ಪಿಎಂಇಂಡಿಯಾ
ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ವಿದ್ಯಾಸಾಗರ ರಾವ್ ಅವರೇ, ರಕ್ಷಣಾ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರೇ, ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್, ರಕ್ಷಣಾ ಖಾತೆ ಸಹಾಯಕ ಸಚಿವರಾದ ಶ್ರೀ ಸುಭಾಷ್ ಭಾಮ್ರೆ, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಶ್ರೀ ಅಜಿತ್ ಧೋವಲ್,ಫ್ರಾನ್ಸ್ ರಾಯಭಾರಿ ಶ್ರೀ ಅಲೆಗ್ಸಾಂಡರ್ ಜಿಗ್ರಾಲ್ ಮತ್ತು ಇತರ ಪ್ರೆಂಚ್ ಅತಿಥಿಗಳೇ, ನೌಕಾದಳ ವರಿಷ್ಟರಾದ ಅಡ್ಮಿರಲ್ ಸುನಿಲ್ ಲಾಂಬಾ ,ಪಶ್ಚಿಮ ನೌಕಾ ಕಮಾಂಡಿನ ಕಮಾಂಡಿಂಗ್ ಇನ್ ಚೀಫ್ , ವೈಸ್ ಅಡ್ಮಿರಲ್ ಗಿರೀಶ ಲೂತ್ರಾ ಜೀ, ವೈಸ್ ಅಡ್ಮಿರಲ್ ಡಿ.ಎಂ. ದೇಶಪಾಂಡೇ ಜೀ, ಎಂ.ಡಿ.ಎಲ್. ನ ಅಧ್ಯಕ್ಷ ಹಾಗು ಆಡಳಿತ ನಿರ್ದೇಶಕರಾದ ಶ್ರೀ ರಾಕೇಶ್ ಆನಂದ್, ಕ್ಯಾಪ್ಟನ್ ಎಸ್.ಡಿ. ಮೆಹಂದಳೆ, ನೌಕಾದಳದ ಇತರ ಅಧಿಕಾರಿಗಳೇ ಮತ್ತು ಸಿಬಂದಿಗಳೇ, ಮಜಗಾಂವ್ ಡಾಕ್ ಹಡಗು ನಿರ್ಮಾಣ ಸಂಸ್ಥೆಯ (ಎಂ.ಡಿ.ಎಲ್.) ಅಧಿಕಾರಿಗಳೇ ಮತ್ತು ಸಿಬಂದಿಗಳೇ ಹಾಗು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಗಣ್ಯರೇ.
ಇಂದು 1.25 ಬಿಲಿಯನ್ ಭಾರತೀಯರಿಗೆ ಹೆಮ್ಮೆಯ ದಿನ ಮತ್ತು ಬಹಳ ಮುಖ್ಯವಾದ ದಿನ. ಈ ಚಾರಿತ್ರಿಕ ಸಾಧನೆಗಾಗಿ ನಾನು ನನ್ನ ಎಲ್ಲಾ ದೇಶವಾಸಿಗಳನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಐ.ಎನ್.ಎಸ್. ಕಲ್ವರಿ ಸಬಮರೀನ್ ಅನ್ನು ದೇಶಕ್ಕೆ ಸಮರ್ಪಿಸುವುದು ನನಗೆ ದೊರೆತ ಅತ್ಯಂತ ಪವಿತ್ರ ಅವಕಾಶ ಎಂದು ನಾನು ಭಾವಿಸುತ್ತೇನೆ. ನಾನು ದೇಶದ ಜನತೆಯ ಪರವಾಗಿ ಭಾರತೀಯ ನೌಕಾದಳಕ್ಕೆ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.
ಸುಮಾರು ಎರಡು ದಶಕಗಳ ಅಂತರದ ಬಳಿಕ , ಭಾರತವು ಇಂತಹ ಸಬ್ ಮರೀನ ಅನ್ನು ಪಡೆಯುತ್ತಿದೆ. ನೌಕಾದಳದ ವಾಹನಗಳ ಸಾಲಿಗೆ ಕಲ್ವರಿಯ ಸೇರ್ಪಡೆ ರಕ್ಷಣಾ ವಲಯದಲ್ಲಿ ನಾವು ಕೈಗೊಂಡ ಅತ್ಯಂತ ಮಹತ್ವದ ಹೆಜ್ಜೆ. ಇದನ್ನು ತಯಾರಿಸಲು ಭಾರತೀಯರು ಬೆವರು ಸುರಿಸಿದ್ದಾರೆ, ಅವರು ತಮ್ಮ ಶಕ್ತಿ ಬಳಸಿದ್ದಾರೆ. ಇದು ಮೇಕ್ ಇನ್ ಇಂಡಿಯಾಕ್ಕೆ ಒಂದು ದೊಡ್ಡ ಉದಾಹರಣೆ. ಕಲ್ವರಿಯ ನಿರ್ಮಾಣದಲ್ಲಿ ತೊಡಗಿಕೊಂಡ ಪ್ರತೀ ಕಾರ್ಮಿಕರನ್ನು, ಪ್ರತೀಯೊಬ್ಬ ಸಿಬಂದಿಯನ್ನು , ಹೃದಯಪೂರ್ವಕವಾಗಿ ನಾನು ಅಭಿನಂದಿಸುತ್ತೇನೆ. ಕಲ್ವರಿ ನಿರ್ಮಾಣಕ್ಕೆ ನೆರವು ನೀಡಿದ ಫ್ರಾನ್ಸ್ ಗೂ ನಾನು ಧನ್ಯವಾದ ಹೇಳುತ್ತೇನೆ. ಭಾರತ ಮತ್ತು ಫ್ರಾನ್ಸ್ ನಡುವೆ ತ್ವರಿತವಾಗಿ ಬೆಳೆಯುತ್ತಿರುವ ವ್ಯೂಹಾತ್ಮಕ ಸಹಭಾಗಿತ್ವಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.
