Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಇರಾನ್ ನಡುವೆ ವ್ಯಾಪಾರ ಸಮಸ್ಯೆ ಪರಿಹಾರಕ್ಕಾಗಿ ತಜ್ಞರ ತಂಡ ರಚನೆ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಇರಾನ್ ನಡುವೆ ವ್ಯಾಪಾರ ಸಮಸ್ಯೆ ಪರಿಹಾರಕ್ಕಾಗಿ ತಜ್ಞರ ತಂಡ ರಚನೆ ಕುರಿತ ತಿಳುವಳಿಕಾ ಒಡಂಬಡಿಕೆಗೆ ಪೂರ್ವಾನ್ವಯಗೊಂಡಂತೆ ಅಂಗೀಕಾರ ನೀಡಿತು. ಇದು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ವರ್ಧನೆಗ ಸಹಕಾರಿಯಾಗಲಿದೆ. ಈ ತಿಳುವಳಿಕಾ ಒಡಂಬಡಿಕೆಗೆ ಇರಾನ್ ಅಧ್ಯಕ್ಷರ ಭಾರತ ಭೇಟಿಯ ಸಂಧರ್ಭ, 2018 ರ ಫೆಬ್ರವರಿ 17 ರಂದು ಅಂಕಿತ ಹಾಕಲಾಗಿತ್ತು.

ಈ ತಿಳುವಳಿಕಾ ಒಡಂಬಡಿಕೆಯು ಉಭಯ ದೇಶಗಳ ನಡುವೆ ಮಾಹಿತಿ ವಿನಿಮಯ, ಸಾಮರ್ಥ್ಯ ವರ್ಧನೆ ಚಟುವಟಿಕೆಗಳನ್ನು ಉತ್ತೇಜಿಸಲಿದೆ , ಹಾಗು ಸರಕು ತಂದೆಸೆಯುವ ಚಟುವಟಿಕೆಗಳಿಗೆ ಸಂಬಂಧಿಸಿ ತನಿಖೆಯ ನಿಟ್ಟಿನಲ್ಲಿ ಸಹಕಾರ ಮತ್ತು ಸರಕುಗಳ ಮೇಲಿನ ಪೈಪೋಟಿಯನ್ನು ತಪ್ಪಿಸುವುದಕ್ಕಾಗಿ ಆಮದಿತ ಸರಕುಗಳ ಮೇಲೆ ಹಾಕಲಾಗುವ ತೆರಿಗೆ ಇತ್ಯಾದಿ ವ್ಯಾಪಾರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಲಿದೆ.