Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆ 2016ರಲ್ಲಿನ ಬದಲಾವಣೆಗಳಿಗೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಂಸತ್ತಿನಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆ 2016ಕ್ಕೆ ಅಧಿಕೃತ ತಿದ್ದುಪಡಿಗಳನ್ನು ಸೇರಿಸಲು ತನ್ನ ಅನುಮೋದನೆ ನೀಡಿದೆ.ತಿದ್ದುಪಡಿಗಳು ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ.  

 

ಸೇರ್ಪಡೆ ಆಗಲಿರುವ ಬದಲಾವಣೆಗಳು ಈ ಕೆಳಗಿನಂತಿವೆ:

 

(i)  ಬಂದರು ಪ್ರಾಧಿಕಾರ ಮಂಡಳಿಯಲ್ಲಿ ಬಂದರಿನಲ್ಲಿ ಸೇವಾ ನಿರತ ಸಿಬ್ಬಂದಿಯ ಪೈಕಿ ನೇಮಕಗೊಳ್ಳುವ ಕಾರ್ಮಿಕ ಪ್ರತಿನಿಧಿಗಳ ಸಂಖ್ಯೆಯನ್ನು ಒಂದರಿಂದ ಎರಡಕ್ಕೆ ಹೆಚ್ಚಿಸಲಾಗಿದೆ.

 

(ii)   ಸಿಬ್ಬಂದಿಯ ಹಿತವನ್ನು ಪ್ರತಿನಿಧಿಸುವ ಸದಸ್ಯರು ಮೂರು ವರ್ಷಗಳವರೆಗೆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಮತ್ತು ಅವರು ಆ ಹುದ್ದೆಯಲ್ಲಿ ಎರಡು ಸತತ ಅವಧಿಗಿಂತ ಹೆಚ್ಚು ಮುಂದುವರಿಯುವಂತಿಲ್ಲ ಹಾಗೂ ಅವರ ಮಂಡಳಿಯ ಸದಸ್ಯತ್ವವು ಸಹ ಅವರ ನಿವೃತ್ತಿಯೊಂದಿಗೆ ಅಂತ್ಯವಾಗುತ್ತದೆ.

 

(iii)  ಬಂದರು ಪ್ರಾಧಿಕಾರ ಮಂಡಳಿಯ ಸ್ವತಂತ್ರ ಸದಸ್ಯರ ಸಂಖ್ಯೆ ಕನಿಷ್ಠ ಎರಡು ಮತ್ತು ಗರಿಷ್ಠ ನಾಲ್ಕು ಆಗಿರುತ್ತದೆ.

 

(iv)  ಪ್ರಮುಖ ಬಂದರು ಟ್ರಸ್ಟ ಕಾಯಿದೆ 1963ರ ಅಡಿಯಲ್ಲಿ ಮಂಡಳಿಯ ಟ್ರಸ್ಟ್ ನಿಂದ ಯಾವುದೇ ನಿವೃತ್ತಿಯ ಸವಲತ್ತು ಪಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಅಂತಹ ದಿನಾಂಕಕ್ಕೆ ಮುಂಚೆಯೇ, ಮಂಡಳಿಯಿಂದ ಅದೇ ಪ್ರಯೋಜನವನ್ನು ಪಡೆಯುವುದು ಮುಂದುವರಿಯುತ್ತದೆ.

 

(v)ಪ್ರತಿಯೊಂದು ಪ್ರಮುಖ ಬಂದರು ಮಂಡಳಿಯು ಯಾವುದೇ ಅಭಿವೃದ್ಧಿ ಅಥವಾ ಮೂಲಭೂತ ಸೌಕರ್ಯವನ್ನು ರೂಪಿಸಲು ಅಥವಾ ಬಂದರಿನ ಮಿತಿಗಳೊಳಗೆ ಸ್ಥಾಪಿಸಬೇಕಾದ ಅಥವಾ ಪ್ರಸ್ತಾವನೆ ಮಾಡುವ ಉದ್ದೇಶದಿಂದ ನಿರ್ದಿಷ್ಟವಾದ ಮಾಸ್ಟರ್ ಯೋಜನೆಯನ್ನು ರೂಪಿಸುವ ಅಧಿಕಾರವನ್ನು ಹೊಂದಿರುತ್ತದೆ ಮತ್ತು ಅಂತಹ ಮಾಸ್ಟರ್ ಯೋಜನೆ ಯಾವುದೇ ರೀತಿಯ ಸ್ಥಳೀಯ ಅಥವಾ ರಾಜ್ಯ ಸರ್ಕಾರದ ನಿಯಂತ್ರಣಗಳಿಲ್ಲದೆ ಸ್ವತಂತ್ರವಾಗಿರುತ್ತದೆ. 