ಸ್ನೇಹಿತರೇ, ಈ ವರ್ಷ ಭಾರತೀಯ ನೌಕಾದಳದ ಸಬ್ ಮರೀನ್ ಸೈನ್ಯ/ ವಿಭಾಗದ ಸ್ವರ್ಣ ಮಹೋತ್ಸವ ವರ್ಷ. ಕಳೆದ ವಾರವಷ್ಟೇ ಸಬ್ ಮರೀನ ಘಟಕಕ್ಕೆ ರಾಷ್ಟ್ರಪತಿಗಳ ಬಾವುಟ ನೀಡಲಾಗಿದೆ. ಕಲ್ವರಿಯ ಶಕ್ತಿ ಎಂದರೆ ಅದು ತೈಗರ್ ಶಾರ್ಕ ನ ಶಕ್ತಿಯೆಂದು ಹೇಳಬಹುದಾದ ಅದರ ಶಕ್ತಿ, ನಮ್ಮ ಭಾರತೀಯ ನೌಕಾ ಬಲವನ್ನು ಹೆಚ್ಚಿಸಲಿದೆ. ಸ್ನೇಹಿತರೇ ಭಾರತದ ಸಾಗರ ವ್ಯವಹಾರ ಪರಂಪರೆ ಬಹಳ ಹಳೆಯದು, ಐದು ಸಾವಿರ ವರ್ಷ ಹಿಂದಿನದು. ಗುಜರಾತಿನ ಲೋಥಾಲ್ ವಿಶ್ವದ ಅತ್ಯಂತ ಪ್ರಾಚೀನ ಸಾಗರ ಬಂದರುಗಳಲ್ಲಿ ಒಂದು. ಲೋಥಾಲ್ ಮೂಲಕ 84 ರಾಷ್ಟ್ರಗಳ ಜತೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು ಎಂದು ಚರಿತ್ರಕಾರರು ಹೇಳುತ್ತಾರೆ. ಏಶ್ಯಾದ ಇತರ ದೇಶಗಳು ಮತ್ತು ಆಫ್ರಿಕಾದ ದೇಶಗಳ ನಡುವೆ ನಮ್ಮ ದೇಶದ ಬಾಂಧವ್ಯ ಈ ಸಾಗರದಲೆಗಳ ಮೂಲಕವೇ ಬೆಳೆದಿತ್ತು. ಭಾರತದ ಸಾಗರ ಬರೇ ವ್ಯಾಪಾರೋದ್ಯಮಕ್ಕೆ ಮಾತ್ರವಲ್ಲ ಇತರ ದೇಶಗಳ ಜತೆ ಸಾಂಸ್ಕೃತಿಕ ಸಂಬಂಧ ಬೆಸೆಯುವುದಕ್ಕೂ ಸಹಾಯ ಮಾಡಿತು ಮತ್ತು ಆ ಮೂಲಕ ನಾವೂ ಅವರ ಜತೆ ನಿಲ್ಲುವಂತಾಯಿತು.
ಭಾರತದ ಸಾಗರವು ಭಾರತದ ಚರಿತ್ರೆಯನ್ನು ರೂಪಿಸಿದೆ. ಮತ್ತು ಅದು ಈಗ ಆಧುನಿಕ ಭಾರತಕ್ಕೆ ಶಕ್ತಿಯನ್ನು ತುಂಬುತ್ತಿದೆ. ನಮ್ಮ ಸಾಗರ ತೀರ 7,500 ಕಿಲೋ ಮೀಟರಿಗಿಂತ ಹೆಚ್ಚು ಉದ್ದವಿದೆ, ಸುಮಾರು 1300 ಸಣ್ಣ ಸಣ್ಣ ದ್ವೀಪಗಳನ್ನು ಒಳಗೊಂಡಿದೆ.,25 ಲಕ್ಷ ಚದರ ಕಿಲೋ ಮೀಟರ್ ವಿಶೇಷ ಆರ್ಥಿಕ ವಲಯವನ್ನು ಹೊಂದಿದೆ. ಹೋಲಿಸಲಾಗದ ಸಾಗರ ಶಕ್ತಿಯನ್ನು ಅದು ನಿರ್ಮಿಸಿದೆ. ಭಾರತದ ಸಾಗರ ಮುಖ್ಯವಾಗಿರುವುದು ಭಾರತಕ್ಕೆ ಮಾತ್ರವಲ್ಲ, ಇಡೀಯ ವಿಶ್ವದ ಭವಿತವ್ಯಕ್ಕೂ ಮುಖ್ಯವಾಗಿದೆ. ಈ ಸಾಗರಗಳು ವಿಶ್ವದ ಮೂರನೇಯ ಎರಡರಷ್ಟು ಭಾಗ ತೈಲ ಸಾಗಾಟದ ಹಡಗುಗಳ ಹೊರೆಯನ್ನು ನಿಭಾಯಿಸುತ್ತಿವೆ, ವಿಶ್ವದ ಮೂರನೇಯ ಒಂದು ಭಾಗ ವಿಶ್ವದ ಬೃಹತ್ ಸರಕು ಸಾಗಾಟ ಮತ್ತು ವಿಶ್ವದ ಅರ್ಧದಷ್ಟು ಕಂಟೈನರ್ ಸಾಗಾಣಿಕೆಯ ಹೊರೆಯನ್ನು ಹೊತ್ತಿವೆ. ನಾಲ್ಕನೇ ಮೂರು ಭಾಗ ಹಡಗು ಸಾರಿಗೆ ಇದರ ಮೂಲಕ ಸಾಗಿ ವಿಶ್ವದ ಇತರ ಭಾಗಗಳನ್ನು ಸೇರುತ್ತದೆ. ಈ ಸಾಗರಗಳಲ್ಲಿ ಏಳುವ ಅಲೆಗಳು 40 ದೇಶಗಳನ್ನು ತಲುಪುತ್ತವೆ ಮತ್ತು ವಿಶ್ವದ 40 ಶೇಖಡಾ ಜನಸಂಖ್ಯೆಯನ್ನು ತಲುಪುತ್ತವೆ.
