ಪಿಎಂಇಂಡಿಯಾ

ಗೆಳೆಯರೇ,
ಚಿಬೈ ವೆಕ್ ಉಲೆ,
ಐನ್ ದಮ್ ಎಮ್
(Chibai Vek Ule
Iin Dam Em)
ಪ್ರಧಾನಿಯಾದ ಬಳಿಕ ಮಿಜೋರಾಂಗೆ ಮೊದಲ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದೆ. ಎಂಟು ಸೋದರಿಯರ ನಾಡು ಎಂದು ಕರೆಯಲ್ಪಡುವ ಈಶಾನ್ಯ ರಾಜ್ಯಗಳಲ್ಲಿ ಭೇಟಿ ನೀಡಲು ಸಾಧ್ಯವಾಗದ ಏಕೈಕ ರಾಜ್ಯ ಇದಾಗಿತ್ತು. ಆದ್ದರಿಂದ, ಮೊದಲಿಗೆ ನಾನು ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ. ಆದರೆ, ಪ್ರಧಾನಿ ಆಗುವ ಮುನ್ನ ನಾನು ಮಿಜೋರಾಂಗೆ ಭೇಟಿ ನೀಡಿದ್ದೇನೆ. ಇಲ್ಲಿನ ಸ್ನಿಗ್ಧ ಸೌಂದರ್ಯದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಇಲ್ಲಿನ ಸ್ನೇಹಮಯಿ ಜನರ ಜೊತೆಗೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಹೀಗಾಗಿ, ಈಗ ನಿಮ್ಮಲ್ಲಿಗೆ ಬಂದಿರುವ ಸಮಯದಲ್ಲಿ ಹಳೆಯ ನೆನಪುಗಳು ಮತ್ತೊಮ್ಮೆ ಮರುಕಳಿಸಿರುವುದು ಸ್ವಾಭಾವಿಕ.
ಈ ಸುಂದರ ರಾಜ್ಯಕ್ಕೆ ನನ್ನ ಇಂದಿನ ಭೇಟಿಯು ಮಿಜೋರಾಂನ ಸ್ನೇಹಮಯಿ ಜನರೊಟ್ಟಿಗೆ ಕಳೆದ ಹಲವು ಸುಂದರ ಕ್ಷಣಗಳನ್ನು ಮತ್ತೆ ನೆನಪು ಮಾಡಿದೆ. ನಿಮಗೆಲ್ಲರಿಗೆ, ಮಿಜೋರಾಂ ರಾಜ್ಯದ ಎಲ್ಲ ಜನರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯ ಕೋರುವ ಮೂಲಕ ಮಾತು ಆರಂಭಿಸುತ್ತೇನೆ.
ಹೊಸ ವರ್ಷವು ನಿಮಗೆಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.
ಕೆಲ ಸಮಯದ ಹಿಂದೆ ಐಜಾವ್ಲ್ಗೆ ಬಂದ ತಕ್ಷಣ ಮಿಜೋರಾಂನ ಸೌಂದರ್ಯವನ್ನು ಕಂಡು ನಾನು ವಿಸ್ಮಿತನಾದೆ: “ಬೆಟ್ಟದ ಜನರ ನಾಡು’. ಶಾಂತಿ ಮತ್ತು ನಿಶ್ಶಬ್ದದ ನಾಡು. ಬೆಚ್ಚನೆಯ ಮನಸ್ಸಿನ ಉದಾರಿ ಜನಗಳು. ದೇಶದ ಅತ್ಯಂತ ಅಧಿಕ ಸಾಕ್ಷರತೆ ಇರುವ ರಾಜ್ಯ.
ವಾಜಪೇಯಿ ಅವರ ಅವಧಿಯಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಗಂಭೀರ ಪ್ರಯತ್ನಗಳು ನಡೆದವು. ಪ್ರಾಂತ್ಯಗಳ ನಡುವಿನ ಅಸಮಾನತೆಯನ್ನು ತೊಡೆಯುವುದು ಆರ್ಥಿಕ ಅಭಿವೃದ್ಧಿಯ ಪ್ರಮುಖ ಉದ್ದೇಶ ಎಂದು ಅಟಲ್ಜೀ ಹೇಳುತ್ತಿದ್ದರು. ಮತ್ತು, ಈ ದೆಸೆಯಲ್ಲಿ ಹಲವು ಹೆಜ್ಜೆಗಳನ್ನು ಅವರು ಇರಿಸಿದರು.
ನಾವು 2014ರಲ್ಲಿ ಸರ್ಕಾರವನ್ನು ರಚಿಸಿದಾಗ, ಸರ್ಕಾರದ ಕಾರ್ಯನೀತಿಗಳು ಹಾಗೂ ನಿರ್ಧಾರಗಳಲ್ಲಿ ಈ ಪ್ರಾಂತ್ಯದ ಹಿತಾಸಕ್ತಿ ಕಡೆಗೆ ಮತ್ತೊಮ್ಮೆ ಗಮನ ಹರಿಸಿದೆವು. ಪ್ರತಿ ಹದಿನೈದು ದಿನಕ್ಕೊಮ್ಮೆ ಕನಿಷ್ಠ ಒಬ್ಬರು ಸಂಪುಟ ಸಚಿವರು ಈಶಾನ್ಯ ರಾಜ್ಯ ಗಳಿಗೆ ಭೇಟಿ ನೀಡಬೇಕೆಂಬ ನಿಯಮವನ್ನು ನಾನು ರೂಪಿಸಿದೆ. ಸಚಿವರು ಬೆಳಗ್ಗೆ ಬಂದರು, ಸಮಾರಂಭವೊಂದರಲ್ಲಿ ಪಾಲ್ಗೊಂಡರು ಹಾಗೂ ಸಂಜೆ ತೆರಳಿದರು ಎನ್ನುವಂತೆ ಆ ಭೇಟಿ ಇರಬಾರದು ಎಂದು ಹೇಳಿದ್ದೆ. ಸಂಪುಟದ ನನ್ನ ಸಹೋದ್ಯೋಗಿ ಗಳು ಇಲ್ಲಿನ ಜನರೊಟ್ಟಿಗೆ ಬೆರೆತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಬಳಿಕ ತಮ್ಮ ಮಂತ್ರಾಲಯದ ಕಾರ್ಯನೀತಿಯನ್ನು ರೂಪಿಸಬೇಕು ಎನ್ನುವುದು ನನ್ನ ಆಶಯವಾಗಿತ್ತು.
ಸ್ನೇಹಿತರೇ,
ಕಳೆದ ಮೂರು ವರ್ಷದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳು ಈಶಾನ್ಯ ರಾಜ್ಯಗಳಿಗೆ ನೂರೈವತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ ಎಂದು ಕೇಳಿದ್ದೇನೆ. ಇಲ್ಲಿನ ಜನರು ದಿಲ್ಲಿಗೆ ಬರಬಾರದು, ನಿಮ್ಮ ಸಮಸ್ಯೆಗಳ ಬಗೆಗೆ ಸಂದೇಶಗಳನ್ನು ದಿಲ್ಲಿಗೆ ಕಳಿಸಬಾರದು. ಬದಲಿಗೆ, ದಿಲ್ಲಿಯೇ ನಿಮ್ಮ ಬಳಿಗೆ ಬರಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ.