 

(vi)   ಕಾಯಿದೆಯ ಆರಂಭದ ತರುವಾಯ ಪಿಪಿಪಿ ಯೋಜನೆಗಳಿಗೆ, ರಿಯಾಯಿತಿ ನೀಡುವವರು ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ದರ ವಿಧಿಸಲು ಮುಕ್ತರಾಗಿರುತ್ತಾರೆ.

 

(vii)  ಈ ಕಾಯಿದೆಯ ನಿಬಂಧನೆಯಡಿಯಲ್ಲಿ ಮಂಡಳಿಯಿಂದ ಅಥವಾ ಅದರ ಪರವಾಗಿ ಸ್ವೀಕರಿಸಿದ ಎಲ್ಲಾ ಹಣವನ್ನು ಸಾಮಾನ್ಯ ಖಾತೆಗೆ ಅಥವಾ ಭಾರತದ ಸರ್ಕಾರ, ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಮಂಡಳಿಯು ಕಾಲ ಕಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಯಾವುದೇ ಷೆಡ್ಯೂಲ್ಡ್ ಬ್ಯಾಂಕ್ ನಲ್ಲಿ ತೆರೆಯುವ ಖಾತೆಗಳಲ್ಲಿ ಜಮಾ ಮಾಡಬಹುದಾಗಿರುತ್ತದೆ.

 

(viii) ತೀರ್ಮಾನ ತೆಗೆದುಕೊಳ್ಳುವ ಮಂಡಳಿಯ ಸದಸ್ಯರು ಮತ್ತು ಪ್ರಿಸೈಡಿಂಗ್ ಅಧಿಕಾರಿಯನ್ನು ಕೇಂದ್ರ ಸರ್ಕಾರವು ಆಯ್ಕೆ ಸಮಿತಿಯ ಶಿಫಾರಸಿನ ಮೇಲೆ ನೇಮಕ ಮಾಡುತ್ತದೆ.

 

(ix)  ತೀರ್ಮಾನ ಕೈಗೊಳ್ಳುವ ಮಂಡಳಿಯ ಯಾವುದೇ ಪ್ರಿಸೈಡಿಂಗ್ ಅಧಿಕಾರಿ ಅಥವಾ ಸದಸ್ಯರನ್ನು ಸೂಚಿತ ಮಾದರಿಯಲ್ಲಿ ಹುದ್ದೆಯಿಂದ ತೆಗೆದು ಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿರುತ್ತದೆ.

 

(x) ರದ್ದುಗೊಳಿಸುವ ಮತ್ತು ಉಳಿತಾಯದಡಿ ಉಳಿತಾಯದ ಷರತ್ತುಗಳನ್ನು ಇಡಲಾಗಿದ್ದು, 1879 ರ ಬಾಂಬೆ ಬಂದರು ಟ್ರಸ್ಟ್ ಕಾಯಿದೆ,1890 ರ ಕೋಲ್ಕತ್ತಾ ಬಂದರು ಟ್ರಸ್ಟ್ ಕಾಯಿದೆಅಡಿಯಲ್ಲಿ ಪುರಸಭೆಯ ಆಸ್ತಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮುಂಬೈ ಮತ್ತು ಕೊಲ್ಕತ್ತಾ ಬಂದರುಗಳು ಪಡೆದಿರುವ ಹಾಲಿ ಲಾಭಗಳು ಮುಂದುವರಿಯುತ್ತವೆ.