ಸ್ನೇಹಿತರೇ, 21 ನೇ ಶತಮಾನವನ್ನು ಏಶ್ಯಾದ ಶತಮಾನ ಎಂದು ಹೇಳಲಾಗುತ್ತದೆ. 21 ನೇ ಶತಮಾನದ ಅಭಿವೃದ್ಧಿ ಪಥ ಭಾರತದ ಸಾಗರದ ಮೂಲಕ ಸಾಗಿ ಹೋಗುತ್ತದೆ ಎಂದು ನಿರ್ಧರಿಸಲಾಗಿದೆ. ಆದ್ದರಿಂದ ಭಾರತದ ಸಾಗರ ನಮ್ಮ ಸರಕಾರದ ನೀತಿಗಳಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ಧೋರಣೆ ನಮ್ಮ ದೂರದರ್ಶಿತ್ವ ಯೋಜನೆಗಳಲ್ಲಿ, ಚಿಂತನೆಗಳಲ್ಲಿ ಪ್ರತಿಫಲಿಸಿದೆ. ನಾನು ಇದನ್ನು ಸಾಗರ ಎಂದು ವಿಶೇಷ ಹೆಸರಿನಿಂದ ಕರೆಯುತ್ತೇನೆ. ಸಾಗರ ಎಂದರೆ ಎಲ್ಲಾ ಕಾರಣಗಳಿಂದಲೂ ಭದ್ರತೆ ಮತ್ತು ಅಭಿವೃದ್ಧಿ. ಭಾರತೀಯ ಸಾಗರದಲ್ಲಿರುವ ಜಾಗತಿಕ , ವ್ಯೂಹಾತ್ಮಕ ಮತ್ತು ಆರ್ಥಿಕ ಹಿತಾಸಕ್ತಿಗಳ ಬಗ್ಗೆ ನಮಗೆ ಪೂರ್ಣ ಅರಿವು ಮತ್ತು ಎಚ್ಚರವಿದೆ. ಮತ್ತು ಅದರಿಂದಾಗಿಯೇ ಬಹು ಆಯಾಮದ ಭಾರತೀಯ ನೌಕಾಪಡೆ ಇಡೀಯ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯಲ್ಲಿ ಮುಂಚೂಣಿ ನಾಯಕತ್ವವನ್ನು ವಹಿಸಿದೆ. ಭಾರತದ ರಾಜಕೀಯ ಮತ್ತು ಆರ್ಥಿಕ ಸಾಗರ ಸಹಭಾಗಿತ್ವ ಹೆಚ್ಚುತ್ತಿದೆ ಮತ್ತು ಪ್ರಾದೇಶಿಕ ಜಾಲ ಬಲಗೊಳ್ಳುತ್ತಿದೆ, ಇದರ ಮೂಲಕ ಗುರಿಯನ್ನು ಸಾಧಿಸುವುದು ಸುಲಭವಾಗಲಿದೆ.
ಸ್ನೇಹಿತರೇ, ಸಾಗರದಲ್ಲಿರುವ ಶಕ್ತಿ ನಮಗೆ ರಾಷ್ಟ್ರ ನಿರ್ಮಾಣಕ್ಕೆ ಆರ್ಥಿಕ ಶಕ್ತಿಯನ್ನು ಒದಗಿಸುತ್ತಿದೆ. ಮತ್ತು ಆದ್ದರಿಂದ ಭಾರತವು ತಾನು ಮಾತ್ರವಲ್ಲ ಈ ವಲಯದ ಇತರ ದೇಶಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಂಭೀರವಾಗಿದೆ. ಅದು ಸಾಗರದ ಮೂಲಕ ಬರುವ ಭಯೋತ್ಪಾದನೆ ಇರಲಿ, ಅಥವಾ ಕಡಲುಗಳ್ಳತನದ ಸಮಸ್ಯೆ ಇರಲಿ, ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಸಮಸ್ಯೆ, ಇರಲಿ , ಈ ಎಲ್ಲಾ ಸವಾಲುಗಳನ್ನು ನಿಭಾಯಿಸುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಎಲ್ಲರ ಅಭಿವೃದ್ಧಿ ಮತ್ತು ಎಲ್ಲರ ಜತೆಗೆ ಅಭಿವೃದ್ಧಿ ಎಂಬ ನಮ್ಮ ಮಂತ್ರ ಜಲ , ವಾಯು ಮತ್ತು ನೆಲದಲ್ಲಿಯೂ ಒಂದೇ ಆಗಿದೆ.
ಇಡೀ ವಿಶ್ವ ಒಂದು ಕುಟುಂಬವೆಂದು ಭಾವಿಸಿ, ವಸುದೈವ ಕುಟುಂಬಕಂ ಎಂಬ ಸ್ಪೂರ್ತಿಯಲ್ಲಿ ಮುಂದೆ ಸಾಗುವುದನ್ನು ಪರಿಗಣಿಸಿದರೆ, ಭಾರತವು ತನ್ನ ಜಾಗತಿಕ ಜವಾಬ್ದಾರಿಗಳನ್ನು ಸತತವಾಗಿ ನಿಭಾಯಿಸಿರುವುದು ಗಮನಕ್ಕೆ ಬರುತ್ತದೆ. ಭಾರತದ ಸಹವರ್ತಿ ದೇಶಗಳಿಗೆ ಅವುಗಳ ಸಂಕಷ್ಟದ ಸಮಯದಲ್ಲಿ ಭಾರತ ಎಲ್ಲರಿಗಿಂತ ಮೊದಲು ಸ್ಪಂದಿಸಿದೆ. ಮತ್ತು ಅದರಿಂದಾಗಿಯೇ ಶ್ರೀಲಂಕಾ ನೆರೆ ಪೀಡಿತವಾಗಿದ್ದಾಗ, ಭಾರತದ ನೌಕಾಪಡೆ ಅಲ್ಲಿಗೆ ಮೊದಲು ತಲುಪಿ ಸಹಾಯ ಹಸ್ತ ನೀಡಿತು. ಮಾಲ್ದೀವ್ಸ್ ನಲ್ಲಿ ನೀರಿನ ಸಮಸ್ಯೆ ತಲೆದೋರಿದಾಗ ಭಾರತದಿಂದ ಅಲ್ಲಿಗೆ ನೀರು ತುಂಬಿದ ಹಡಗುಗಳನ್ನು ಕಲುಹಿಸಲಾಯಿತು. ಬಾಂಗ್ಲಾದೇಶದಲ್ಲಿ ಚಂಡ ಮಾರುತ ತಲೆದೋರಿದಾಗ ಸಮುದ್ರ ಮಧ್ಯದಲ್ಲಿ ಸಿಕ್ಕಿ ಬಿದ್ದಿದ್ದ ಬಾಂಗ್ಲಾದೇಶೀಯರನ್ನು ಭಾರತೀಯ ನೌಕಾ ಪಡೆ ಪಾರು ಮಾಡಿತು. ಮಾನವೀಯ ನೆಲೆಯಲ್ಲಿ ಕಾರ್ಯಾಚರಿಸುವಾಗ ಭಾರತೀಯ ನೌಕಾ ಪಡೆ ಎಂದೂ ಹಿಂದೆ ಸರಿದಿಲ್ಲ. ಮ್ಯಾನ್ಮಾರಿನಲ್ಲಿ ತೂಫಾನ್ ಬಂದಾಗ ಆಗಲೂ ಅದು ಸಕಾಲದಲ್ಲಿ ಸಹಾಯಕ್ಕೆ ಧಾವಿಸಿತ್ತು. ಇದು ಮಾತ್ರವಲ್ಲ, ಭಾರತದ ನೌಕಾ ಪಡೆ ಯೆಮನ್ ಬಿಕ್ಕಟ್ಟಿನ ಸಂಧರ್ಭದಲ್ಲಿ ನಾಲ್ಕುವರೆ ಸಾವಿರಕ್ಕೂ ಅಧಿಕ ಭಾರತೀಯರನ್ನು ಅಲ್ಲಿಂದ ಪಾರು ಮಾಡಿತ್ತು. ಮತ್ತು ಅದು ಇತರ 48 ದೇಶಗಳ ಜನರನ್ನೂ ರಕ್ಷಿಸಿತ್ತು. ಭಾರತೀಯ ರಾಜತಾಂತ್ರಿಕತೆಯ ಮಾನವೀಯತೆಯ ಧೋರಣೆ ಮತ್ತು ಭಾರತೀಯ ಭದ್ರತಾ ವ್ಯವಸ್ಥೆ ಭಾರತದ ವಿಶೇಷ , ಇದು ನಮ್ಮ ವಿಶಿಷ್ಟತೆ.