ಈ ಕಾರ್ಯನೀತಿಯನ್ನು ನಾವು “ನಿಮ್ಮ ಮನೆ ಹೊಸ್ತಿಲಿಗೆ ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಮಂತ್ರಾಲಯ(ಮಿನಿಸ್ಟ್ರಿ ಆಫ್ ಡೋನರ್ ಎಟ್ ಯುವರ್ ಡೋರ್ಸ್ಟೆಪ್)’ ಎಂದು ಕರೆಯುತ್ತೇವೆ. ಸಚಿವರು ಮಾತ್ರವಲ್ಲದೆ, ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಮಂತ್ರಾ ಲಯದ ಕಾರ್ಯದರ್ಶಿ ಕೂಡ ಕೆಲವು ಇಲ್ಲವೇ ಈಶಾನ್ಯ ಪ್ರಾಂತ್ಯದ ಬೇರೆ ರಾಜ್ಯಗಳಿಗೆ ಪ್ರತಿ ತಿಂಗಳು ಭೇಟಿ ನೀಡುತ್ತಾರೆ ಮತ್ತು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡುತ್ತಾರೆ. ಕೇಂದ್ರ ಸರ್ಕಾರದ ಈ ಎಲ್ಲ ಪ್ರಯತ್ನದಿಂದಾಗಿ, ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ರೂಪಿಸಿದ್ದ ಯೋಜನೆಗಳ ಜಾರಿ ವೇಗ ಪಡೆದುಕೊಂಡಿದೆ ಮತ್ತು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳೂ ವೇಗವಾಗಿ ಮುನ್ನಡೆಯುತ್ತಿವೆ. ಹಲವು ವರ್ಷಗಳಿಂದ ನೆಲ ಕಚ್ಚಿಕೂತಿದ್ದ ಯೋಜನೆಗಳು ಈಗ ಪ್ರಗತಿ ಸಾಧಿಸುತ್ತಿವೆ.
ಸ್ವಸಹಾಯ ಗುಂಪುಗಳು ಏರ್ಪಡಿಸಿದ್ದ, ಎಲ್ಲ ಎಂಟು ಈಶಾನ್ಯ ರಾಜ್ಯಗಳ ಉತ್ಪನ್ನಗಳ ಪ್ರದರ್ಶನವನ್ನು ನಾನು ಇದೀಗ ವೀಕ್ಷಿಸಿದೆ. ಅವರ ಪ್ರತಿಭೆ ಹಾಗೂ ಸಾಮಥ್ರ್ಯಕ್ಕಾಗಿ ನಾನು ಸ್ವಸಹಾಯ ಗುಂಪುಗಳ ಸದಸ್ಯರನ್ನು ಅಭಿನಂದಿಸುತ್ತೇನೆ. ಇದೇ ಸಾಮಥ್ರ್ಯವನ್ನು ಸಾಣೆ ಹಿಡಿದು, ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ದೀನ್ ದಯಾಳ್ ಅಂತ್ಯೋದಯ ಯೋಜನೆಯ ಪ್ರಮುಖ ಉದ್ದೇಶ ಇದೇ ಆಗಿದೆ.
ಈಶಾನ್ಯ ಅಭಿವೃದ್ಧಿ ಹಣಕಾಸು ಸಂಸ್ಥೆಯು ಈ ಪ್ರಾಂತ್ಯದಲ್ಲಿರುವ ಸ್ವಸಹಾಯ ಗುಂಪುಗಳಿಗೆ ನೀಡುತ್ತಿರುವ ಸಾಲ ಸೌಲಭ್ಯದಿಂದ ಈ ಗುಂಪುಗಳು ಪ್ರಯೋಜನ ಪಡೆದುಕೊಂಡಿವೆ.
ಕೇಂದ್ರ ಸರ್ಕಾರವು ಸಾಲದ ಬಡ್ಡಿಯಲ್ಲಿ ಸಬ್ಸಿಡಿ ನೀಡಿದೆ. ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಮಂತ್ರಾಲಯವು ಈಶಾನ್ಯ ಕರಕುಶಲ ಮತ್ತು ಕೈ ಮಗ್ಗ ಅಭಿವೃದ್ಧಿ ಕಾರ್ಪೊರೇಷನ್ನ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ ಎಂದು ಕೇಳಿದ್ದೇನೆ: ಮತ್ತು ಈಶಾನ್ಯ ಪ್ರಾಂತ್ಯ ಕೃಷಿ ಮಾರುಕಟ್ಟೆ ಕಾರ್ಪೊರೇಷನ್ಗೆ ಕೂಡ ನೆರವು ನೀಡಲಾಗುತ್ತಿದೆ. ಈ ಸಾರ್ವಜನಿಕ ಸೇವಾ ಕ್ಷೇತ್ರದ ಸಂಸ್ಥೆಗಳು ಕಲಾವಿದರು, ನೇಕಾರರು ಹಾಗೂ ರೈತರಿಗೆ ತರಬೇತಿ ನೀಡುವುದಲ್ಲದೆ, ಮಾರುಕಟ್ಟೆ ಸೌಲಭ್ಯ ಮತ್ತು ಆಹಾರ ಸಂಸ್ಕರಣೆಗೆ ನೆರವಾಗುತ್ತಿವೆ. ಸಿಎಸ್ಐಆರ್, ಐಸಿಎಆರ್ ಮತ್ತು ಐಐಟಿ ಮತ್ತಿತರ ವಿದ್ಯಾಲಯಗಳ ತಂತ್ರಜ್ಞಾನ ಹಾಗೂ ಉತ್ಪನ್ನಗಳನ್ನು ಈಶಾನ್ಯ ಪ್ರಾಂತ್ಯದ ಸ್ಥಳೀಯ ಉತ್ಪನ್ನಗಳ ಮೌಲ್ಯವರ್ಧನೆಗೆ ಬಳಸುವ ಕುರಿತು ಅಧ್ಯಯನ ನಡೆಯಬೇಕಿದೆ.
ಸ್ನೇಹಿತರೇ, ಮಿಜೋರಾಂನ ಚರಿತ್ರೆಯಲ್ಲಿ ಗಮನಾರ್ಹ ಮೈಲುಗಲ್ಲನ್ನು ಸಂಭ್ರಮಿಸಲು ನಾವೆಲ್ಲ ಇಲ್ಲಿ ಸೇರಿದ್ದೇವೆ: 60 ಮೆಗಾವ್ಯಾಟ್ ಸಾಮಥ್ರ್ಯದ ತುಯಿರಲ್ ಜಲವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸಿ, ದೇಶಕ್ಕೆ ಸಮರ್ಪಿಸಲಾಗುತ್ತಿದೆ. ಈಶಾನ್ಯ ಪ್ರಾಂತ್ಯದ ಪ್ರಮುಖ ಜಲವಿದ್ಯುತ್ ಯೋಜನೆಯಾದ ಕೊಪಿಲಿ, ಎರಡನೇ ಹಂತ ಆರಂಭಗೊಂಡ 13 ವರ್ಷಗಳ ಬಳಿಕ ಇದು ಚಾಲನೆಗೊಳ್ಳುತ್ತಿದೆ. ತುಯಿರಲ್ ಜಲವಿದ್ಯುತ್ ಯೋಜನೆಯು ಮಿಜೋರಾಂನಲ್ಲಿ ಕೇಂದ್ರ ಯಶಸ್ವಿಯಾಗಿ ಜಾರಿಗೊಳಿಸಿದ ಮೊದಲ ಪ್ರಮುಖ ಯೋಜನೆಯಾಗಿದೆ.
