪಿಎಸ್.ಇ.ಗಳ ಆಡಳಿತ ಮಂಡಳಿಗಳಿಗೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡಲು ಮುಕ್ತವಾಗಿ ಮಾತುಕತೆ ನಡೆಸಬಹುದಾಗಿದೆ.
  2. ಯಾವುದೇ ವೇತನ ಹೆಚ್ಚಳಕ್ಕೆ ಸರ್ಕಾರದಿಂದ ಆಯವ್ಯಯದ ಬೆಂಬಲವನ್ನು ನೀಡಲಾಗುವುದಿಲ್ಲ. ಸಂಪೂರ್ಣವಾಗಿ ಹಣಕಾಸಿನ ಹೊರೆಯನ್ನು ಆಯಾ ಸಿಪಿಎಸ್.ಇ.ಗಳೇ ತಮ್ಮ ಆಂತರಿಕ ಸಂಪನ್ಮೂಲದಿಂದ ಭರಿಸಬೇಕು. 

      iii.  ಪುನರ್ ವಿನ್ಯಾಸ/ಪುನಶ್ಚೇತನ ಯೋಜನೆಗೆ ಸರ್ಕಾರ ಅನುಮೋದನೆ ನೀಡಿರುವ ಸಿಪಿಎಸ್.ಇ.ಗಳಲ್ಲಿ,   ಅನುಮೋದಿತ    ಪುನರ್ ವಿನ್ಯಾಸ/ಪುನಶ್ಚೇತನ ಯೋಜನೆಯ ನಿಯಮಾನುಸಾರವಾಗಿ ಮಾತ್ರವೇ ವೇತನ ಪರಿಷ್ಕರಣೆ ಮಾಡಬೇಕು.

  1.  ಆಯಾ ಸಿಪಿಎಸ್.ಇ.ಗಳ ವೇತನ ಶ್ರೇಣಿಯು ಹಾಲಿ ಇರುವ ನಿರ್ವಹಣಾ/ಅಧಿಕಾರಿಗಳ ಮತ್ತು ಪತ್ರಾಂಕಿತೇತರ ಸೂಪರ್ ವೈಸರ್ ಗಳ ವೇತನಕ್ಕಿಂತ ಹೆಚ್ಚಾಗುವುದಿಲ್ಲ ಎಂಬುದನ್ನು ಸಂಬಂಧಿತ ಸಿಪಿಎಸ್.ಇ.ಗಳ ಆಡಳಿತ ಮಂಡಳಿಗಳು ಖಾತ್ರಿಪಡಿಸಬೇಕು.
  2.    ಐದು ವರ್ಷಗಳ ಅವಧಿಯನ್ನು ಅನುಸರಿಸುವ ಸಿಪಿಎಸ್.ಇಗಳ ಆಡಳಿತ ಮಂಡಳಿಗಳು ವೇತನ ಶ್ರೇಣಿಯ ಎರಡು ಸತತ ವೇತನ ಪರಿಷ್ಕರಣೆಗಳಲ್ಲಿ ಹತ್ತು ವರ್ಷದ ಅವಧಿಯನ್ನು ಅನುಸರಿಸುವ ಸಿಪಿಎಸ್.ಇ.ಗಳಲ್ಲಿ ಹಾಲಿ ಇರುವ ನಿರ್ವಹಣಾ/ಅಧಿಕಾರಿಗಳ ಮತ್ತು ಪತ್ರಾಂಕಿತೇತರ ಸೂಪರ್ ವೈಸರ್ ಗಳ ವೇತನಕ್ಕಿಂತ ಹೆಚ್ಚಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕು.
  3.   ನಿರ್ವಹಣಾಧಿಕಾರಿಗಳು/ ಪತ್ರಾಂಕಿತೇತರ ಸೂಪರ್ ವೈಸರ್ ಗಳ ವೇತನ ಶ್ರೇಣಿಗೆ ಸಂಬಂಧಿಸಿದಂತೆ ತಮ್ಮ ಕಾರ್ಮಿಕರ ಸಂಘರ್ಷವನ್ನು ತಪ್ಪಿಸಲು, ಸಿಪಿಎಸ್.ಇ.ಗಳು ಗ್ರೇಡ್ ಗಳ ತುಟ್ಟಿಭತ್ಯೆ ತಟಸ್ಥಗೊಳಿಸುವಿಕೆ ಮತ್ತು / ಅಥವಾ ವೇತನ ಸಮಾಲೋಚನೆಯ ಸಮಯದಲ್ಲಿ ಶ್ರೇಣೀಕೃತ ಫಿಟ್ಮೆಂಟ್ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಪರಿಗಣಿಸಬೇಕು.