ನನಗೆ ನೆನಪಿದೆ, ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ , ಭಾರತೀಯ ಸೇನೆ ಮತ್ತು ವಾಯುದಳಗಳು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. 700 ಕ್ಕೂ ಅಧಿಕ ವಿಮಾನಗಳು, ಸಾವಿರಾರು ಟನ್ ಪರಿಹಾರ ಸಾಮಗ್ರಿ, ಸಾವಿರಾರು ಭೂಕಂಪ ಸಂತ್ರಸ್ತರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರ , ನೂರಾರು ವಿದೇಶೀ ರಾಷ್ಟ್ರೀಯರನ್ನು ಪಾರು ಮಾಡಿದ ಸೌಜನ್ಯ ಭಾರತದ್ದು, ಅದು ಭಾರತದ ಸ್ವಭಾವ. ಭಾರತವು ಮಾನವೀಯತೆಗೆ ಸಂಬಂಧಿಸಿದ ಕೆಲಸವನ್ನು ಮಾಡದೆ ಹಿಂದುಳಿಯದು.
ಸ್ನೇಹಿತರೇ , ಸಮರ್ಥ ಮತ್ತು ಬಲಿಷ್ಟ ಭಾರತವೆಂದರೆ ಅದು ನಮಗಷ್ಟೇ ಸೀಮಿತವಾಗಿಲ್ಲ. ಅದಕ್ಕೆ ಇಡೀ ಮಾನವ ಕುಲದ ಪ್ರಾಮುಖ್ಯತೆ ಇದೆ. ನಾವು ಇಂದು ವಿಶ್ವದ ವಿವಿಧ ದೇಶಗಳ ಜತೆ ಭುಜಕ್ಕೆ ಭುಜ ಕೋಟ್ಟು ಕೆಲಸ ಮಾಡುತ್ತಿದ್ದೇವೆ. ಅವರ ಸೇನೆಗಳು ನಮ್ಮ ಸೇನೆಯ ಜತೆ ಅನುಭವ ಹಂಚಿಕೊಳ್ಳಲು ಉತ್ಸುಕವಾಗಿವೆ ಮತ್ತು ನಮ್ಮ ಸೇನೆಯ ಜತೆ ಸಂಯೋಜನೆಯನ್ನು ಹೆಚ್ಚಿಸಿಕೊಳ್ಳಲು ಉತ್ಸುಕವಾಗಿವೆ. ಕಳೆದ ವರ್ಷವೊಂದರಲ್ಲಿಯೇ 50 ದೇಶಗಳ ನೌಕಾದಳಗಳು ಅಂತಾರಾಷ್ಟ್ರೀಯ ಹಡಗುಗಳ ಪುನರ್ವಿಮರ್ಶೆಯಲ್ಲಿ ಪಾಲ್ಗೊಂಡಿದ್ದವು. ಆ ಸಂಧರ್ಭ ವಿಶಾಖಪಟ್ಟಣಂನಲ್ಲಿ ಏರ್ಪಟ್ಟ ಹಡಗುಗಳ ಭವ್ಯ ದೃಶ್ಯವನ್ನು ಯಾರೊಬ್ಬರೂ ಸುಲಭದಲ್ಲಿ ಮರೆಯಲಾರರು.
ಈ ವರ್ಷ ಭಾರತದ ನೌಕಾ ದಳ ಭಾರತದ ಸಾಗರದಲ್ಲಿ ತನ್ನ ಶೌರ್ಯ ದಿಂದಾಗಿ ಇಡೀ ವಿಶ್ವದ ಗಮನ ಸೆಳೆದಿದೆ. ಭಾರತದ ನೌಕಾದಳವು ಅಮೇರಿಕಾ ನೌಕಾದಳ ಮತ್ತು ಜಪಾನ್ ನೌಕಾದಳಗಳ ಜತೆ ಕಳೆದ ಜುಲೈಯಲ್ಲಿ ನಡೆಸಿದ ಮಲಬಾರ್ ಸಮರಾಭ್ಯಾಸದಲ್ಲಿ ಉತ್ತಮ ಸಾಧನೆ ತೋರಿದೆ. ಅದೇ ರೀತಿ ಭಾರತವು ವಿವಿಧ ತಿಂಗಳುಗಳಲ್ಲಿ ಆಸ್ಟ್ರೇಲಿಯಾ ನೌಕಾದಳ, ಸಿಂಗಾಪುರ, ಮ್ಯಾನ್ಮಾರ್, ಜಪಾನ್ ಮತ್ತು ಇಂಡೋನೇಶಿಯಾ ನೌಕಾದಳಗಳ ಜತೆಯೂ ಸಮರಾಭ್ಯಾಸ ನಡೆಸಿದೆ. ಶ್ರೀಲಂಕಾ, ರಶ್ಯಾ, ಅಮೇರಿಕಾ, ಬ್ರಿಟನ್, ಬಾಂಗ್ಲಾದೇಶ ಮತ್ತು ಸಿಂಗಾಪುರಗಳ ಜತೆ ಭಾರತದ ನೌಕಾದಳ ಜಂಟಿ ಸಮರಾಭ್ಯಾಸ ನಡೆಸಿದೆ.
ಸಹೋದರರೇ ಮತ್ತು ಸಹೋದರಿಯರೇ, ಈ ಇಡೀ ಚಿತ್ರಣ ಶಾಂತಿ ಮತ್ತು ಸ್ಥಿರತೆಯ ಹಾದಿಯಲ್ಲಿ ವಿಶ್ವದ ದೇಶಗಳು ಇಂದು ಭಾರತದ ಜತೆ ಬರಲು ಇಚ್ಚೆಯನ್ನು ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿರುವುದಕ್ಕೆ ಸಾಕ್ಷಿಯಂತಿದೆ.