ಇದು ರಾಜ್ಯದ ಮೊದಲ ಭಾರಿ ಜಲ ವಿದ್ಯುತ್ ಯೋಜನೆ. ಪ್ರತಿ ವರ್ಷ 251 ದಶ ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಿದ್ದು, ರಾಜ್ಯದ ಸಮಾಜಿಕೋಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲಿದೆ. ಈ ಯೋಜನೆಯ ಅನುಷ್ಠಾನದಿಂದ ಈಶಾನ್ಯದಲ್ಲಿ ಸಿಕ್ಕಿಂ ಹಾಗೂ ತ್ರಿಪುರದ ಬಳಿಕ ಅಗತ್ಯವಿರುವಷ್ಟು ವಿದ್ಯುತ್ ಇರುವ ಮೂರನೇ ರಾಜ್ಯ ಮಿಜೋರಾಂ ಆಗಲಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ 1998ರಲ್ಲಿ ಯೋಜನೆಯನ್ನು ಘೋಷಿಸಿ, ಅನು ಮತಿ ನೀಡಿದ್ದರು. ಈ ಯೋಜನೆಯ ಸಮರ್ಪಣೆಯು ಈಶಾನ್ಯ ಪ್ರಾಂತ್ಯದಲ್ಲಿನ ಅಪೂರ್ಣ ಯೋಜನೆಗಳನ್ನು ಸಂಪೂರ್ಣಗೊಳಿಸುವ ಹಾಗೂ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ತೆರೆಯುವ ನಮ್ಮ ಬದ್ಧತೆಯ ಪ್ರತಿಫಲನವಾಗಿದೆ.
ವಿದ್ಯುತ್ ಉತ್ಪಾದನೆ ಯಲ್ಲದೆ, ಜಲಾಶಯದ ನೀರು ನೌಕಾಯಾನದ ಹೊಸ ಮಾರ್ಗಗಳನ್ನು ತೆರೆಯಲಿದೆ. ದೂರದ ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸಲಿದೆ. 45 ಚದರ ಕಿಮೀ ವಿಸ್ತೀರ್ಣಧಲ್ಲಿ ವ್ಯಾಪಿಸಿರುವ ಈ ಭಾರಿ ಜಲಾಶಯವನ್ನು ಮೀನು ಸಾಕಣೆಯ ಅಭಿವೃದ್ಧಿಗೂ ಬಳಸಬಹುದಾಗಿದೆ. ಯೋಜನೆಯು ಪರಿಸರಸ್ನೇಹಿ ಪ್ರವಾಸಕ್ಕೆ ಉತ್ತೇಜನ ನೀಡುವುದಲ್ಲದೆ, ಕುಡಿಯುವ ನೀರಿನ ಖಾತ್ರಿ ಮೂಲವಾಗಲಿದೆ. ರಾಜ್ಯವು 2,100 ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ ಎಂದು ಕೇಳಿದ್ದೇನೆ. ಇದರಲ್ಲಿ ಒಂದಂಶವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ.
ಮಿಜೋರಾಂ ವಿದ್ಯುತ್ನ್ನು ರಫ್ತು ಮಾಡುವ ರಾಜ್ಯವಾಗದೆ ಇರಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ. ಈಶಾನ್ಯ ಪ್ರಾಂತ್ಯಗಳ ಇಂಧನ ಖಾತ್ರಿ ಮಾತ್ರವಷ್ಟೇ ನಮ್ಮ ಗುರಿಯಲ್ಲ. ಉನ್ನತ ತಂತ್ರಜ್ಞಾನದ ವಿತರಣೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಹೆಚ್ಚುವರಿ ವಿದ್ಯುತ್ನ್ನು ಕೊರತೆ ಇರುವ ದೇಶದ ಇತರ ರಾಜ್ಯಗಳಿಗೆ ರವಾನಿಸುವಂತೆ ಆಗಬೇಕಿದೆ. ನಮ್ಮ ಸರ್ಕಾರವು ಈಶಾನ್ಯ ರಾಜ್ಯಗಳಲ್ಲಿ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಸಮಗ್ರವಾಗಿ ಉತ್ತಮಪಡಿಸಲು ಅಂದಾಜು 10,000 ಕೋಟಿ ರೂ. ಹೂಡಿಕೆ ಮಾಡಲಿದೆ.
ಸ್ನೇಹಿತರೇ,
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕವೂ ವಿದ್ಯುತ್ ಸಂಪರ್ಕವಿಲ್ಲದ ನಾಲ್ಕು ಕೋಟಿ ಮನೆಗಳಿವೆ. 18ನೇ ಶತಮಾನದಲ್ಲಿ ಜನರು ಹೇಗೆ ಜೀವಿಸುತ್ತಿದ್ದರು ಎಂಬ ಊಹೆ ನಿಮಗೆ ಇರಬಹುದು. ಮಿಜೋರಾಂನಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜೀವನವನ್ನು ಸಾಗಿಸುತ್ತಿರುವ ಇಂಥ ಸಾವಿರಾರು ಮನೆಗಳಿವೆ. ಇಂಥ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಸರ್ಕಾರವು ಇತ್ತೀಚೆಗೆ ಪ್ರಧಾನಮಂತ್ರಿ ಸಹಜ್ ಬಿಜ್ಲಿ-ಹರ್ ಘರ್ ಯೋಜನಾ ಅಥವಾ ಸೌಭಾಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಸಾಧ್ಯವಾದಷ್ಟು ಬೇಗ ದೇಶದ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶ.
ಈ ಯೋಜನೆಯಡಿ 16,000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಯಾವುದೇ ಹಣ ಪಡೆಯುವುದಿಲ್ಲ. ಬಡಜನರ ಬದುಕಿನಲ್ಲಿ ಬೆಳಕು ಕಾಣಬೇಕು, ಅವರ ಬದುಕು ಉಜ್ವಲಗೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.
