Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರೊಂದಿಗೆ ಪ್ರಧಾನಿ ಸಂವಾದ

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರೊಂದಿಗೆ ಪ್ರಧಾನಿ ಸಂವಾದ

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರೊಂದಿಗೆ ಪ್ರಧಾನಿ ಸಂವಾದ

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರೊಂದಿಗೆ ಪ್ರಧಾನಿ ಸಂವಾದ


 

ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿ ಸಂವಾದ ನಡೆಸಿದರು.

ಪ್ರಧಾನಮಂತ್ರಿಗಳು ಪದಕ ವಿಜೇತರನ್ನೆಲ್ಲ ಅಭಿನಂದಿಸಿದರು ಮತ್ತು ಪದಕಗಳನ್ನು ಜಯಿಸಲಾಗದಿದ್ದರೂ ಅತ್ಯುತ್ತಮ ಸಾಮರ್ಥ್ಯ ತೋರ್ಪಡಿಸಿದವರನ್ನು ಶ್ಲಾಘಿಸಿದರು.

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಅವರು, ಕ್ರೀಡಾಪಟುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಪದಕಗಳನ್ನು ಗೆದ್ದಾಗಲೂ ಭಾರತದ ಸ್ಥಾನಮಾನ ಮೇಲೇರುತ್ತಾ ಹೋಗಿದೆ ಎಂದು ಅವರು ತಿಳಿಸಿದರು. ಜಾಗತಿಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಯಾವಾಗ ಗೆಲುವು ಸಾಧಿಸಿದರೂ ಅಂತಹ ಸಂದರ್ಭಗಳಲ್ಲಿ ಭಾರತದ ತ್ರಿವರ್ಣಧ್ವಜ ಮೇಲೇರುತ್ತಾ ಹೋಗಿದೆ ಎಂದರು.

ಕ್ರೀಡಾಪಟುಗಳ ಜೀವಿತಾವಧಿ ಹಲವು ದಶಕಗಳ ಕಾಲ ಇರಲಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಮೇರಿಕೋಮ್ ಅವರ ಉದಾಹರಣೆಯನ್ನು ನೀಡಿದ ಅವರು, ಓರ್ವ ಸಂಸತ್ ಸದಸ್ಯೆಯಾಗಿ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ ಎಂದರು. ಪುಲೆಲಾ ಗೋಪಿಚಂದ್ ಅವರನ್ನು ಉದಾಹರಿಸುತ್ತಾ ಅವರು, ಒಬ್ಬ ಅದ್ಭುತ ಯಶಸ್ವಿ ಆಟಗಾರನಾಗಿ ವೃತ್ತಿ ಮುಗಿಸಿದ ನಂತರ ಹಲವು ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿ ಮತ್ತು ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕ್ರೀಡಾಪಟುಗಳಿಗೆ ಪ್ರತಿಭೆ ಮಾತ್ರವಲ್ಲದೆ, ತರಬೇತಿ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮ ಜತೆಗೆ ಮಾನಸಿಕ ದೃಢತೆ ಕೂಡ ಇಂದು ಅತ್ಯಗತ್ಯವಾಗಿದೆ ಎಂದ ಪ್ರಧಾನಿ ಯೋಗದಿಂದ ಆಗುವ ಪ್ರಯೋಜನಗಳನ್ನು ಉಲ್ಲೇಖಿಸಿದರು.

ಕ್ರೀಡಾಪಟುಗಳು, ತಮ್ಮ ಬಾಲ್ಯದಿಂದ ಮಾರ್ಗದರ್ಶನ ನೀಡಿದ ನಾನಾ ಗುರುಗಳು, ಮಾರ್ಗದರ್ಶಕರು ಮತ್ತು ಶಿಕ್ಷಕರನ್ನು ಸದಾ ನೆನಪಿಸಿಕೊಳ್ಳುತ್ತಾ ಅವರೊಂದಿಗೆ ಒಡನಾಟ ಹೊಂದಿರಬೇಕು ಎಂದು ಪ್ರಧಾನಿ ಕರೆ ನೀಡಿದರು.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ(ಸ್ವತಂತ್ರ ಹೊಣೆಗಾರಿಕೆ) ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.