ಸ್ನೇಹಿತರೇ, ದೇಶದ ಭದ್ರತೆಯ ಸವಾಲುಗಳ ಸ್ವರೂಪ ಬದಲಾಗಿರುವುದರ ಬಗ್ಗೆಯೂ ನಮಗೆ ಅರಿವಿದೆ. ನಾವು ಈ ಸವಾಲುಗಳನ್ನು ಎದುರಿಸುವುದಕ್ಕಾಗಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಸರ್ವ ಸನ್ನದ ಸ್ಥಿಯಲ್ಲಿರಿಸಲು , ಅದನ್ನು ಅಭಿವೃದ್ಧಿಪಡಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕ್ರಿಯಾಪರವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಕ್ಷಣಾ ಶಕ್ತಿಯ ಜತೆ ಆರ್ಥಿಕ ಶಕ್ತಿ, ತಾಂತ್ರಿಕ ಶಕ್ತಿ, ಅಂತಾರಾಷ್ಟ್ರೀಯ ಸಂಬಂಧಗಳ ಶಕ್ತಿ, ಸಾರ್ವಜನಿಕ ವಿಶ್ವಾಸದ ಶಕ್ತಿ ಮತ್ತು ದೇಶದ ಶಕ್ತಿ-ಇವುಗಳೆಲ್ಲದರ ನಡುವೆ ಸಮ್ಮಿಳಿತ ಇರಬೇಕಾಗಿದೆ. ಇದು ಇಂದಿನ ವರ್ತಮಾನ ಕಾಲದ ಆವಶ್ಯಕತೆ.
ಸಹೋದರರೇ ಮತ್ತು ಸಹೋದರಿಯರೇ, ಕಳೆದ ಮೂರು ವರ್ಷಗಳಲ್ಲಿ ರಕ್ಷಣೆ ಮತ್ತು ಭದ್ರತೆ ಸಂಬಂಧಿ ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆ ಆರಂಭಗೊಂಡಿದೆ. ಹಲವು ಹೊಸ ಆರಂಭಿಕ ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದೆಡೆ ನಾವು ಅವಶ್ಯಕ ಸರಕುಗಳ ವಿಷಯವನ್ನು ಕೈಗೆತ್ತಿಕೊಂಡು ಅದನ್ನು ಅದ್ಯತೆಯ ಮೇಲೆ ಪರಿಹರಿಸುತ್ತಿದ್ದರೆ, ಅದೇ ವೇಳೆ ದೇಶದಲ್ಲಿಯೇ ಅವಶ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕ್ರಿಯಾಪರವಾದ ಕಾರ್ಯಕ್ರಮ ಪಟ್ಟಿಯನ್ನು ತಯಾರಿಸಲಾಗಿದೆ. ಪರವಾನಗಿ ಪ್ರಕ್ರಿಯೆಯಿಂದ ಹಿಡಿದು ರಫ್ತು ಪ್ರಕ್ರಿಯೆವರೆಗೆ , ನಾವು ಪಾರದರ್ಶಕತೆ ಮತ್ತು ಸಮತೋಲಿತ ಸ್ಪರ್ಧೆಯನ್ನು ವ್ಯವಸ್ಥೆಯಲ್ಲಿ ತರುತ್ತಿದ್ದೇವೆ. ನಮ್ಮ ಸರಕಾರ ವಿದೇಶೀ ಹೂಡಿಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈಗ 49 % ವಿದೇಶೀ ಹೂಡಿಕೆಯನ್ನು ಸ್ವಯಂಚಾಲಿತ ಹಾದಿಯಲ್ಲಿ ಮಾಡಬಹುದು. ರಕ್ಷಣಾ ವಲಯದಲ್ಲಿಯ ಕೆಲವು ಭಾಗಗಳಲ್ಲಿ 100 % ವಿದೇಶೀ ನೇರ ಹೂಡಿಕೆಯ ಅವಕಾಶವನ್ನೂ ಈಗ ತೆರೆದಿಡಲಾಗಿದೆ. ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿ ನಾವು ಪ್ರಮುಖ ಬದಲಾವಣೆಗಳನ್ನು ತಂದಿದ್ದೇವೆ., ಅದರಿಂದ ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ಸಿಗುತ್ತಿದೆ. ಇದು ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತಿದೆ.
ಐ.ಎನ್.ಎಸ್. ಕಲ್ವರಿಯನ್ನು ನಿರ್ಮಿಸಲು 12 ಲಕ್ಷ ಮಾನವ ದಿನಗಳು ಬಳಕೆಯಾಗಿವೆ ಎಂದು ನನಗೆ ತಿಳಿಸಲಾಗಿದೆ. ಇದರ ನಿರ್ಮಾಣ ಅವಧಿಯಲ್ಲಿ ಭಾರತದ ಕಂಪೆನಿಗಳ ತಾಂತ್ರಿಕ ಸಾಮರ್ಥ್ಯ, ಭಾರತೀಯ ಕೈಗಾರಿಕೋದ್ಯಮ, ಸಣ್ಣ ಕೈಗಾರಿಕೆಗಳು, ಮತ್ತು ನಮ್ಮ ಇಂಜಿನಿಯರುಗಳು ಸಾಮರ್ಥ್ಯ ದೇಶಕ್ಕೆ ಪ್ರತಿಭೆಯ ಖಜಾನೆಯಾಗಿ ಒದಗಿ ಬಂದಿದೆ. ಈ ಕೌಶಲ್ಯ ಗುಂಪು ನಮಗೆ ಸಂಪತ್ತು ಇದ್ದಂತೆ, ಇದರಿಂದ ಮುಂದೆ ನಮ್ಮ ದೇಶಕ್ಕೆ ನಿರಂತರವಾಗಿ ಲಾಭವಾಗಲಿದೆ.
ಸ್ನೇಹಿತರೇ, ನಾವು ನಮ್ಮ ರಕ್ಷಣಾ ರಫ್ತು ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದೇವೆ. ಇದರಿಂದ ಭಾರತೀಯ ಕಂಪೆನಿಗಳು ರಕ್ಷಣಾ ವಲಯದ ಉತ್ಪನ್ನಗಳನ್ನು ನಿರ್ಮಿಸಬಹುದು ಮತ್ತು ಅವುಗಳನ್ನು ವಿಶ್ವದಾದ್ಯಂತ ರಫ್ತು ಮಾಡಬಹುದು. ಸುಮಾರು 150 ವಸ್ತುಗಳ ಪಟ್ಟಿಯನ್ನು ರೂಪಿಸಲಾಗಿದ್ದು, ಇದರಿಂದ ನಮ್ಮ ರಕ್ಷಣಾ ಪಡೆಗಳು ಇಲ್ಲಿ ತಯಾರಾದ ರಕ್ಷಣಾ ಉತ್ಪಾದನೆಗಳನ್ನು ಸುಲಭದಲ್ಲಿ ಖರೀದಿಸಬಹುದು. ಮಿಲಿಟರಿ ಪಡೆಗಳಿಗೆ ಇದಕ್ಕಾಗಿ ಯುದ್ದೋಪಕರಣಗಳ ಕಾರ್ಖಾನೆಗಳ ಅನುಮತಿ ಪಡೆಯಬೇಕಿಲ್ಲ ಮತ್ತು ಅವುಗಳು ಖಾಸಗಿ ಕಂಪೆನಿಗಳಿಂದ ನೇರವಾಗಿ ಖರೀದಿ ಮಾಡಬಹುದು.