ಗೆಳೆಯರೇ,
ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಈಶಾನ್ಯ ಪ್ರಾಂತ್ಯದಲ್ಲಿ ಉದ್ಯಮಿಗಳ ಸಂಖ್ಯೆ ಹೆಚ್ಚಳ ಆಗದಿರುವುದನ್ನು ನಾವು ಕಾಣಬಹುದು. ಸ್ವಂತ ಉದ್ಯಮವನ್ನು ಆರಂಭಿಸಲು ಯುವಜನರಿಗೆ ಅಗತ್ಯ ಬಂಡವಾಳವನ್ನು ಜೋಡಿಸಲು ಆಗದೆ ಇರುವುದು ಇದಕ್ಕೆ ಪ್ರಮುಖ ಕಾರಣ. ಯುವಜನರ ಅಗತ್ಯಗಳನ್ನು ಪರಿಗಣಿಸಿ, ಸರ್ಕಾರವು ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳನ್ನು ಇದಕ್ಕಾಗಿ ಆರಂಭಿಸಲಾಗಿದೆ. ಡೋನರ್ ಮಂತ್ರಾಲ ಯವು ಈಶಾನ್ಯ ಪ್ರಾಂತ್ಯಗಳನ್ನು ವಿಶೇಷವಾಗಿ ಗಮನದಲ್ಲಿ ಇರಿಸಿಕೊಂಡು, ನೂರು ಕೋಟಿ ರೂ. ಮೌಲ್ಯದ ಹೂಡಿಕೆ ಬಂಡವಾಳ ನಿಧಿಯೊಂದನ್ನು ಆರಂಭಿಸಿದೆ. ಕೇಂದ್ರ ಸರ್ಕಾರದ ಯೋಜನೆಗಳ ಗರಿಷ್ಠ ಪ್ರಯೋಜನವನ್ನು ಪಡೆಯಲು ಯುವಜನರು ಮುಂದಾಗಬೇಕು. ಈ ಪ್ರಾಂತ್ಯದ ಯುವಜನರು ಸ್ಟಾರ್ಟ್ಅಪ್ಗಳ ಜಗತ್ತಿನಲ್ಲಿ ವಿಸ್ಮಯ ಮೂಡಿಸಬಲ್ಲ ಸಾಮಥ್ರ್ಯ ಹಾಗೂ ಚಾತುರ್ಯ ಹೊಂದಿದ್ದಾರೆ. ಭಾರತ ಸರ್ಕಾರವು ಈ ಯುವಜನರ ಕೈ ಹಿಡಿಯಲು ಬದ್ಧವಾಗಿದೆ.
ನಾವು ದೇಶದ ಯುವಜನರ ಕೌಶಲ ಹಾಗೂ ಸಾಮಥ್ರ್ಯದ ಮೇಲೆ ನಂಬಿಕೆ ಇರಿಸಿದ್ದೇವೆ. ಅನ್ವೇಷಣೆ ಹಾಗೂ ವಹಿವಾಟು ಅಭಿವೃದ್ಧಿಗೆ ಸೂಕ್ತ ವಾತಾವರಣ ಕಲ್ಪಿಸುವ ಮೂಲಕ “ಉದ್ಯಮದ ಮೂಲಕ ಸಬಲೀಕರಣ’ ಎಂಬುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಇದರಿಂದ ದೇಶವು ಮಾನವತೆಯನ್ನೇ ಬದಲಿಸಬಲ್ಲ ದೊಡ್ಡ ಆಲೋಚನೆಗಳ ಮೂಲವಾಗಲಿದೆ.
2022ರಲ್ಲಿ ಭಾರತವು ಸ್ವಾತಂತ್ರ್ಯದ ಎಪ್ಪತೈದು ವರ್ಷಗಳನ್ನು ಪೂರೈಸಲಿದೆ. ನಮ್ಮ ಗುರಿಗಳನ್ನು ಯೋಜಿಸಲು ಹಾಗೂ ಕಾರ್ಯಗತಗೊಳಿಸಲು, ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಲು ನಮಗೆ ಐದು ವರ್ಷ ಕಾಲಾವಕಾಶ ಇದೆ. 2022ರೊಳಗೆ ನವ ಭಾರತವನ್ನು ನಿರ್ಮಿಸಲು ನಾವು ಎರಡು ಗುರಿಗಳಾದ, ಆರ್ಥಿಕ ಅಭಿವೃದ್ಧಿಯ ಹೆಚ್ಚಳ ಮತ್ತು ಅಭಿವೃದ್ಧಿಯ ಫಲ ಎಲ್ಲರೂ ಹಂಚಿಕೊಳ್ಳುವ ಕಡೆಗೆ ನಾವೆಲ್ಲ ಕೆಲಸ ಮಾಡಬೇಕಿದೆ. “ಎಲ್ಲರೊಡನೆ ವಿಕಾಸ, ಎಲ್ಲರ ವಿಕಾಸ’ ಎಂಬ ಘೋಷಣೆಯನ್ವಯ ಜಾತಿ,ಲಿಂಗ, ಧರ್ಮ, ವರ್ಗಗಳ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ ಸಮೃದ್ಧಿಯ ಫಲವನ್ನು ಹಂಚಿಕೊಳ್ಳಲು ಸಮಾನ ಅವಕಾಶ ಇರಬೇಕಾಗುತ್ತದೆ.
ನನ್ನ ಸರ್ಕಾರವು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರುವ ಸ್ಪರ್ಧಾತ್ಮಕ ಹಾಗೂ ಸಹಭಾಗಿತ್ವದ ಗಣತಂತ್ರದಲ್ಲಿ ನಂಬಿಕೆ ಇರಿಸಿದೆ. ರಾಜ್ಯಗಳು ಬದಲಾವಣೆಯ ಪ್ರಮುಖ ಚಾಲಕಗಳು ಎಂದು ನಾನು ನಂಬಿದ್ದೇನೆ. ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಸರ್ಕಾರವು ಹಲವು ಉಪಕ್ರಮಗಳನ್ನು ಆರಂಭಿಸಿದೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಸುಧಾರಿಸಬೇಕೆಂದು ಮುಖ್ಯಮಂತ್ರಿಗಳ ಸಮಿತಿಯು ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ನಾವು ಅಂಗೀಕರಿಸಿ ದ್ದೇವೆ. ಆದರೆ, ಹಣಕಾಸಿನ ಅಡೆತಡೆ ನಡುವೆಯೂ, ಈಶಾನ್ಯ ರಾಜ್ಯಗಳಿಗೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡುತ್ತಿರುವ ನೆರವಿನ ಅನುಪಾತ 90:10 ಇದೆ. ಇತರ ಯೋಜನೆಗಳಿಗೆ, ನೆರವು 80:20 ಇದೆ.
ಸ್ನೇಹಿತರೇ,
ನವ ಭಾರತದ ಕನಸು ನನಸಾಗಬೇಕೆಂದರೆ, ಅಭಿವೃದ್ಧಿಯ ಫಲ ಎಲ್ಲರಿಗೂ ತಲುಪಬೇಕು. ನಾನಾ ಸಾಮಾಜಿಕ ಸೂಚ್ಯಂಕಗಳ ಮೌಲ್ಯಮಾಪನದ ಆಧಾರದಲ್ಲಿ ಹಿಂದುಳಿದಿವೆ ಎನ್ನಲಾದ ದೇಶದ 115 ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಯೋಜನೆಗಳನ್ನು ರೂಪಿಸಿದೆ. ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಹಿಂದುಳಿದ ಜಿಲ್ಲೆಗಳಿಗೆ ಇದರಿಂದ ಉಪಯೋಗವಾಗಲಿದೆ. ನೆನ್ನೆ ನಾವು ನೂತನ ಕೇಂದ್ರೀಯ ಯೋಜನೆಯೊಂದನ್ನು ಅನಾವರಣಗೊಳಿಸಿದ್ದೇವೆ. ಈಶಾನ್ಯ ವಿಶೇಷ ಮೂಲಸೌಲಭ್ಯ ಅಬಿ üವೃದ್ಧಿ ಯೋಜನೆಯು ಎರಡು ವಿಭಾಗಗಳಲ್ಲಿ ಮೂಲಸೌಲಭ್ಯ ಸೃಷ್ಟಿಯಲ್ಲಿನ ಕಂದಕಗಳನ್ನು ಭರ್ತಿ ಮಾಡಲಿದೆ. ಒಂದು-ನೀರು ಪೂರೈಕೆ, ವಿದ್ಯುತ್, ಸಂಪರ್ಕ ಕಲ್ಪಿಸುವಿಕೆಗೆ ಸಂಬಂಧಿಸಿದ ಅದರಲ್ಲೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ಭೌತಿಕ ಮೂಲಸೌಲಭ್ಯ ನಿರ್ಮಾಣ.
