Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡ ಪ್ರಧಾನಮಂತ್ರಿ;500 ಕೋಟಿ ರೂಪಾಯಿಗಳ ತತ್ ಕ್ಷಣದ ಪರಿಹಾರ ಘೋಷಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡರು; ಪುರ್ನಿಯಾದಲ್ಲಿ ರಾಜ್ಯದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಶ್ರೀ ಸುಶೀಲ್ ಮೋದಿ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಪರಿಹಾರ, ಪುನರ್ವಸತಿ ಮತ್ತು ಪರಿಹಾರ ಕ್ರಮಗಳ ಬಗ್ಗೆ ಸವಿವರವಾದ ಮಾಹಿತಿ ಪಡೆದರು. ತತ್ ಕ್ಷಣದ ಪರಿಹಾರವಾಗಿ 500 ಕೋಟಿ ರೂಪಾಯಿಗಳನ್ನು ಪ್ರಕಟಿಸಿದ ಪ್ರಧಾನಮಂತ್ರಿಯವರು, ಎಲ್ಲ ಸಾಧ್ಯ ನೆರವು ಒದಗಿಸುವ ಭರವಸೆಯನ್ನೂ ನೀಡಿದರು. ಶೀಘ್ರವೇ ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಲಿದ್ದು, ಆಗಿರುವ ಹಾನಿ ಮತ್ತು ಪರಿಹಾರದ ಅಧ್ಯಯನ ನಡೆಸಲಿದೆ ಎಂದೂ ಪ್ರಧಾನಿ ತಿಳಿಸಿದರು. ರೈತರು ಸಲ್ಲಿಸಿರುವ ಬೆಳೆ ವಿಮೆ ಪರಿಹಾರದ ಕ್ಲೇಮುಗಳನ್ನು ಇತ್ಯರ್ಥಪಡಿಸಲು ಕೂಡಲೇ ತಮ್ಮ ವೀಕ್ಷಕರನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸುವಂತೆ ವಿಮಾ ಕಂಪನಿಗಳಿಗೆ ನಿರ್ದೇಶಿಸಿದ ಪ್ರಧಾನಮಂತ್ರಿಯವರು, ಆದಷ್ಟು ಬೇಗ ರೈತರಿಗೆ ಪರಿಹಾರ ನೀಡುವಂತೆ ಸೂಚಿಸಿದರು. ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆಗಳ ದುರಸ್ತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ರಸ್ತೆ ಮತ್ತು ಭೂ ಸಾರಿಗೆ ಸಚಿವಾಲಯಕ್ಕೆ ನಿರ್ದೇಶನ ನೀಡಿದರು. ಪ್ರವಾಹದಿಂದ ಹಾನಿಯಾಗಿರುವ ವಿದ್ಯುತ್ ಮೂಲಸೌಕರ್ಯ ಪುನರ್ ಸ್ಥಾಪನೆಗೆ ಕೇಂದ್ರ ಸರ್ಕಾರ ಎಲ್ಲ ಸಾಧ್ಯ ನೆರವು ಒದಗಿಸಲಿದೆ ಎಂದೂ ಹೇಳಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ಒದಗಿಸಲಾಗುವುದುಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಮಂತ್ರಿ ಶ್ರೀ ಶೇರ್ ಬಹಾದ್ದೂರ್ ದೇವೂಬಾ ಅವರು ಸಪ್ತಕೋಶಿ ಹೈ ಡ್ಯಾಂ ಯೋಜನೆ ಮತ್ತು ಸುನ್ ಕೋಶಿ ಸಂಗ್ರಹ ಮತ್ತು ತಿರುವು ಯೋಜನೆ ಕುರಿತಂತೆ ವಿಸ್ತಾರ ಯೋಜನಾ ವರದಿಯನ್ನು ಶೀಘ್ರ ಸಿದ್ಧಪಡಿಸಲು ಒಪ್ಪಿಗೆ ನೀಡಿದ್ದು, ಎರಡೂ ದೇಶಗಳು ನೀರು ನಿಲುಗಡೆ ಮತ್ತು ಪ್ರವಾಹ ನಿಯಂತ್ರಣ ಸಹಕಾರ ಹೆಚ್ಚಿಸಲೂ ಸಮ್ಮತಿಸಿದ್ದು, ಇದು ಇಡೀ ವಲಯದಲ್ಲಿ ಪ್ರವಾಹ ನಿಯಂತ್ರಣಕ್ಕೆ ಇದು ಉತ್ತೇಜನ ನೀಡಲಿದೆ.

***

AKT- 170250