ರಕ್ಷಣಾ ವಲಯದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು, ಸರಕಾರವು ವ್ಯೂಹಾತ್ಮಕ ಪಾಲುದಾರಿಕೆ ಮಾದರಿಯನ್ನು ಭಾರತದ ಖಾಸಗಿ ವಲಯದೊಂದಿಗೆ ಜಾರಿಗೆ ತಂದಿದೆ.ವಿದೇಶಗಳಲ್ಲಿ ಇರುವಂತೆ , ಭಾರತೀಯ ಕಂಪೆನಿಗಳೂ ಯುದ್ದ ವಿಮಾನಗಳಿಂದ ಹಿಡಿದು ಹೆಲಿಕಾಪ್ಟರುಗಳವರೆಗೆ ಮತ್ತು ಯುದ್ಧ ಟ್ಯಾಂಕುಗಳಿಂದ ಹಿಡಿದು ಸಬ್ ಮರೀನ್ ಗಳವರೆಗೆ ನಮ್ಮ ದೇಶದಲ್ಲಿಯೇ ತಯಾರಿಸುವಂತಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಈ ವ್ಯೂಹಾತ್ಮಕ ಪಾಲುದಾರರು ಭವಿಷ್ಯದಲ್ಲಿ ಭಾರತೀಯ ರಕ್ಷಣಾ ಕೈಗಾರಿಕೆಯನ್ನು ಇನ್ನಷ್ಟು ಬಲಪಡಿಸುತ್ತಾರೆ.
ಸರಕಾರವು ರಕ್ಷಣಾ ಸಂಬಂಧಿ ಸಲಕರಣೆಗಳ ಖರೀದಿಯನ್ನು ತ್ವರಿತಗೊಳಿಸಲು ಹಲವಾರು ನೀತಿ ನಿರ್ಧಾರಗಳನ್ನು ಕೈಗೊಂಡಿದೆ. ರಕ್ಷಣೆ ಮತ್ತು ಸೇವೆಗಳ ಮಂತ್ರಾಲಯದ ಕೇಂದ್ರ ಕಚೇರಿಯ ಮಟ್ಟದಲ್ಲಿ ಹಣಕಾಸು ಅಧಿಕಾರವನ್ನು ಹೆಚ್ಚಿಸಲಾಗಿದೆ. ಇಡೀ ಪ್ರಕ್ರಿಯೆಯನ್ನು ಹೆಚ್ಚು ಸರಳ ಮತ್ತು ಕ್ರಿಯಾಶೀಲಗೊಳಿಸಲಾಗಿದೆ. ಈ ಪ್ರಮುಖ ಸುಧಾರಣೆಗಳೊಂದಿಗೆ ನಮ್ಮ ರಕ್ಷಣಾ ವ್ಯವಸ್ಥೆಯ ಬಲ ಮತ್ತು ದೇಶದ ಪಡೆಗಳ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ.
ಸಹೋದರರೇ ಮತ್ತು ಸಹೋದರಿಯರೇ, ನಮ್ಮ ಸರಕಾರದ ಭದ್ರತಾ ನೀತಿ ಹೊರವಲಯದಲ್ಲಿ ಪರಿಣಾಮವನ್ನುಂಟು ಮಾಡುತ್ತಿರುವುದು ಮಾತ್ರವಲ್ಲ, ದೇಶದ ಆಂತರಿಕ ಭದ್ರತೆಯ ಮೇಲೂ ಪರಿಣಾಮ ಬೀರುತ್ತಿದೆ. ನಿಮಗೆಲ್ಲಾ ಗೊತ್ತಿದೆ, ಭಯೋತ್ಪಾದನೆಯನ್ನು ಭಾರತದ ವಿರುದ್ದ ಪ್ರಾತಿನಿದ್ಯ ಸಮರದಂತೆ ಹೇಗೆ ಬಳಸಲಾಗುತ್ತಿದೆ ಎಂಬುದು. ಇಂದು ನಮ್ಮ ಸರಕಾರದ ನೀತಿಗಳು ಮತ್ತು ನಮ್ಮ ಸೈನಿಕರ ಧೀರತ್ವ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಹ ಶಕ್ತಿಗಳಿಗೆ ಅವಕಾಶ ಕೊಡಲಿಲ್ಲ.ಈ ವರ್ಷದಲ್ಲಿ ಇದುವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 200 ಕ್ಕೂ ಅಧಿಕ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಅಲ್ಲಿ ಕಲ್ಲು ತೂರಾಟದ ಘಟನೆಗಳ ಸಂಖ್ಯೆಯಲ್ಲೂ ಗಮನಾರ್ಹ ಇಳಿಕೆಯಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಕೂಡಾ ಪರಿಸ್ಥಿತಿಯಲ್ಲಿ ಗಮನೀಯ ಸುಧಾರಣೆಗಳು ಆಗಿವೆ. ನಕ್ಸಲ್-ಮಾವೋವಾದಿಗಳ ಹಿಂಸಾಚಾರದಲ್ಲಿ ಇಳಿಕೆಯಾಗಿದೆ. ಇದರ ಅರ್ಥ ಈ ಪ್ರದೇಶಗಳ ಹೆಚ್ಚು ಹೆಚ್ಚು ಜನರು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂಬುದಾಗಿದೆ. ಈ ಸಂಧರ್ಭದಲ್ಲಿ ಇಂದು ನಾನು ದೇಶದ ಭದ್ರತೆಗಾಗಿ ತಮ್ಮ ಪ್ರಾಣತ್ಯಾಗ ಮಾಡಿದವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ರಾಜ್ಯ ಪೊಲೀಸ್ ಪಡೆಗಳು, ಅರೆ ಸೈನಿಕ ಪಡೆಗಳು, ನಮ್ಮ ಮಿಲಿಟರಿ, ಭದ್ರತೆಯಲ್ಲಿ ತೊಡಗಿರುವ ಎಲ್ಲಾ ಏಜೆನ್ಸಿಗಳು ಮತ್ತು ಇದರಲ್ಲಿ ರಹಸ್ಯವಾಗಿ ತೊಡಗಿಕೊಂಡಿರುವವರಿಗೆ, ಈ ದೇಶದ 1.25 ಬಿಲಿಯನ್ ಜನರು ಕೃತಜ್ಞರಾಗಿರುತ್ತಾರೆ. ಅವರನ್ನು ನಾನು ಅಭಿನಂದಿಸುತ್ತೇನೆ, ನಾನು ಅವರಿಗೆ ಧನ್ಯವಾದ ಹೇಳುತ್ತೇನೆ.