ಎರಡನೆಯದು-ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಕ್ಷೇತ್ರದ ಯೋಜನೆಗಳು. ಈ ನೂತನ ಯೋಜನೆಗಳನ್ನು ರಾಜ್ಯ ಸರ್ಕಾರಗಳ ಜತೆಗೆ ಮಾತುಕತೆ ನಡೆಸಿ, ವಿನ್ಯಾಸಗೊಳಿಸಲಾಗಿದೆ. ಆದರೆ, ನಿರಂತರತೆಯನ್ನು ಕಾಯ್ದುಕೊಳ್ಳಲು ಎನ್ಎಲ್ಸಿಪಿಆರ್ ಅಡಿಯ ಈ ಎಲ್ಲ ಯೋಜನೆಗಳು ಮಾರ್ಚ್ 2022ರೊಳಗೆ ಸಂಪೂರ್ಣವಾಗುವಂತೆ ಅನುದಾನ ನೀಡಲಾಗುತ್ತದೆ. ಎನ್ಎಲ್ಸಿಪಿಆರ್ ಯೋಜನೆಗಳಲ್ಲಿ ರಾಜ್ಯವು ಶೇ.10ರಷ್ಟು ಪಾಲು ನೀಡಬೇಕಿದೆ. ಆದರೆ, ಈ ಯೋಜನೆಗೆ ಕೇಂದ್ರ ಸರ್ಕಾರವು ಶೇ.100ರಷ್ಟು ಅನುದಾನವನ್ನು ನೀಡಲಿದೆ. ಈ ಯೋಜನೆಯಡಿ ಮುಂದಿನ ಮೂರು ವರ್ಷದಲ್ಲಿ ಈಶಾನ್ಯ ರಾಜ್ಯಗಳಿಗೆ ಕೇಂದ್ರ ಸರ್ಕಾರವು 5,300 ಕೋಟಿ ರೂ. ಅನುದಾನ ನೀಡಲಿದೆ.
ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಪಥದಲ್ಲಿ ಅಡ್ಡಿಯಾಗಿರುವುದು – ಸಂಪರ್ಕದಲ್ಲಿನ ಕೊರತೆ. ಈ ಪ್ರಾಂತ್ಯದಲ್ಲಿ ಮೂಲಸೌಲಭ್ಯ ನಿರ್ಮಾಣದಲ್ಲಿ ಹೂಡಿಕೆ ಮಾಡುವ ಮೂಲಕ ಸಾರಿಗೆಯಲ್ಲಿ ಸ್ಥಿತ್ಯಂತರ ತರುವ ಗುರಿ ಹೊಂದಿದ್ದೇವೆ. ಕೇಂದ್ರ ಸರ್ಕಾರವು ಕಳೆದ ಮೂರು ವರ್ಷದಲ್ಲಿ 3,800 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 32,000 ಕೋಟಿ ರೂ. ಬಿಡುಗಡೆಗೊಳಿಸಿದೆ. ಇದರಲ್ಲಿ 1,200 ಕಿಮೀ ರಸ್ತೆಯನ್ನು ಈಗಾಗಲೇ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ಈಶಾನ್ಯ ಪ್ರಾಂತ್ಯದಲ್ಲಿ ವಿಶೇಷ ವೇಗ ವರ್ಧಿತ ರಸ್ತೆ ನಿರ್ಮಾಣ ಕಾರ್ಯಕ್ರಮಕ್ಕಾಗಿ 60,000 ಕೋಟಿ ರೂ. ಹಾಗೂ ಭಾರತ್ಮಾಲಾ ಯೋಜನೆಯಡಿ ಮುಂದಿನ ಎರಡು-ಮೂರು ವರ್ಷದಲ್ಲಿ 30,000 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿಗಳು ಮತ್ತು ಜಲಮಾರ್ಗಗಳ ಕಾರ್ಯಜಾಲವನ್ನು ನಿರ್ಮಿಸಲಿದೆ. ಈಶಾನ್ಯ ಪ್ರಾಂತ್ಯದ ಎಲ್ಲ ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಕಲ್ಪಿಸಲು ನಾವು ಬದ್ಧರಾಗಿದ್ದೇವೆ.
ಭಾರತ ಸರ್ಕಾರವು 47,000 ಕೋಟಿ ರೂ. ವೆಚ್ಚದಲ್ಲಿ 1,385 ಕಿಮೀ ಉದ್ದದ 15 ಹೊಸ ರೈಲು ಮಾರ್ಗ ಯೋಜನೆಗಳಿಗೆ ಅನುಮತಿ ನೀಡಿದೆ. ಕಳೆದ ವರ್ಷ ಮಿಜೋರಾಂನ ಭೈರಾಬಿ ಹಾಗೂ ಅಸ್ಸಾಂನ ಸಿಲ್ಚಾರ್ನ್ನು ಸಂಪರ್ಕಿಸುವ ರೈಲು ಮಾರ್ಗದ ಆರಂಭದೊಂದಿಗೆ, ರೈಲ್ವೆಯು ಮಿಜೋರಾಂನ್ನು ತಲುಪಿದೆ. ಐಜಾವ್ಲ್ಗೆ ಹೊಸ ರೈಲು ಮಾರ್ಗಕ್ಕೆ 2014ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದೇನೆ.
ರಾಜ್ಯ ಸರ್ಕಾರದ ಬೆಂಬಲದೊಂದಿಗೆ, ರಾಜಧಾನಿ ಐಜಾವ್ಲ್ಗೆ ಬ್ರಾಡ್ಗೇಜ್ ರೈಲು ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಕೇಂದ್ರ ಸರ್ಕಾರವು “ಪೂರ್ವದೆಡೆಗೆ ಕ್ರಿಯೆ ಕಾರ್ಯನೀತಿ’ಯಡಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈಶಾನ್ಯ ಏಷ್ಯಾದ ಸ್ವಾಗತದ್ವಾರ ವಾಗಿರುವ ಮಿಜೋರಾಂ, ಇದರಿಂದ ಹೆಚ್ಚು ಲಾಭ ಪಡೆದುಕೊಳ್ಳಲಿದೆ. ರಾಜ್ಯವು ಮ್ಯಾನ್ಮಾರ್ ಮತ್ತು ಬಾಂಗ್ಲಾ ದೇಶಗಳ ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾಗಿ ಹೊರಹೊಮ್ಮಲಿದೆ. ಹಲವು ಬಹುಪಕ್ಷೀಯ ಯೋಜನೆಗಳು ಸಂಪೂರ್ಣಗೊಳ್ಳುವ ನಾನಾ ಹಂತಗಳಲ್ಲಿವೆ. ಕೆಲವು ಪ್ರಮುಖ ಉಪಕ್ರಮಗಳೆಂದರೆ, ಕಲದನ್ ಬಹು ಮಾದರಿಯ ಸಾಗಣೆ ಸಂಚಾರ ಯೋಜನೆ, ರಿಹ್ಟೆಡಿಮ್ ರಸ್ತೆ ಯೋಜನೆ ಹಾಗೂ ಗಡಿ ಮಾರುಕಟ್ಟೆಗಳು. ಇವೆಲ್ಲವೂ ಆರ್ಥಿಕ ಸಂಪರ್ಕದ ವ್ಯಾಪ್ತಿಯನ್ನು ಹೆಚ್ಚಿಸುವುದಲ್ಲದೆ, ಈಶಾನ್ಯ ಪ್ರಾಂತ್ಯದ ಒಟ್ಟಾರೆ ಆರ್ಥಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ನೆರವಾಗಲಿವೆ.