  vii.  ಮಾತುಕತೆಗಳ ಬಳಿಕ ಹೆಚ್ಚಿಸುವ ವೇತನವು ತಮ್ಮ ಸರಕು ಮತ್ತು ಸೇವೆಗಳ ಪ್ರಮಾಣೀಕೃತ ದರಗಳ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ ಎಂಬುದನ್ನು ಸಿಪಿಎಸ್.ಇ.ಗಳು ಖಾತ್ರಿಪಡಿಸಬೇಕು.        

viii.   ವೇತನ ಪರಿಷ್ಕರಣೆಯು ಪ್ರತಿ ದೈಹಿಕ ಘಟಕದ ಔಟ್ ಪುಟ್ ಗೆ ಕಾರ್ಮಿಕರ ವೆಚ್ಚ ಹೆಚ್ಚಳವಾಗಬಾರದು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ಈಗಾಗಲೇ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಪಿಎಸ್.ಇಗಳ ಅಪರೂಪದ ಪ್ರಕರಣಗಳಲ್ಲಿ,ಸಚಿವಾಲಯ / ಇಲಾಖೆ ಕೈಗಾರಿಕಾ ನಿಯಮಗಳನ್ನು ಪರಿಗಣಿಸಿ ಡಿಪಿಇಯೊಂದಿಗೆ ಸಮಾಲೋಚಿಸಬಹುದು.

  1.    ವೇತನ ಇತ್ಯರ್ಥದ ಸಿಂಧುತ್ವವು ಐದು ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಕನಿಷ್ಠ 5 ವರ್ಷಗಳ ಅವಧಿಯದಾಗಿರುತ್ತದೆ, ಮತ್ತು ಗರಿಷ್ಠ 10 ವರ್ಷ ಅವಧಿ ಆಯ್ಕೆ ಮಾಡಿಕೊಳ್ಳುವವರಿಗೆ ಗರಿಷ್ಠ 10 ವರ್ಷ ಆಗಿರುತ್ತದೆ, ಇದು01.01.2017ರಿಂದ ಅನ್ವಯವಾಗಲಿದೆ.
  2. ಸಿಪಿಎಸ್.ಇ.ಗಳು ಮಾತುಕತೆಯ ಬಳಿಕದ ವೇತನವನ್ನು ತಮ್ಮ ಆಡಳಿತಾತ್ಮಕ ಸಚಿವಾಲಯ/ಇಲಾಖೆ ಅನುಮೋದಿತ ಮಾನದಂಡಗಳನ್ನು ಖಚಿತಪಡಿಸಿದ ತರುವಾಯ  ಜಾರಿ ಮಾಡಬೇಕು.        

 ಹಿನ್ನೆಲೆ:

ದೇಶದಲ್ಲಿ 320 ಸಿಪಿಎಸ್.ಇಗಳಿದ್ದು,  ಇದರಲ್ಲಿ 12.34 ಲಕ್ಷ ಕಾರ್ಮಿಕರಿದ್ದಾರೆ. ಈ ಪೈಕಿ ಸುಮಾರು 2.99 ಲಕ್ಷ ನೌಕರರು ಬೋರ್ಡ್ ಮಟ್ಟದಲ್ಲಿ ಮತ್ತು ಬೋರ್ಡ್ ಮಟ್ಟದ ಕೆಳಗಿನ ಕಾರ್ಯ ನಿರ್ವಹಣಾ ಮತ್ತು ಪತ್ರಾಂಕಿತೇತರ ಸೂಪರ್ ವೈಸರ್ ಗಳಾಗಿದ್ದಾರೆ. ಉಳಿದ 9.35 ಲಕ್ಷ ಉದ್ಯೋಗಿಗಳು ಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದಾರೆ. ಸಂಘಟಿತ ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳು ಮತ್ತು ಸಿಪಿಎಸ್ಇಗಳ ಆಡಳಿತ ಮಂಡಳಿಗಳು ಸಾರ್ವಜನಿಕ ಉದ್ದಿಮೆ ಇಲಾಖೆ (ಡಿಪಿಇ) ವೇತನ ಪರಿಷ್ಕರಣೆಗೆ ನೀಡುವ ಮಾರ್ಗಸೂಚಿಯಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತವೆ.

***