ಸ್ನೇಹಿತರೇ, ದೇಶದ ಶಕ್ತಿ, ನಮ್ಮ ಭದ್ರತಾ ಪಡೆಗಳನ್ನು ಅವಲಂಬಿಸಿರುತ್ತದೆ. ಮತ್ತು ಆದ್ದರಿಂದ ಭದ್ರತಾ ಪಡೆಗಳ ಆವಶ್ಯಕತೆಯನ್ನು ಅವಲಂಬಿಸಿ, ಅವರಿಗಾಗಿ ಯಾವುದೇ ವಿಳಂಬ ಇಲ್ಲದೆ ನಿರ್ಧಾರಗಳನ್ನು ಕೈಗೊಳ್ಳುವುದರ ಜತೆಗೆ ಅವರ ಜತೆ ನಿಲ್ಲುವುದು ಈ ಸರಕಾರದ ಆದ್ಯತೆಯಾಗಿದೆ. ಮತ್ತು ಅದು ಈ ಸರಕಾರದ ಸ್ವಭಾವವೂ ಆಗಿದೆ. ಇದು ನಮ್ಮದೇ ಆದ ಬದ್ಧತೆ. ಅದರಿಂದಾಗಿ ಒಂದು ಹುದ್ದೆ ಒಂದು ನಿವೃತ್ತಿ ವೇತನ ಜಾರಿಗೆ ಬಂದಿತು, ಅದು ಹಲವು ದಶಕಗಳಿಂದ ಬಾಕಿ ಉಳಿದಿತ್ತು. ಅದನ್ನು ಈಗ ಈಡೇರಿಸಲಾಗಿದೆ. ಇದುವರೆಗೆ ಸುಮಾರು 11 ಸಾವಿರ ಕೋಟಿ ರೂ.ಗಳನ್ನು 20 ಲಕ್ಷಕ್ಕೂ ಅಧಿಕ ನಿವೃತ್ತ ಸೇನಾ ಸಿಬಂದಿಗಳಿಗೆ ಬಾಕಿ ಪಾವತಿ ಮಾಡಲಾಗಿದೆ.
ಸಹೋದರರೇ ಮತ್ತು ಸಹೋದರಿಯರೇ, ಈ ಸಂಧರ್ಭದಲ್ಲಿ , ನಾನು ಭಾರತದ ನೌಕಾದಳದ ಅತ್ಯಂತ ಧೈರ್ಯ ಶಾಲೀ ಅಧಿಕಾರಿಗಳನ್ನು ಸ್ಮರಿಸಲು ಇಚ್ಚಿಸುತ್ತೇನೆ. ಇವರು ಸಾಗರ ಕ್ರಾಂತಿಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದವರು. ಅವರನ್ನು ನಾನು ಗೌರವಿಸಲು ಬಯಸುತ್ತೇನೆ. ರಕ್ಷಣಾ ಸಚಿವರಾದ ಶ್ರೀಮತಿ ನಿರ್ಮಲಾ ಜೀ ಅವರ ಪ್ರೇರಣೆಯೊಂದಿಗೆ, ಮತ್ತು ಭಾರತದ ಮಹಿಳಾ ಶಕ್ತಿಯ ಸಂದೇಶದೊಂದಿಗೆ , ಭಾರೀ ಧೈರ್ಯದೊಂದಿಗೆ ಈ ಧೀರ ಹೃದಯಗಳು ಮುಂದುವರಿಯುತ್ತಿವೆ.
ಸ್ನೇಹಿತರೇ, ಭೂಮಿಯಲ್ಲಿ , ಸಾಗರದಲ್ಲಿ ಮತ್ತು ಗಗನದಲ್ಲಿ ಭಾರತದ ಅದ್ಭುತ ಸಾಮರ್ಥ್ಯಗಳನ್ನು ನಿಭಾಯಿಸುತ್ತಿರುವವರು ನೀವು. ಇಂದು ಐ.ಎನ್.ಎಸ್. ಕಲ್ವರಿ ಜತೆಗೆ ಹೊಸ ಪ್ರಯಾಣ ಆರಂಭಗೊಳ್ಳುತ್ತಿದೆ.
ಸಮುದ್ರ ದೇವರು ನಿಮ್ಮನ್ನು ಶಕ್ತಿವಂತರನ್ನಾಗಿಟ್ಟಿರಲಿ, ಸುರಕ್ಷಿತವಾಗಿಟ್ಟಿರಲಿ. ಈ ಹಾರೈಕೆಯೊಂದಿಗೆ ನಾನು ನಿಮಗೆ ವಂದಿಸುತ್ತೇವೆ, ಶುಭಾಶಯಗಳೊಂದಿಗೆ . ನಾನು ನಿಮ್ಮೆಲ್ಲರನ್ನು ಸ್ವರ್ಣ ಮಹೋತ್ಸವ ವರ್ಷ ಪ್ರವೇಶದ ಈ ಸಂಧರ್ಭದಲ್ಲಿ ಅಭಿನಂದಿಸುವ ಮೂಲಕ ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.
ಬಹಳ, ಬಹಳ ಧನ್ಯವಾದಗಳು.
ಭಾರತ ಮಾತೆಗೆ ಜಯವಾಗಲಿ.