ಸ್ನೇಹಿತರೇ,
ಅತಿ ಹೆಚ್ಚು ಸಾಕ್ಷರತೆ ಪ್ರಮಾಣ, ಪ್ರಕೃತಿ ಸೌಂದರ್ಯ ಮತ್ತು ಇಂಗ್ಲಿಷ್ ಮಾತನ್ನಾಡಬಲ್ಲ ಹೆಚ್ಚು ಜನರಿರುವುದರಿಂದ, ಮಿಜೋರಾಂನ್ನು ಒಂದು ಪರಿಪೂರ್ಣ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬಹುದಾಗಿದೆ. ಸಾಹಸ ಪ್ರವಾಸೋದ್ಯಮ, ಸಾಂಸ್ಕøತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹಾಗೂ ಸಮುದಾಯವನ್ನು ಆಧರಿಸಿದ ಗ್ರಾಮೀಣ ಪ್ರವಾಸೋದ್ಯಮಕ್ಕೆ ರಾಜ್ಯದಲ್ಲಿ ಅಪಾರ ಅವಕಾಶಗಳಿವೆ. ಕಳೆದ ಎರಡು ವರ್ಷದಲ್ಲಿ ಕೇಂದ್ರ ಸರ್ಕಾರವು 194 ಕೋಟಿ ರೂ ವೆಚ್ಚದ ಎರಡು ಪ್ರವಾಸೋದ್ಯಮ ಯೋಜನೆಗಳನ್ನು ಮಂಜೂರು ಮಾಡಿದ್ದು, ಪರಿಸರ ಪ್ರವಾಸೋದ್ಯಮ ಮತ್ತು ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಈಗಾಗಲೇ 115 ಕೋಟಿ ರೂ. ಬಿಡು ಗಡೆಗೊಳಿಸಲಾಗಿದೆ. ಮಿಜೋರಾಂನಲ್ಲಿರುವ ನಾನಾ ವನ್ಯಜೀವಿಧಾಮ ಹಾಗೂ ರಾಷ್ಟ್ರೀಯ ಉದ್ಯಾನಗಳಿಗೆ ಪ್ರವಾಸಿಗಳನ್ನು ಆಕರ್ಷಿಸಲು, ಅವುಗಳ ಮೇಲುಸ್ತುವಾರಿ ಹಾಗೂ ನಿರ್ವಹಣೆಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಮಿಜೋರಾಂನ್ನು ಭಾರತದ ಪ್ರಮುಖ ಪ್ರವಾಸ ಕೇಂದ್ರವನ್ನಾಗಿ ಮಾಡಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ.
ಸ್ನೇಹಿತರೇ,
ದೇಶದ ಈ ಭಾಗವನ್ನು ಋಣಾತ್ಮಕ ಇಂಗಾಲ(ನೆಗಟಿವ್ ಕಾರ್ಬನ್) ಪ್ರದೇಶ ಎಂದು ಸುಲಭವಾಗಿ ಘೋಷಿಸಬಹುದು. ಮಿತ್ರ ರಾಷ್ಟ್ರ ಭೂತಾನ್ ಆ ಕೆಲಸ ಮಾಡಿದೆ. ಒಂದು ವೇಳೆ ಎಲ್ಲ ಎಂಟು ರಾಜ್ಯ ಸರ್ಕಾರಗಳು ತಮ್ನ ಪ್ರಯತ್ನವನ್ನು ತೀವ್ರಗೊಳಿ ಸಿದಲ್ಲಿ, ಈಶಾನ್ಯ ಪ್ರಾಂತ್ಯವು ಋಣಾತ್ಮಕ ಇಂಗಾಲ ಪ್ರದೇಶವಾಗಲಿದೆ. ಒಂದು ವೇಳೆ ಈ ಪ್ರಾಂತ್ಯವು ಋಣಾತ್ಮಕ ಇಂಗಾಲ ಪ್ರದೇಶ ಎಂದು ಅಂಗೀಕರಿಸಲ್ಪಟ್ಟಲ್ಲಿ, ವಿಶ್ವ ಭೂಪಟದಲ್ಲಿ ದೊಡ್ಡ ಬ್ರ್ಯಾಂಡ್ ಎಂದು ಸ್ಥಾಪಿತಗೊಳ್ಳಲಿದೆ. ಶೇ.100ರಷ್ಟು ಸಾವ ಯವ ಎಂದು ಘೋಷಿಸಿಕೊಂಡಿರುವ ಸಿಕ್ಕಿಂನಂತೆ ಘೋಷಿಸಿಕೊಳ್ಳಲು ಈಶಾನ್ಯದ ಬೇರೆ ರಾಜ್ಯಗಳೂ ತಮ್ಮ ಪ್ರಯತ್ನವನ್ನು ತೀವ್ರಗೊಳಿಸಬೇಕಿದೆ. ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಕೇಂದ್ರವು ಸಾಂಪ್ರದಾಯಿಕ ಕೃಷಿ ಅಭಿವೃದ್ಧಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ದೇಶದೆಲ್ಲೆಡೆ ಹತ್ತು ಸಾವಿರ ಸಾವಯವ ಹಬ್(ಕೇಂದ್ರಸ್ಥಾನ)ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ನೂರು ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದೆ. 50,000ಕ್ಕೂ ಹೆಚ್ಚು ರೈತರು ಇವುಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ತಮ್ಮ ಸಾವಯವ ಉತ್ಪನ್ನಗಳನ್ನು ಮಾರಲು ಇಲ್ಲಿನ ರೈತರಿಗೆ ದಿಲ್ಲಿಯಲ್ಲೂ ಸೌಕರ್ಯ ಕಲ್ಪಿಸಲಾಗಿದೆ.
ಸ್ನೇಹಿತರೇ,
2022ರಲ್ಲಿ ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲಿದೆ. 2022ರೊಳಗೆ ರಾಜ್ಯವನ್ನು ಶೇ.100ರಷ್ಟು ಸಾವಯವ ಹಾಗೂ ಋಣಾತ್ಮಕ ಇಂಗಾಲ ಪ್ರದೇಶವಾಗಿ ಅಭಿವೃದ್ಧಿಪಡಿಸುವುದಾಗಿ ಮಿಜೋರಾಂ ಪ್ರತಿಜ್ಞೆ ಮಾಡಬೇಕು. ಈ ಶಪಥವನ್ನು ಸಾಧಿಸಲು ರಾಜ್ಯದ ಜನರೊಂದಿಗೆ ಕೇಂದ್ರ ಸರ್ಕಾರವು ಇರಲಿದೆ ಎಂದು ಮಿಜೋರಾಂನ ಜನರಿಗೆ ನಾನು ಖಾತ್ರಿ ನೀಡುತ್ತೇನೆ. ನಾವು ನಿಮ್ಮ ಅತಿ ಸಣ್ಣ ಸಮಸ್ಯೆಗಳನ್ನು ಕೂಡ ಅರ್ಥ ಮಾಡಿಕೊಂಡು ಬಗೆಹರಿಸುತ್ತಿದ್ದೇವೆ. ನಾನು ನಿಮಗೆ ಬಿದಿರಿನ ಉದಾಹರಣೆ ಕೊಡಲು ಇಷ್ಟಪಡುತ್ತೇನೆ.
ಈಶಾನ್ಯ ಪ್ರದೇಶದ ಲಕ್ಷಾಂತರ ಜನರ ಜೀವನಾಧಾರ ಮೂಲವಾದ ಬಿದಿರು, ಹಲವು ನಿರ್ಬಂಧ, ಕಟ್ಟುಪಾಡುಗಳಲ್ಲಿ ಸಿಲುಕಿಕೊಂಡಿತ್ತು. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬಿದಿರನ್ನು ಕೂಡ ಅನುಮತಿಯಿಲ್ಲದೆ ಸಾಗಿಸುವಂತೆ ಇಲ್ಲವೇ ಮಾರುವಂತೆ ಇರಲಿಲ್ಲ. ಈ ಕಷ್ಟವನ್ನು ಬಗೆಹರಿಸಲು ನಮ್ಮ ಸರ್ಕಾರವು ನಿಯಮಗಳನ್ನು ಬದಲಿಸಿತು. ಈಗ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬಿದಿರು ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಸಾಗಣೆ ಹಾಗೂ ಮಾರಾಟಕ್ಕೆ ಯಾವುದೇ ಅನುಮತಿ ಇಲ್ಲವೇ ಪರವಾನಗಿ ಬೇಕಿಲ್ಲ. ಇದರಿಂದ ಲಕ್ಷಾಂತರ ರೈತರಿಗೆ ಉಪಯೋಗವಾಗಲಿದ್ದು, 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟು ಆಗಿಸುವ ಪ್ರಯತ್ನಕ್ಕೆ ನೆರವಾಗಲಿದೆ.
ನಾನು ಮಿಜೋರಾಂಗೆ ಬಂದಿರುವಾಗ, ಫುಟ್ಬಾಲ್ ಬಗ್ಗೆ ಮಾತನ್ನಾಡದೆ ಇರುವುದು ಸಾಧ್ಯವಿಲ್ಲ. ಮಿಜೋರಾಂನ ಆಟಗಾರ ಜೆಜೆ ಲಲ್ಪೇಖುಲ ಇಡೀ ದೇಶದ ಗಮನವನ್ನು ತಮ್ಮೆಡೆಗೆ ಸೆಳೆದಿದ್ದಾರೆ. ಮತ್ತು ಒಂದರ್ಥದಲ್ಲಿ, ಫುಟ್ಬಾಲ್ ಮಿಜೋರಾಂನ ಪ್ರತಿ ಮನೆಯ ಒಂದು ಭಾಗವಾಗಿದೆ. ಫಿಫಾ ಮತ್ತು ಐಜಾವ್ಲ್ ಫುಟ್ಬಾಲ್ ಕ್ಲಬ್ನ ಪೈಲಟ್ ಯೋಜನೆಯೊಂದು ಸ್ಥಳೀಯ ಪ್ರತಿಭೆಗಳನ್ನು ಸಬಲಗೊಳಿಸುತ್ತಿದೆ ಎಂದು ನನಗೆ ಹೇಳಲಾಗಿದೆ. ಮಿಜೋರಾಂ 2014ರಲ್ಲಿ ಮೊದಲ ಬಾರಿಗೆ ಸಂತೋಷ್ ಟ್ರೋಫಿಯನ್ನು ಗೆದ್ದಾಗ, ಇಡೀ ದೇಶದ ಫುಟ್ಬಾಲ್ ಅಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯದ ಸಾಧನೆಗಾಗಿ ನಾನು ಮಿಜೋರಾಂನ ಜನರನ್ನು ಅಭಿನಂದಿಸುತ್ತೇನೆ. ಫುಟ್ಬಾಲ್ ಒಂದು ಮೃದು ಶಕ್ತಿಯಾಗಿದ್ದು, ಇದರ ಮೂಲಕ ಮಿಜೋರಾಂ ಜಗತ್ತಿನ ಗಮನವನ್ನು ಸೆಳೆಯಬಹುದಾಗಿದೆ.
ಫುಟ್ಬಾಲ್ನ ಮೃದು ಶಕ್ತಿಯು ರಾಜ್ಯದ ಜಾಗತಿಕ ಅಸ್ಮಿತೆ ಆಗಬಹುದು. ಮಿಜೋರಾಂನಲ್ಲಿ ಹಲವು ಪ್ರಮುಖ ಕ್ರೀಡಾಪಟುಗಳಿದ್ದು, ಅವರು ದೇಶ ಹಾಗೂ ರಾಷ್ಟ್ರಕ್ಕೆ ಗೌರವ ತಂದಿದ್ದಾರೆ. ಅವರೆಂದರೆ, ಒಲಿಂಪಿಯನ್ ಬಿಲ್ಲುಗಾರ ಸಿ.ಲಲ್ರೆಂಸಂಗ, ಬಾಕ್ಸರ್ ಜೆನ್ನಿ ಲಾಲ್ರೆಂಲಿಯಾನಿ, ತೂಕ ಎತ್ತುವ ಪಟು ಲಲ್ಚ್ಛಹಿಮಿ ಮತ್ತು ಹಾಕಿ ಆಟಗಾರ್ತಿ ಲಾಲ್ರೌತ್ಫೆಲಿ. ಮುಂದೆಯೂ ವಿಶ್ವ ಮಟ್ಟದಲ್ಲಿ ಅತ್ಯುನ್ನತ ಸಾಧನೆ ತೋರುವ ಕ್ರೀಡಾಪಟುಗಳನ್ನು ಮಿಜೋರಾಂ ಪೂರೈಸಲಿದೆ ಎಂದು ನನಗೆ ಖಾತ್ರಿ ಇದೆ.
ಸ್ನೇಹಿತರೇ,
ಜಗತ್ತಿನ ಹಲವು ದೇಶಗಳ ಆರ್ಥಿಕತೆಯು ಕ್ರೀಡೆಯನ್ನು ಮತ್ತು ಕ್ರೀಡೆಯೊಂದನ್ನೇ ಆಧರಿಸಿದೆ. ಈ ದೇಶಗಳು ಕ್ರೀಡೆಗೆ ಅಗತ್ಯವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ ಜಗತ್ತಿನ ಎಲ್ಲೆಡೆಯಿಂದ ಜನರನ್ನು ಆಕರ್ಷಿಸುತ್ತವೆ. ಈಶಾನ್ಯ ಪ್ರಾಂತ್ಯದಲ್ಲಿ ರುವ ಕ್ರೀಡಾ ಸಾಮಥ್ರ್ಯವನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಇಂಫಾಲ್ನಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿದೆ. ಕ್ರೀಡಾ ವಿಶ್ವವಿದ್ಯಾಲಯ ಆರಂಭವಾದ ಬಳಿಕ ಈ ಪ್ರಾಂತ್ಯದ ಯುವಜನರು ಕ್ರೀಡೆಗೆ ಸಂಬಂಧಿಸಿದ ಯಾವುದೇ ತರಬೇತಿಯನ್ನು ಪಡೆಯುವುದು ಸುಲಭವಾಗಲಿದೆ. ಅಷ್ಟಲ್ಲದೆ, ಇದಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ. ವಿಶ್ವವಿದ್ಯಾಲಯದ ಆರಂಭದ ಬಳಿಕ ದೇಶದೆಲ್ಲೆಡೆ ಹಾಗೂ ಬೇರೆ ದೇಶಗಳಲ್ಲೂ ಅದರ ಕ್ಯಾಂಪಸ್ಗಳನ್ನು ತೆರೆದು, ಈ ಪ್ರಾಂತ್ಯದ ಕ್ರೀಡಾಳುಗಳು ಬೇರೆ ದೇಶದಲ್ಲೂ ತರಬೇತಿ ಪಡೆಯಲು ಸಾಧ್ಯವಾಗಲಿದೆ.