*****
आज सवा सौ करोड़ भारतीयों के लिए बहुत गौरव का दिन है। मैं सभी देशवासियों को इस ऐतिहासिक उपलब्धि पर बहुत-बहुत बधाई देता हूं: PM @narendramodi
— PMO India (@PMOIndia) December 14, 2017
INS कलवरी पनडुब्बी को राष्ट्र को समर्पित करना, मेरे लिए बहुत सौभाग्य की बात है। मैं देश की जनता की तरफ से भारतीय नौसेना को भी बहुत-बहुत शुभकामनाएं अर्पित करता हूं: PM @narendramodi
— PMO India (@PMOIndia) December 14, 2017
ये 'Make In India' का उत्तम उदाहरण है। मैं कलवरी के निर्माण से जुड़े हर श्रमिक, हर कर्मचारी का भी हार्दिक अभिनंदन करता हूं: PM @narendramodi
— PMO India (@PMOIndia) December 14, 2017
कलवरी के निर्माण में सहयोग के लिए मैं फ्रांस को भी धन्यवाद देता हूं। ये पनडुब्बी भारत और फ्रांस की तेजी से बढ़ती स्ट्रैटेजिक पार्टनरशिप का भी एक उत्कृष्ट उदाहरण है: PM @narendramodi
— PMO India (@PMOIndia) December 14, 2017
कलवरी की शक्ति, या कहें टाइगर शार्क की शक्ति हमारी भारतीय नौसेना को और मजबूत करेगी: PM @narendramodi
— PMO India (@PMOIndia) December 14, 2017
कहा जाता है कि 21वीं सदी एशिया की है। ये भी तय है कि 21वीं सदी के विकास का रास्ता हिंद महासागर से होकर ही जाएगा। इसलिए हिंद महासागर की हमारी सरकार की नीतियों में विशेष जगह है। ये अप्रोच, हमारे विजन में झलकती है: PM @narendramodi
— PMO India (@PMOIndia) December 14, 2017
मैं इसे एक स्पेशल नाम से बुलाता हूं- S. A. G. A. R.- “सागर” यानि सेक्योरिटी एंड ग्रोथ फॉर ऑल इन द रीजन: PM @narendramodi
— PMO India (@PMOIndia) December 14, 2017
हम हिंद महासागर में अपने वैश्विक, सामरिक और आर्थिक हितों को लेकर पूरी तरह सजग हैं, सतर्क हैं। इसलिए भारत की Modern और Multi-Dimentional नौसेना पूरे क्षेत्र में शांति के लिए, स्थायित्व के लिए आगे बढकर नेतृत्व करती है: PM @narendramodi
— PMO India (@PMOIndia) December 14, 2017
जिस तरह भारत की राजनीतिक और आर्थिक Maritime Partnership बढ़ रही है, क्षेत्रीय Framework को मजबूत किया जा रहा है, उससे इस लक्ष्य की प्राप्ति और आसान होती है: PM @narendramodi
— PMO India (@PMOIndia) December 14, 2017
समुद्र में निहित शक्तियां हमें राष्ट्र निर्माँण के लिए आर्थिक ताकत प्रदान करती हैं। इसलिए भारत उन चुनौतियों को लेकर भी गंभीर है, जिनका सामना भारत ही नहीं बल्कि इस क्षेत्र के अलग-अलग देशों को करना पड़ता है: PM @narendramodi
— PMO India (@PMOIndia) December 14, 2017
चाहे समुद्र के रास्ते आने वाला आतंकवाद हो, Piracy की समस्या हो, ड्रग्स की तस्करी हो या फिर अवैध फिशिंग, भारत इन सभी चुनौतियों से निपटने में महत्वपूर्ण भूमिका निभा रहा है: PM @narendramodi
— PMO India (@PMOIndia) December 14, 2017
सबका साथ-सबका विकास का हमारा मंत्र जल-थल-नभ में एक समान है। पूरे विश्व को एक परिवार मानते हुए, भारत अपने वैश्विक उत्तरदायित्वों को लगातार निभा रहा है। भारत अपने साथी देशों के लिए उनके संकट के समय first responder बना है: PM @narendramodi
— PMO India (@PMOIndia) December 14, 2017
भारतीय डिप्लोमैसी और भारतीय सुरक्षा तंत्र का मानवीय पहलू हमारी विशिष्ठता है...समर्थ और सशक्त भारत सिर्फ़ अपने लिए नहीं संपूर्ण मानवता के लिए एक महत्वपूर्ण भूमिका रखता है: PM @narendramodi
— PMO India (@PMOIndia) December 14, 2017
दुनिया के देश, शांति और स्थायित्व के मार्ग में भारत के साथ चलना चाहते हैं: PM @narendramodi
— PMO India (@PMOIndia) December 14, 2017
पिछले तीन साल में रक्षा और सुरक्षा से जुड़े पूरे eco system में बदलाव की शुरुआत हुई है: PM @narendramodi
— PMO India (@PMOIndia) December 14, 2017
INS कलवरी के निर्माण में लगभग 12 लाख Mandays लगे हैं। इसके निर्माण के दौरान जो तकनीकि दक्षता भारतीय कंपनियों को, भारतीय उद्योगों को, छोटे उद्यमियों को, हमारे इंजीनियरों को मिली है, वो देश के लिए एक तरह से “Talent Treasure” है। ये SkillSet हमारे लिए एक asset है: PM @narendramodi
— PMO India (@PMOIndia) December 14, 2017
हमारी सरकार की सुरक्षा नीतियों का अनुकूल प्रभाव बाहरी ही नहीं बल्कि देश की आंतरिक सुरक्षा पर भी पड़ा है। आप सभी जानते हैं कि किस प्रकार आतंकवाद को भारत के खिलाफ एक प्रॉक्सी वॉर के रूप में इस्तेमाल किया जा रहा है: PM @narendramodi
— PMO India (@PMOIndia) December 14, 2017
सरकार की नीतियों और हमारे सैनिकों की वीरता का परिणाम है कि जम्मू-कश्मीर में हमने ऐसी ताकतों को सफल नहीं होने दिया। जम्मू-कश्मीर में इस साल अब तक 200 से ज्यादा आतंकी, जम्मू-कश्मीर पुलिस और सुरक्षाबलों के सहयोग से मारे जा चुके हैं। पत्थरबाजी की घटनाओं में भी काफी कमी आई है: PM
— PMO India (@PMOIndia) December 14, 2017
इस अवसर पर हर उस व्यक्ति का आभार व्यक्त करता हूं जिसने देश की सुरक्षा में अपना जीवन समर्पित कर दिया है। राज्यों के पुलिस बल, अर्ध सैनिक बल, हमारी सेनाएं, सुरक्षा में लगी हर वो एजेंसी जो दिखती है, हर वो एजेंसी जो नहीं दिखती है, उनके प्रति इस देश के सवा सौ करोड़ लोग कृतज्ञ हैं: PM
— PMO India (@PMOIndia) December 14, 2017
ये हमारा ही कमिटमेंट था जिसके कारण कई दशकों से लंबित 'One Rank One Pension' का वायदा हकीक़त में बदल चुका है: PM @narendramodi
— PMO India (@PMOIndia) December 14, 2017
आज INS कलवरी के साथ एक नए सफर की शुरुआत हो रही है। समुद्र देव आपको सशक्त रखें, सुरक्षित रखें: PM @narendramodi
— PMO India (@PMOIndia) December 14, 2017