ಐಜಾವ್ಲ್ ವರ್ಣರಂಜಿತವಾಗಿದ್ದು, ಹಬ್ಬದ ಸಂಭ್ರಮದಲ್ಲಿ ಮುಳುಗಿದೆ ಮತ್ತು ಕ್ರಿಸ್ಮಸ್ ಆಚರಣೆಗೆ ಸಂಪೂರ್ಣ ಸನ್ನದ್ಧವಾಗಿರುವುದು ಕಾಣಿಸುತ್ತಿದೆ. ಮಿಜೋರಾಂನ ಎಲ್ಲ ಜನರಿಗೆ ಕ್ರಿಸ್ಮಸ್ನ ಶುಭಾಶಯಗಳನ್ನು ಕೋರುತ್ತೇನೆ.
ಎನ್ ವಯಾ ಚೂಂಗಾ ಕಾ-ಲೋಮ್ ಐ ಮಂಗಚ್ಚಾ(ಇiಟಿ Ein Vaya Choonga Ka-Lom Ei Mangachcha)
ಧನ್ಯವಾದಗಳು.
******
I am delighted to be in Mizoram. This is my first visit here as PM but I have visited this state before that. I admire the beauty of Mizoram and friendly nature of the people of this state: PM @narendramodi in Aizawl https://t.co/vbG9VFN31Q pic.twitter.com/BPXLSzVScq
— PMO India (@PMOIndia) December 16, 2017
During the tenure of Shri Atal Bihari Vajpayee significant work was done for the development of the Northeast. We have taken forward this vision and are devoting resources for the progress of the Northeast. My ministerial colleagues are frequently visiting the Northeast: PM
— PMO India (@PMOIndia) December 16, 2017
There have been over 150 Ministerial visits. Our initiative- the Ministry of DoNER at your doorstep has added impetus to the development of the Northeast. It has enabled us to understand the aspirations of the Northeast even better: PM @narendramodi in Mizoram
— PMO India (@PMOIndia) December 16, 2017
Today we gather here to celebrate a significant mile-stone in the history of Mizoram: the completion and dedication of the 60 Mega-Watt Tuirial Hydropower Project: PM @narendramodi
— PMO India (@PMOIndia) December 16, 2017
It is the first large hydropower project in Mizoram. It will boost the socio-economic development of the State: PM @narendramodi
— PMO India (@PMOIndia) December 16, 2017
The project was first cleared by the Union Government of PM Vajpayee ji, way back in 1998 but got delayed. The completion of this project is a reflection of our commitment to complete ongoing projects and usher in a new era of development in the North Eastern region: PM
— PMO India (@PMOIndia) December 16, 2017
Besides electricity the reservoir water will also open new avenues for navigation. This will provide connectivity to remote villages. The huge reservoir, spread over an area of 45 square kilometres can also be used for development of fisheries: PM @narendramodi
— PMO India (@PMOIndia) December 16, 2017
This project will boost eco-tourism and provide a source of assured drinking water supply: PM @narendramodi
— PMO India (@PMOIndia) December 16, 2017
उत्तर-पूर्व को विशेष ध्यान में रखते हुए DONER मंत्रालय ने 100 करोड़ रुपए की राशि से एक वेंचर कैपिटल फंड भी बनाया है: PM @narendramodi
— PMO India (@PMOIndia) December 16, 2017
मेरा मिजोरम के नौजवानों से आग्रह है कि वो केंद्र सरकार की इन योजनाओं का ज्यादा से ज्यादा फायदा उठाएं। यहां के नौजवान Start up की दुनिया में छा जाने का हौसला रखते हैं, क्षमता रखते हैं। भारत सरकार ऐसे नौजवानों की हैंड होल्डिंग के लिए प्रतिबद्ध है: PM @narendramodi
— PMO India (@PMOIndia) December 16, 2017
We are betting on the skills and strengths of India's youth. We believe in 'empower through enterprise' - which is creating the right ecosystem for innovation and enterprise to flourish so that our land is home to the next big ideas that can transform humanity: PM @narendramodi
— PMO India (@PMOIndia) December 16, 2017
Building a New India by 2022 requires us to work towards the twin goals of increasing economic growth as well as ensuring that the fruits of growth are shared by all: PM @narendramodi
— PMO India (@PMOIndia) December 16, 2017
In the spirit of 'सबका साथ, सबका विकास' every Indian, irrespective of caste, gender, religion, class must have equal opportunities to partake in the new prosperity: PM @narendramodi
— PMO India (@PMOIndia) December 16, 2017
Vision of New India can be realized only if fruits of development reach all. Government plans to focus on around 115 districts which are relatively backward when evaluated on various indicators. This will benefit backward districts of North Eastern States including Mizoram: PM
— PMO India (@PMOIndia) December 16, 2017
It is said that the lack of connectivity is one of the biggest hurdles in the path of development of the North Eastern Region. My Government wants to do 'Transformation by Transportation' through investment in infrastructure to change the face of the North Eastern Region: PM
— PMO India (@PMOIndia) December 16, 2017
We are committed to bring all the State Capitals of North East Region on the Rail map. The Government of India is executing 15 New Rail Line projects of 1385 kilometers length, at a cost of over Rs.47,000 crore: PM @narendramodi
— PMO India (@PMOIndia) December 16, 2017
The Union Government has been proactively following the ‘Act East Policy’. As a gate-way to South East Asia, Mizoram stands to gain immensely from this. It can emerge as a key transit point for trade with Myanmar and Bangladesh: PM @narendramodi
— PMO India (@PMOIndia) December 16, 2017
The high literacy rate, scenic beauty and availability of large English speaking population in Mizoram make for a perfect blend to develop the State as a model tourist destination: PM @narendramodi
— PMO India (@PMOIndia) December 16, 2017
The Bamboo which is the livelihood for lakhs of people of North East, has been under a very restrictive regulatory regime. Because of this, you cannot transport or sell the Bamboo produced in your own field without the permit: PM @narendramodi
— PMO India (@PMOIndia) December 16, 2017
Our Government with an aim to reduce this pain, has changed the regulatory regime and now there will be no requirement of any permit or permission for producing, transporting and selling Bamboo and its products produced by farmers in their own fields: PM @narendramodi
— PMO India (@PMOIndia) December 16, 2017
This will benefit lakhs of farmers and will add to the efforts to double the farmers income by 2022: PM @narendramodi
— PMO India (@PMOIndia) December 16, 2017